ಪುರಿ: ಇತಿಹಾಸ ಪ್ರಸಿದ್ಧ ಶ್ರೀ ಪುರಿ ಜಗನ್ನಾಥ ದೇವಸ್ಥಾನದಲ್ಲಿ ಕೇವಲ ಒಂದೇ ತಿಂಗಳಲ್ಲಿ 351 ಮಂದಿ ಸೇವಕರು ಮತ್ತು 53 ಮಂದಿ ಸಿಬ್ಬಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ.
ಆಗಸ್ಟ್ ನಿಂದ ಇಲ್ಲಿಯವರೆಗೆ ದೇವಾಲಯದಲ್ಲಿ ಬರೋಬ್ಬರಿ 404 ಮಂದಿಗೆ ಪಾಸಿಟಿವ್ ಬಂದಿದೆ ಎಂದು ಉನ್ನತ ಮೂಲಗಳಿಂದ ತಿಳಿದುಬಂದಿದೆ.
ಇನ್ನೂ ಸೋಂಕು ದೃಢಪಟ್ಟ ಸಿಬ್ಬಂದಿ ಹಾಗೂ ಸೇವಕರು ಪ್ರತ್ಯೇಕವಾಗಿ ಐಸೋಲೇಶನ್ ನಲ್ಲಿ ಇದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಹಿನ್ನೆಲೆ ದಾರ್ಮಿಕ ವಿಧಿವಿಧಾನಗಳ ನೆರವೇರಿಸಲು ಸಿಬ್ಬಂದಿ ಕೊರತೆಯಿದೆ ಎನ್ನಲಾಗಿದೆ. ಇನ್ನೂ ಸೋಂಕಿತರ ಸಂಪರ್ಕಕ್ಕೆ ಬಂದಿರುವವರು ಸಹ ಹೋಮ್ ಕ್ವಾರಂಟೈನ್ ಗೆ ಒಳಪಟ್ಟಿದ್ದಾರೆ ಎಂದು ಹೇಳಲಾಗಿದೆ.