ಇಂದು ರಾತ್ರಿ 11:30ಕ್ಕೆ ಪುನೀತ್ ಮಗಳು ಧೃತಿ ಆಗಮನ

1 min read

ಇಂದು ರಾತ್ರಿ 11:30ಕ್ಕೆ ಪುನೀತ್ ಮಗಳು ಧೃತಿ ಆಗಮನ

ಬೆಂಗಳೂರು : ಕನ್ನಡದ ನಟಸಾರ್ವಭೌಮ ಪುನೀತ್ ರಾಜ್ ಕುಮಾರ್ ಹೃದಯಾಘಾತದಿಂದ ಇಹಲೋಕ ತ್ಯಜಿಸಿದ್ದಾರೆ. ನಾಳೆ ಸಕಲ ಸರ್ಕಾರ ಗೌರವಗಳೊಂದಿಗೆ ಅವರ ಅಂತ್ಯಕ್ರಿಯೆ ನೆರವೇರಲಿದೆ.

ಈ ಮಧ್ಯೆ ಪುನೀತ್ ರಾಜ್ ಕುಮಾರ್ ಮಗಳು ಧೃತಿ ವಿದೇಶದಿಂದ ಆಗಮಿಸೋದು ಸ್ವಲ್ಪ ತಡವಾಗಲಿದೆ ಎಂದು ಹೇಳಲಾಗುತ್ತಿದೆ. ಧೃತಿ ಅವರು ಭಾರತೀಯ ಕಾಲಮಾನದ ಪ್ರಕಾರ ಸಂಜೆ 4ರಿಂದ 4:30ರೊಳಗೆ ಬೆಂಗಳೂರಿಗೆ ಆಗಮಿಸಬೇಕಾಗಿತ್ತು. ಆದರೆ, ಇದೀಗ ಅವರು ಸುಮಾರು 5-6 ಗಂಟೆಗಳ ಕಾಲ ತಡವಾಗಿ ಆಗಮಿಸುವ ಸಾಧ್ಯತೆ ಇದೆ. ಅಂದರೇ ರಾತ್ರಿ 11ರ ಬಳಿಕ ಬೆಂಗಳೂರಿಗೆ ಬರಲಿದ್ದಾರೆ. ಹೀಗಾಗಿ ಭಾನುವಾರ ನಡೆಯಲಿರುವ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಲಿದ್ದಾರೆ.

Puneet's saaksha tv

ಇನ್ನು ಅಪ್ಪು ನಿಧನದಿಂದಾಗಿ ಸ್ಯಾಂಡಲ್ ವುಡ್ ಮಾತ್ರವಲ್ಲದೇ ಬೇರೆ ಭಾಷೆಯ ಸಿನಿಮಾ ಇಂಡಸ್ಟ್ರೀ ಕೂಡ ಶಾಕ್ ಗೆ ಒಳಗಾಗಿದೆ. ತೆಲುಗು, ತಮಿಳು, ಮಲಿಯಾಲಂ ಸೇರಿದಂತೆ ವಿವಿಧ ರಾಜ್ಯಗಳ ಪ್ರಮುಖ ನಟರು, ಬೆಂಗಳೂರಿಗೆ ಆಗಮಿಸಿ ಪುನೀತ್ ರಾಜ್ ಕುಮಾರ್ ಅವರ ಅಂತಿಮ ದರ್ಶನ ಪಡೆಯಲಿದ್ದಾರೆ. ಇಂದು ದಿನ ಪೂರ್ತಿ ಅಪ್ಪು ಅಂತಿಮ ದರ್ಶನ ಇರಲಿದೆ.

ಕುಟುಂಬದವರು ಮತ್ತು ಸರ್ಕಾರದ ತೀರ್ಮಾನದಂತೆ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಡಾ. ರಾಜಕುಮಾರ್ ಮತ್ತು ಪಾರ್ವತಮ್ಮ ರಾಜಕುಮಾರ್ ಸಮಾಧಿಯ ಪಕ್ಕದಲ್ಲಿ ನಾಳೆ ಅಂತ್ಯಕ್ರಿಯೆ ನೆರವೇರಿಸಲಾಗುವುದು.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd