Puneeth Rajkumar : James : ವಿಶ್ವಾದ್ಯಂತ 4 ಸಾವಿರ ಸ್ಕ್ರೀನ್ ಗಳ ಮೇಲೆ ‘ಜೇಮ್ಸ್’ ಅಬ್ಬರ…!!!
ಬೆಂಗಳೂರು : ಕರ್ನಾಟಕದಲ್ಲಿ ಅಪ್ಪು ಅಭಿಮಾನಿಗಳು ಮಾರ್ಚ್ 17 ರಿಂದ ಜಾತ್ರೆ ಶುರುಮಾಡಲಿದ್ದಾರೆ. ಅಪ್ಪು ಹುಟ್ಟುಹಬ್ಬ ಒಂದೆಡೆಯಾದ್ರೆ , ಅವರ ಅಭಿನಯದ ಕೊನೆಯ ಸಿನಿಮಾ ಜೇಮ್ಸ್ ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ರಿಲೀಸ್ ಆಗಿ ಧೂಳೆಬ್ಬಿಸಲಿದೆ.
ವಿಶ್ವಾದ್ಯಂತ 15 ಕ್ಕೂ ಹೆಚ್ಚು ದೇಶಗಳಲ್ಲಿ ಪುನೀತ್ ರಾಜ್ ಕುಮಾರ್ ಅವರ ಜೇಮ್ಸ್ ಸಿನಿಮಾ ರಿಲೀಸ್ ಆಗ್ತಿದೆ.. ಅಂದ್ಹಾಗೆ ಈ ಸಿನಿಮಾ ಕನ್ನಡ , ತಮಿಳು , ತೆಲುಗು , ಮಲಯಾಳಂ , ಹಿಂದಿಯಲ್ಲಿ ರಿಲೀಸ್ ಆಗಲಿದೆ.. ಅದ್ಧೂರಿಯಾಗಿಯೇ ಸಿನಿಮಾ ರಿಲೀಸ್ ಮಾಡಲು ಚಿತ್ರತಂಡ ಪ್ಲಾನ್ ಮಾಡಿಕೊಂಡಿದೆ.. ಆದ್ರೀಗ ಮತ್ತೊಂದು ಸುದ್ದಿ ಅಭಿಮಾನಿಗಳ ಖುಷಿಯನ್ನ ಡಬಲ್ ಮಾಡಿದೆ.. ಅಅಂದ್ಹಾಗೆ ನಿರೀಕ್ಷೆಯಂತೆಯೇ ಇಡೀ ವಿಶ್ವಾದ್ಯಂತ ಜೇಮ್ಸ್ ಸಿನಿಮಾ ಸುಮಾರು 4000ಕ್ಕೂ ಹೆಚ್ಚು ಥಿಯೇಟರ್ ಗಳಲ್ಲಿ ರಿಲೀಸ್ ಆಗಲಿದೆ..
Rashmika : ಅದೃಷ್ಟಕ್ಕೆ ಕ್ವೀನ್ ಆಗಿದ್ದ ರಶ್ಮಿಕಾಗೆ ಮೊದಲ ಸೋಲು..!!
ಸಿನಿಮಾ ಥಿಯೇಟರ್ ಗಳ ಮುಂದೆ ಈಗಿನಿಂದಲೇ ಜೇಮ್ಸ್ ಪೋಸ್ಟರ್ ಗಳು ರಾರಾಜಿಸುತ್ತಿವೆ.. ಅಪ್ಪು ಕಟೌಟ್ ರೆಡಿಯಾಗ್ತಿದೆ.. ಅಭಿಮಾನಿಗಳು ಹಾಲಿನಾಭಿಷೇಕ ಮಾಡಿ ಪಟಾಕಿ ಸಿಡಿಸಿ ಸಂಭ್ರಮಿಸಲು ಸಜ್ಜಾಗ್ತಿದ್ಧಾರೆ.. ಆದ್ರೂ ಜೇಮ್ಸ್ ಸಿನಿಮಾದ ಯಾವೊಂದು ಅಪ್ ಡೇಟ್ಸ್ ಸಿಕ್ಕಿದ್ರೂ ಅಪ್ಪು ಅಭಿಮಾನಿಗಳು ಭಾವುಕರಾಗುತ್ತಾರೆ… ಜೇಮ್ಸ್ ಸಿನಿಮಾದ ಟೀಸರ್ ಇತ್ತೀಚೆಗಷ್ಟೇ ರಿಲೀಸ್ ಆಗಿ ಧೂಳೆಬ್ಬಿಸಿದೆ.. ಸಿನಿಮಾದ ಟೀಸರ್ ಗೆ ಭಾರತೀಯ ಮೂಲೆ ಮೂಲೆಯಿಂದ ಪ್ರೇಕ್ಷಕರ ಮೆಚ್ಚುಗೆ ಗಳಿಸಿದೆ.. ಅಂದ್ಹಾಗೆ ಇತ್ತೀಚೆಗೆ ರಿಲೀಸ್ ಆದ ಅಪ್ಪು ಅಭಿನಯದ ಟ್ರೇಡ್ ಮಾರ್ಕ್ ಹಾಡು ಸಹ ಭರ್ಜರಿ ಸೌಂಡ್ ಮಾಡಿದೆ.. ಜೇಮ್ಸ್ ಸಿನಿಮಾಗೆ ಸೆನ್ಸಾರ್ ಬೋರ್ಡ್ ನಿಂದ U/A ಸರ್ಟಿಫಿಕೇಟ್ ಸಹ ಸಿಕ್ಕಾಗಿದೆ. ಕರ್ನಾಟಕದಲ್ಲಿ 400ಕ್ಕೂಅಧಿಕ ಚಿತ್ರಮಂದಿರಗಳಲ್ಲಿ ಜೇಮ್ಸ್ ಬಿಡುಗಡೆಯಾಗಲಿದೆ.









