Pushpa 2: ಕಾದು ಕಾದು ಬೇಸತ್ತು ಅಭಿಮಾನಿಗಳೇ ಕೊಟ್ಟರು ಅಪ್ಡೇಟ್…..
ಐಕಾನಿಕ್ ಸ್ಟಾರ್ ಅಲ್ಲು ಅರ್ಜುನ್ ಅಭಿನಯದ ‘ಪುಷ್ಪಾ-2’ ಚಿತ್ರದ ಅಪ್ಡೇಟ್ ಗಾಗಿ ಇಡೀ ಪ್ಯಾನ್ ಇಂಡಿಯಾ ಅಭಿಮಾನಿಗಳು ಕಾಯುತ್ತಿದದಾರೆ. ಇಷ್ಟು ದಿನ ಕಳೆದರೂ ಚಿತ್ರದ ಒಂದೇ ಒಂದು ಮಾಹಿತಿ ಹೊರಬಿದ್ದಿರಲಿಲ್ಲ. ಮೊದಲ ಪಾರ್ಟ್ ಯಶಸ್ವಿ ಆದ ನಂತರ ನಿರ್ದೇಶಕ ಸುಕುಮಾರ್ ಮೇಲಿನ ನಿರೀಕ್ಷೆ ಕೂಡ ದುಪ್ಪಟ್ಟಾಗಿದೆ.
ಇತ್ತೀಚೆಗಷ್ಟೇ ಈ ಸಿನಿಮಾದ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟೊಂದು ಹರಿದಾಡುತ್ತಿದೆ. ಏಪ್ರಿಲ್ 8 ರಂದು ಪುಷ್ಪ 2 ಚಿತ್ರದ ಇಂಟ್ರೆಸ್ಟಿಂಗ್ ಅಪ್ ಡೇಟ್ ನೀಡಲಿದ್ದೇವೆ ಎಂದು ಮೈತ್ರಿ ಮೂವಿ ಮೇಕರ್ಸ್ ಸಿಂಬಲ್ ಹಾಕಿ ಪುಷ್ಪ 2 ಪೋಸ್ಟರ್ ಬಿಟ್ಟಿದ್ದಾರೆ. ಇದೀಗ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಕೂಡ ಆಗಿತ್ತು. ಆದರೇ ಪುಷ್ಪ 2 ಸಂಬಂಧಿಸಿದ ಈ ಪೋಸ್ಟರ್ ಕೇವಲ ಫ್ಯಾನ್ ಮೇಡ್ ಅಂತೆ. ಈ ಚಿತ್ರದ ಅಪ್‌ಡೇಟ್ ಅನ್ನು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟರ್ ಮೂಲಕ ಪೋಸ್ಟ್ ಮಾಡಿದ್ದು, ಅಭಿಮಾನಿಗಳು ಅದನ್ನು ವೈರಲ್ ಮಾಡುತ್ತಿದ್ದಾರೆ.
ಆದರೆ, ಈ ಪುಷ್ಪ 2 ಬಗ್ಗೆ ಚಿತ್ರತಂಡ ಅಧಿಕೃತವಾಗಿ ಯಾವಾಗ ಅಪ್‌ಡೇಟ್ ಮಾಡಲಿದೆ ಎಂದು ಅಭಿಮಾನಿಗಳು ಹಾಗೂ ಪ್ರೇಕ್ಷಕರು ಕುತೂಹಲದಿಂದ ಕಾಯ್ತಿದ್ದಾರೆ. ಸದ್ಯ ಈ ಸಿನಿಮಾದ ಶೂಟಿಂಗ್ ಶರವೇಗದಲ್ಲಿ ನಡೆಯುತ್ತಿದೆ. ಈ ಸಿನಿಮಾದಲ್ಲಿ ಸುಂದರಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸುತ್ತಿದ್ದು, ಈ ಸಿನಿಮಾವನ್ನು ಮೈತ್ರಿ ಮೂವಿ ಮೇಕರ್ಸ್ ಸಂಸ್ಥೆಯು ಅದ್ಧೂರಿ ಬಜೆಟ್‌ನಲ್ಲಿ ನಿರ್ಮಿಸುತ್ತಿದೆ.
Pushpa 2 : Iconic star Allu Arjun starrer ‘Pushpa-2’ movie update