ದೇವರ ಪಾತ್ರದಲ್ಲಿ ಅಪ್ಪು ನೋಡಿ ಕಣ್ಣೀರಿಟ್ಟ ಫ್ಯಾನ್ಸ್…
ನಟ ಪುನೀತ್ ರಾಜ್ ಕುಮಾರ್ ಅಭಿನಯದ ಕೊನೆ ಚಿತ್ರ ಲ್ಕಕಿಮ್ಯಾನ್ ಇಂದು ರಿಲೀಸ್ ಆಗಿದೆ. ಪುನೀತ್ ರಾಜ್ ಕುಮಾರ್ ಮರಣದ ನಂತರ ಅಭಿಮಾನಿಗಳು ಅಪ್ಪು ಅವರನ್ನ ದೇವರಂತೆಯೇ ಕಾಣುತ್ತಾರೆಡ. ಈ ಚಿತ್ರದಲ್ಲೂ ಪುನೀತ್ ಪರಮಾತ್ಮನ ಪಾತ್ರದಲ್ಲಿ ನಟಿಸಿದ್ದಾರೆ.
ಡಾರ್ಲಿಂಗ್ ಕೃಷ್ಣ ಮತ್ತು ಸಂಗೀತಾ ಶೃಂಗೇರಿ ನಟನೆಯ ಲಕ್ಕಿಮ್ಯಾನ್ ಚಿತ್ರ ಇಂದು ಬಿಡುಗಡೆಯಾಗಿದ್ದು ಪುನೀತ್ ಅಭಿಮಾನಿಗಳಿಂದ ಭರ್ಜರಿ ರೆಸ್ಪಾನ್ಸ್ ಗಿಟ್ಟಿಸಿಕೊಳ್ಳುತ್ತಿದೆ. ದೇವರ ಪಾತ್ರದಲ್ಲಿ ಅಪ್ಪು ನೋಡಿದ ಅಭಿಮಾನಿಗಳು ಭಾವುಕರಾಗಿದ್ದಾರೆ. ಪುನೀತ್ ನಿಧನದ ಬಳಿಕ ಸಿನಿಮಾ ರಿಲೀಸ್ ಆಗಿರೋ ಹಿನ್ನಲೆ ದೇವರ ಪಾತ್ರ ಅವರಿಗೆ ತುಂಬಾ ಚೆನ್ನಾಗಿ ಹೊಂದಿಕೆ ಆಗುತ್ತಿದೆ. ಆ ಕಾರಣದಿಂದಾಗಿ ಪ್ರೇಕ್ಷಕರಿಗೆ ಈ ಚಿತ್ರ ಇನ್ನಷ್ಟು ಹತ್ತಿರವಾಗಿದೆ.
ಚಿತ್ರದ ಪ್ರಮೋಷನಲ್ ಹಾಡಿನಲ್ಲಿ ಪ್ರಭುದೇವ ಮತ್ತು ಪುನೀತ್ ರಾಜ್ಕುಮಾರ್ ಅವರು ಜೊತೆಯಾಗಿ ಡ್ಯಾನ್ಸ್ ಮಾಡಿದ್ದಾರೆ. ತೆರೆಮೇಲೆ ಅಪ್ಪು-ಪ್ರಭು ಡ್ಯಾನ್ಸ್ ಪ್ರೇಕ್ಷಕರು ಎಂಜಾಯ್ ಮಾಡಿದ್ದಾರೆ.
ಅಭಿಮಾನಿಗಳಿಗಾಗಿ ನಿನ್ನೆ ಪೇಯ್ಡ್ ಪ್ರೀಮಿಯರ್ ಶೋ ವ್ಯವಸ್ಥೆ ಮಾಡಲಾಗಿತ್ತು. ನಗರದ ವಿರೇಶ್ ಚಿತ್ರಮಂದಿರ ಮತ್ತು ಜಿಟಿ ಮಾಲ್ ನಲ್ಲಿ ಚಿತ್ರ ನೋಡಿ ಹೊರಬಂದ ಅಭಿಮಾನಿಗಳು ಕಂಬನಿ ಮಿಡಿದ್ದಾರೆ. ಚಿತ್ರವನ್ನ ವಿಕ್ಷಿಸಿದ ಅಭಿಮಾನಿಗಳು ಸಿನಿಮಾ ಮೆಚ್ಚಿಕೊಂಡಿದ್ದಾರೆ.