“ ಮತ್ತೊಮ್ಮೆ ನಗಿಸುವೆ ರಾಜನ ಮಗುವೆ” : ಅಪ್ಪು ನೆನೆದು ಭಾವುಕರಾದ ಜಗ್ಗೇಶ್  

1 min read

 “ ಮತ್ತೊಮ್ಮೆ ನಗಿಸುವೆ ರಾಜನ ಮಗುವೆ” : ಅಪ್ಪು ನೆನೆದು ಭಾವುಕರಾದ ಜಗ್ಗೇಶ್

ಬೆಂಗಳೂರು ಸ್ಯಾಂಡಲ್ ವುಡ್ ನ ಯುವರತ್ನ ಪುನೀತ್ ರಾಜ್ ಕುಮಾರ್ ನಮ್ಮನ್ನೆಲ್ಲಾ ಅಗಲಿ ಸುಮಾರು 2 ತಿಂಗಳ ಮೇಲೆ ಆದ್ರೂ ಅವರ ನೆನಪು ಮಾತ್ರ ಅಭಿಮಾನಿಗಳು , ಕುಟುಂಬ , ಸ್ಯಾಂಡಲ್ ವುಡ್ ಸೆಲೆಬ್ರಿಟಿಗಳನ್ನ ಈಗಲೂ  ಕಾಡುತ್ತಿದೆ.. ಸೆಲೆಬ್ರಿಟಿಗಳು ಪುನೀತ್ ರಾಜ್ ಕುಮಾರ್ ಅವರನ್ನು ನೆನಯುತ್ತಾ ಅವರ ಆಗಾಗ ಸೋಷಿಯಲ್ ಮೀಡಿಯಾಗಳಲ್ಲಿ ಅವರ ನೆನಪನ್ನ ಹಂಚಿಕೊಂಡು ಭಾವುಕರಾಗುತ್ತಿರುತ್ತಾರೆ.. ಅಪ್ಪು ಅವರನ್ನ ಚಿಕ್ಕ ಬಾಲಕನಿದ್ದಾಗಿಂದಲೂ ನೋಡಿರುವ ನವರಸ ನಾಯಕ ಜಗ್ಗೇಶ್ ಅವರು ಇಂದು ಅಪ್ಪು ಜೊತೆಗಿನ ತಮ್ಮ ವಿಡಿಯೋ ಒಂದನ್ನು ಹಂಚಿಕೊಂಡಿದ್ದು ಭಾವುಕರಾಗಿದ್ದಾರೆ.

ಕೆಲ ವರ್ಷಗಳ ಹಿಂದೆ ರಿಲೀಸ್ ಆಗಿದ್ದ ಹೊಸಬರ ಸಿನಿಮಾದ ಹಾಡು ‘ಸಾಗುವ ದಾರಿಯಲ್ಲಿ’ ಆಡಿಯೋ ಲಾಂಚ್ ಕಾರ್ಯಕ್ರಮದಲ್ಲಿ ಅಪ್ಪು , ಜಗ್ಗೇಶ್ , ದೇವರಾಜ್  ಭಾಗಿಯಾಗಿದ್ದರು.. ಈ ವೇಳೆ ಜಗ್ಗೇಶ್ ಅವರ ಮಾತು ಕೇಳಿ ಪುನೀತ್ ರಾಜ್ ಕುಮಾರ್ ಬಿದ್ದು ಬಿದ್ದು ನಕ್ಕಿರುವ ವಿಡಿಯೋವನ್ನ ಹಂಚಿಕೊಂಡಿರುವ ಜಗ್ಗೇಶ್ ಅವರು  “ ಪುನೀತ್, ಈ ವೀಡಿಯೋ ನೋಡಿ ಈ ಸಾವು ನ್ಯಾಯವೆ ಅನ್ನಿಸಿತು. ನಿನ್ನ ನಗಿಸಿದ ಒಂದೊಂದು ದಿನ ಹಾಗೆ ಉಳಿಯಬಾರದೆ ಅನ್ನಿಸಿತು. ನಿನ್ನ ನಗುವು ಹೂವಂತೆ. ನಿನ್ನ ನುಡಿಯು ಹಾಡಂತೆ. ಮತ್ತೆ ಒಮ್ಮೆ ಸಿಗಬಾರದೆ ನಿನ್ನ ಸಾಂಗತ್ಯ. ಓ ಪುನೀತ ಎಷ್ಟುದೂರದಲ್ಲಿ ನೀನಿರುವೆ. ಸಣ್ಣಸುಳಿವು ನೀಡು ದೊರೆ, ಮತ್ತೊಮ್ಮೆ ನಗಿಸುವೆ ರಾಜನ ಮಗುವೆ” ಎಂದಿದ್ದಾರೆ ಜಗ್ಗೇಶ್. ಜಗ್ಗೇಶ್ ಅವರ ಟ್ವೀಟ್ ನೋಡಿ ಅಪ್ಪು ಅಭಿಮಾನಿಗಳು ಭಾವುಕರಾಗಿದ್ದಾರೆ..

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd