“ಸಲಾಂ ಸೋಲ್ಜರ್ ದೇಶಕ್ಕೆ ನೀನೇ ಪವರ್ “ ಜೇಮ್ಸ್ ಚಿತ್ರದ ಪೋಸ್ಟರ್ ರಿಲೀಸ್
ಪವರ್ ಸ್ಟಾರ್ ಪುನಿತ್ ರಾಜ್ ಕುಮಾರ್ ಅಭಿನಯದ ಕೊನೆಯ ಚಿತ್ರ ಜೇಮ್ಸ್ ಚಿತ್ರದ ಪೋಸ್ಟರರ ರಿಲೀಸ್ ಆಗಿದೆ, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಇಂಡಿಯನ್ ಆರ್ಮಿ ಪಾತ್ರದಲ್ಲಿ ರಗಡ್ ಆಗಿ ಕಾಣಿಸಿಕೊಂಡಿದ್ದಾರೆ.
ಗಣರಾಜ್ಯಯೋತ್ಸದ ಪ್ರಯುಕ್ತ ಜೇಮ್ಸ್ ಚಿತ್ರದ ವಿಶೇಷ ಪೋಸ್ಟರ್ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಹೇಳಿಕೊಂಡಿತ್ತು ಅದರಂತೆ ಪವರ್ ಫುಲ್ ಮಿಲಿಟರಿ ಪಾತ್ರದಲ್ಲಿ ಮೊದಲ ಭಾರಿ ಅಪ್ಪು ಕಾಣಿಸಿಕೊಂಡಿದ್ದಾರೆ ಆದರೆ ಇದು ಅಪ್ಪು ಕೊನೆಯ ಚಿತ್ರ ನ್ನುವುದು ದುಖಃಕರ ವಿಷಯ
ಪುನೀತ್ ರಾಜ್ ಕುಮಾರ್ ಅವರ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಇನ್ಸ್ಟಾ ಗ್ರಾಂ ಖಾತೆಯಲ್ಲಿ ಪೋಸ್ಟರ್ ಗಳನ್ನ ಅಪ್ಲೋಡ್ ಮಾಡಿದ್ದಾರೆ. ಪೋಸ್ಟರ್ ನಲ್ಲಿ ಸಲಾಂ ಸೋಲ್ಜರ್ ದೇಶಕ್ಕೆ ನೀನೇ ಪವರ್ ಅನ್ನು ಸಾಲುಗಳು ಎಲ್ಲರ ಗಮನ ಸಳೆಯುತ್ತವೆ. ಅಶ್ವಿನಿ ಅವರು ದೇಶದ ಜನರಿಗೆ ಗಣರಾಜ್ಯೋತ್ಸವ ಪ್ರಶಸ್ತಿ ಶುಭಾಶಯಗಳನ್ನ ತಿಳಿಸುತ್ತಾ ಪೋಸ್ಟರ್ ಹಂಚಿಕೊಂಡಿದ್ದಾರೆ.
puneeth rajlumar last movie james new poster released on republic day Breaking News -“ಸಲಾಂ ಸೋಲ್ಜರ್ ದೇಶಕ್ಕೆ ನೀನೇ ಪವರ್ “ ಜೇಮ್ಸ್ ಚಿತ್ರದ ಪೋಸ್ಟರ್ ರಿಲೀಸ್
ನಿರ್ದೇಶಕ ಚೇತನ್ ಕುಮಾರ್ ನಿರ್ದೇಶನ್ ಮಾಡುತ್ತಿರುವ ಪಕ್ಕಾ ಕಮರ್ಷಿಯಲ್ ಸಿನಿಮಾ ಇದಾಗಿದ್ದು ಸಿನಿಮಾ ಅಪ್ಪು ಹುಟ್ಟು ಹಬ್ಬದಂದು ಅಂದರೇ ಮಾರ್ಚ್ 18 ರಂದು ತೆರೆಗೆ ತರಬೇಕು ಎನ್ನುವುದು ಸಿನಿಮಾ ತಂಡದ ಪ್ಲಾನ್ .. ಚಿತ್ರದ ಶೂಟಿಂಗ್ ಕಂಪ್ಲೀಟ್ ಆಗಿದ್ದು ಒಂದು ಹಾಡು ಮತ್ತು ಕೆಲವು ದೃಶ್ಯಗಳನ್ನ ಗ್ರಾಫಿಕ್ಸ್ ಮಾಡಲಾಗಿದೆ.
ರಾಜ್ ಕುಮಾರ್ ಸಿನಿಮಾದಲ್ಲಿ ಹಿರೋಹಿನ್ ಆಗಿ ಕಾಣಿಸಿಕೊಂಡಿದ್ದ ಪ್ರಿಯಾ ಆನಂದ ಚಿತ್ರದಲ್ಲೂ ಅಪ್ಪು ಗೆ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ. ವಿಲನ್ ಆಗಿ ಶ್ರೀಕಾಂತ್ ಆದಿತ್ಯ ಮೆನನ್ ಹಾಗೂ ಅನು ಪ್ರಭಾಕರ್, ಮುಖೇಶ್ ರಿಷಿ ಸೇರಿದಂತೆ ಹಲವಾರು ಕಲಾವಿದರು ನಟಿಸಿದ್ದಾರೆ.
ಪುನೀತ್ ಅಭಿನಯದ ಕೊನೆಯ ಸಿನಿಮಾ ಜೇಮ್ಸ್ ಆಗಿದ್ದು, ಈಗಾಗಲೇ ಪ್ರೇಕ್ಷಕರು ಸಿನಿಮಾದ ಬಗ್ಗೆ ಸಾಕಷ್ಟು ನಿರೀಕ್ಷೆ ಹೊಂದಿದ್ದು, ಸಿನಿಮಾ ನೋಡಲು ಕಾತುರದಿಂದ ಕಾಯುತ್ತಿದ್ದಾರೆ.