Pushpa 2 : ಪುಷ್ಪ-2 ಚಿತ್ರದಲ್ಲಿ ಲೇಡಿ ಪವರ್ ಸ್ಟಾರ್ ಸಾಯಿ ಪಲ್ಲವಿ… ನಿಜವೇ ?
ಐಕಾನಿಕ್ ಸ್ಟಾರ್ ಅಲ್ಲು ಅರ್ಜುನ್ ಮತ್ತು ಟಾಲಿವುಡ್ ಕ್ರಿಯೇಟಿವ್ ಡೈರೆಕ್ಟರ್ ಸುಕುಮಾರ್ ನಿರ್ದೇಶನದ ಬ್ಲಾಕ್ ಬಸ್ಟರ್ ಚಿತ್ರ ‘ಪುಷ್ಪ ದಿ ರೈಸ್’. ಈ ಚಿತ್ರ ಪ್ಯಾನ್ ಇಂಡಿಯ ಮಟ್ಟದಲ್ಲಿ ಹಿಟ್ ಆಗಿದ್ದು, ಅಭಿಮಾನಿಗಳು ಎರಡನೇ ಪಾರ್ಟ್ ಗಾಗಿ ವೇಯ್ಟ್ ಮಾಡುತ್ತಿರುವುದು ನಿಮಗೆ ಗೊತ್ತೇ ಇದೆ. ಈ ನಡುವೆ ಪಾರ್ಟ್ 2 ನಲ್ಲಿ ಮತ್ತೊಬ್ಬ ನಾಯಕಿ ಆಗಮನವಾಗುವ ಸಾಧ್ಯತೆ ಇದೆ ಎಂದು ಗಾಸಿಪ್ ಹರಿದಾಡುತ್ತಿದೆ.
ಈ ಚಿತ್ರದಲ್ಲಿ ಈಗಾಗಲೇ ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸುತ್ತಿದ್ದಾರೆ. ಇದರ ಜೊತೆಗೆ ಪಾರ್ಟ್ 2 ಮತ್ತೊಬ್ಬ ಹಿರೋಹಿನ್ ಬರಬುದು ಎನ್ನುವ ಕುರಿತು ದಿನಕ್ಕೊಂದು ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಅದು ಬೇರಾರು ಅಲ್ಲ ಲೇಡಿ ಪವರ್ ಸ್ಟಾರ್ ಸಾಯಿ ಪಲ್ಲವಿ. ನಟಿ ಸಾಯಿ ಪಲ್ಲವಿ ಪುಷ್ಪ ಚಿತ್ರದ ಭಾಗವಾಗಲಿದ್ದಾರೆ ಎನ್ನುವ ಸುದ್ದಿ ಹಲವು ದಿನಗಳಿಂದ ಹರಿದಾಡುತ್ತಿದೆ. ಇದೀಗ ಈ ಸುದ್ದಿ ಮತ್ತೆ ಮುನ್ನೆಲೆಗೆ ಬಂದಿದೆ. ಪ್ರಮುಖ ಪಾತ್ರಕ್ಕಾಗಿ ಸುಕುಮಾರ್ ಅವರನ್ನ ಸಂಪರ್ಕಿಸಿದ್ದಾರೆ ಮತ್ತು ಸಾಯಿ ಪಲ್ಲವಿ ಅವರು ಈ ಪಾತ್ರವನ್ನ ಇಷ್ಟಪಟ್ಟಿದ್ದಾರೆ ಎಂದು ಮತ್ತೊಂದು ಸುತ್ತಿನ ಟ್ರೆಂಡ್ ಶುರುವಾಗಿದೆ. ಈ ಕುರಿತಂತೆ ಟ್ವೀಟರ್ ನಲ್ಲಿ ಸಾಯಿಪಲ್ಲವಿ ಹ್ಯಾಶ್ ಟ್ಯಾಗ್ ಟ್ರೆಂಡ್ ಆಗಿದೆ.
ಈ ಸುದ್ದಿಯಲ್ಲಿ ಎಷ್ಟರಮಟ್ಟಿಗೆ ಸತ್ಯಾಂಶವಿದೆ ಎಂಬುದು ತಿಳಿಯಬೇಕಂದರೆ ಚಿತ್ರತಂಡದಿಂದಲೇ ಸ್ಪಷ್ಟತೆ ಬರಬೇಕಿದೆ. ಮುಂದಿನ ತಿಂಗಳು 8 ರಂದು ಅಲ್ಲು ಅರ್ಜುನ್ ಹುಟ್ಟುಹಬ್ಬ ಇರುವುದರಿಂದ ಅಂದು ಸುದ್ದಿ ಹೊರಬೀಳಬಹುದು ಎಂಬ ವರದಿಯೂ ಇವೆ. ಇನ್ನೂ ಈ ಚಿತ್ರದಲ್ಲಿ ಫಹದ್ ಫಾಸಿಲ್, ಸುನೀಲ್, ಅನಸೂಯಾ ಭಾರದ್ವಾಜ್, ರಾವ್ ರಮೇಶ್ ಅವರಂತಹ ಪ್ರಮುಖ ಕಲಾವಿದರೂ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಮೈತ್ರಿ ಮೂವೀ ಮೇಕರ್ಸ್ ನಿರ್ಮಾಣದ ಈ ಚಿತ್ರಕ್ಕೆ ದೇವಿಶ್ರೀ ಪ್ರಸಾದ್ ಸಂಗೀತ ನೀಡಿದ್ದಾರೆ.
Pushpa 2 : Lady Power Star Sai Pallavi in Pushpa-2… Is it true?