ಏಪ್ರಿಲ್ 1ರಿಂದ ಇಂಡಿಯನ್ ಆಯಿಲ್ ಬಂಕ್ ಗಳಲ್ಲಿ ಪರಿಶುದ್ಧ ತೈಲ
ಏಪ್ರಿಲ್ 1ರಿಂದ ಪರಿಶುದ್ಧ ಪೆಟ್ರೋಲ್ ಮತ್ತು ಡೀಸೆಲ್ ದೇಶದೆಲ್ಲೆಡೆ ಲಭ್ಯವಾಗಲಿದೆ. ಬಿಎಸ್ 6 ವಾಹನಗಳ ಎಂಜಿನ್ ಗಳಿಗೆ ಪೂರಕವಾದ ಪರಿಶುದ್ಧ ತೈಲ ಇಂಡಿಯನ್ ಆಯಿಲ್ ಕಾರ್ಪೊರೇಶನ್ (ಐಒಸಿ)ನ ಬಂಕ್ ಗಳಲ್ಲಿ ಗ್ರಾಹಕರಿಗೆ ಸಿಗಲಿದೆ. ಈ ಮೂಲಕ ಪರಿಶುದ್ಧ ತೈಲ ಮಾರಾಟ ಮಾಡುವ ಕೆಲವೇ ರಾಷ್ಟ್ರಗಳ ಪಟ್ಟಿಗೆ ಭಾರತ ಸೇರ್ಪಡೆಯಾಗಲಿದೆ. ನಮ್ಮ ದೇಶದಲ್ಲಿ 2010ಕ್ಕಿಂತ ಮೊದಲು ಸಿಗುತ್ತಿದ್ದ ಪೆಟ್ರೋಲ್ ನಲ್ಲಿ ಒಂದು ಲೀಟರ್ ನಲ್ಲಿ 350ಪಿಪಿಎಂನಷ್ಟು ಗಂಧಕ ಇರುತ್ತಿತ್ತು. ನಂತರದ ವರ್ಷಗಳಲ್ಲಿ ಅದನ್ನು ಮತ್ತಷ್ಟು ಪರಿಶುದ್ಧಗೊಳಿಸಿ 50ಪಿಪಿಎಂಗೆ ಇಳಿಸಲಾಯಿತು. ಈಗ ಮತ್ತಷ್ಟು ಪರಿಶುದ್ಧವಾಗಿಸಿ 10ಪಿಪಿಎಂಗೆ ಇಳಿಸಲಾಗಿದೆ.
2010ಕ್ಕಿಂತ ಮೊದಲು 359ಪಿಪಿಎಂ ಗಂಧಕ ಶುದ್ಧೀಕರಿಸಿ 50ಪಿಪಿಎಂಗೆ ಇಳಿಸಲು ಭಾರತ 7ವರ್ಷ ತೆಗೆದುಕೊಂಡಿದ್ದರೆ, 50ಪಿಪಿಎಂನಿಂದ 10ಪಿಪಿಎಂಗೆ ಇಳಿಸಲು ಕೇವಲ 3 ವರ್ಷ ತೆಗೆದುಕೊಂಡಿದೆ.








