ಸಿಪಿಎಲ್ ನಲ್ಲೂ ಫ್ರಾಂಚೈಸಿ ಖರೀದಿಗೆ ಮುಂದಾದ ಪಂಜಾಬ್
ಸೇಂಟ್ ಲೂಸಿಯಾ ಜೂಕ್ಸ್ ಫ್ರಾಂಚೈಸಿ ಪಡೆಯಲಿದೆ ಪಂಜಾಬ್
ಡೆರೆನ್ ಸಮಿ ಮುನ್ನಡೆಸುತ್ತಿರುವ ಸೇಂಟ್ ಲೂಸಿಯಾ ಜೂಕ್ಸ್
ಐಪಿಎಲ್ ನ ಕಿಂಗ್ಸ್ ಇಲೆವೆನ್ ಪಂಜಾಬ್, ಕೆರಿಬಿಯನ್ ಪ್ರೀಮಿಯರ್ ಲೀಗ್ ಗೂ ಎಂಟ್ರಿ ಕೊಡುವುದಕ್ಕೆ ಸಜ್ಜಾಗಿದೆ. ಸಿಪಿಎಲ್ ನ ಸೇಂಟ್ ಲೂಸಿಯಾ ಜೂಕ್ಸ್ ತಂಡದ ಫ್ರಾಂಚೈಸಿ ಪಡೆದುಕೊಳ್ಳಲು ಪಂಜಾಬ್ ಮುಂದಾಗಿದೆ. ಈ ಬಗ್ಗೆ ಮಾತನಾಡಿರುವ ಕಿಂಗ್ಸ್ ಇಲೆವೆನ್ ಪಂಜಾನ್ ನ ಸಹ ಮಾಲೀಕರಾದ ನೆಸ್ ವಾಡಿಯಾ, ಸೇಂಟ್ ಲೂಸಿಯಾದ ಫ್ರಾಂಚೈಸಿಯನ್ನು ನಾವು ಕೊಂಡುಕೊಳ್ಳುತ್ತಿದ್ದು, ತಂಡದ ಹೆಸರು, ರೂಪುರೇಷೆಗಳು ಹೇಗಿರಬೇಕು ಅನ್ನೋದನ್ನ ಬಿಸಿಸಿಐನಿಂದ ಒಪ್ಪಿಗೆ ಸಿಕ್ಕ ಬಳಿಕ ಚರ್ಚೆ ನಡೆಸ್ತೇವೆ. ಈ ಅಗ್ರಿಮೆಂಟ್ ಗೆ ಸಹಿ ಮಾಡುವಾಗ ಇನ್ನೋರ್ವ ಸಹ ಮಾಲೀಕರಾದ ಮೋಹಿತ್ ಬರ್ಮನ್ ವೆಸ್ಟ್ ಇಂಡೀಸ್ ನಲ್ಲಿರಲಿದ್ದಾರೆ’ ಎಂದು ಹೇಳಿದ್ದಾರೆ.
ಒಂದು ವೇಳೆ ಸಿಪಿಎಲ್ ನಲ್ಲಿ ಪಂಜಾಬ್ ಫ್ರಾಂಚೈಸಿ ಪಡೆದುಕೊಂಡರೇ, ಸಿಪಿಎಲ್ ನಲ್ಲಿ ತಂಡ ಹೊಂದಿರುವ ಎರಡನೇ ಐಪಿಎಲ್ ತಂಡ ಆಗಲಿದೆ. ಈ ಮೊದಲು ಕೋಲ್ಕತಾ ನೈಟ್ ರೈಡರ್ಸ್, 2015ರಲ್ಲಿ ಟ್ರಿಬಾಗೋ ನೈಟ್ ರೈಡರ್ಸ್ ಫ್ರಾಂಚೈಸಿ ಪಡೆದುಕೊಂಡಿತ್ತು.
ಕೆರಿಬಿಯನ್ ಪ್ರೀಮಿಯರ್ ಲೀಗ್ ನಲ್ಲಿ ಭಾಗವಹಿಸುವ ಆರು ತಂಡಗಳಲ್ಲಿ ಸೇಂಟ್ ಲೂಸಿಯಾ ಜೂಕ್ಸ್ ಕೂಡ ಒಂದು. ಸದ್ಯ ವೆಸ್ಟ್ ಇಂಡೀಸ್ ತಂಡದ ಮಾಜಿ ನಾಯಕ ಡೆರೆನ್ ಸಮಿ ಈ ತಂಡವನ್ನು ಮುನ್ನಡೆಸುತ್ತಿದ್ದಾರೆ.