‘ಪುಷ್ಪ’ ಪ್ಯಾನ್ ಇಂಡಿಯಾ ಆಗುತ್ತಿರಲಿಲ್ವಂತೆ.. ಆದ್ರೆ ಆಗೋದಕ್ಕೆ ಕಾರಣ ಇವರೇ..!
ಹೈದ್ರಾಬಾದ್ : ಐಕಾನ್ ಸ್ಟಾರ್ ಅಲ್ಲು ಅರ್ಜುನ್ ನಟನೆಯ ಪ್ಯಾನ್ ಇಂಡಿಯಾ ಸಿನಿಮಾ ಪುಷ್ಪ ಸದ್ಯ ದೇಶಾದ್ಯಂತ ರಿಲೀಸ್ ಆಗಿದೆ.. ಕರ್ನಾಟಕದಲ್ಲಿ ಸಿನಿಮಾಗೆ ಅಷ್ಟು ಒಳ್ಳೆ ಪ್ರತಿಕ್ರಿಯೆ ಸಿಗದೇ ಹೋದ್ರು, ಬೇರೆ ರಾಜ್ಯಗಳಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗ್ತಿದೆ.. ಕರ್ನಾಟಕದಲ್ಲಿ ಬಾಯ್ಕಟ್ ಪುಷ್ಪ ಅಭಿಯಾನವೂ ಶುರುವಾಗಿತ್ತು.. ಅದಕ್ಕೆ ಕಾರಣ ಕನ್ನಡದ ಕಡೆಗಣನೆ.. ಸಿನಿಮಾ ಕನ್ನಡದಕ್ಕೂ ಡಬ್ ಆಗಿತ್ತು.. ಆದ್ರೆ ಕನ್ನಡದ ವರ್ಷನ್ ಗೆ ಕೊಟ್ಟಿದ್ದು ಕೇವಲ ಒಂದೇ ಒಂದು ಸ್ಕ್ರೀನ್,.. ಹೀಗಾಗಿ ಕನ್ನಡಿಗರು ಆಕ್ರೋಶಗೊಂಡು ಪುಷ್ಪ ವಿರುದ್ಧ ಬಾಯ್ಕಟ್ ಘೋಷಣೆ ಸಾರಿದ್ದರು.. ಈ ನಡುವೆಯೂ ಕೆಲವೆಡೆ ಸಿನಿಮಾಗೆ ರಾಜ್ಯದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ..
ಈ ನಡುವೆ ಈ ಚಿತ್ರದ ಬಗ್ಗೆ ನಿರ್ದೇಶಕ ಸುಕುಮಾರ್ ವಿಶೇಷವಾದ ಸಂಗತಿಯೊಂದನ್ನು ಹಂಚಿಕೊಂಡಿದ್ದಾರೆ. ಅಂದ್ಹಾಗೆ ಪುಷ್ಪ ಸಿನಿಮಾ ಮೊದಲಿಗೆ ಪ್ಯಾನ್ ಇಂಡಿಯಾ ಆಗುವ ಪ್ಲಾನ್ ನಲ್ಲಿ ಇರಲಿಲ್ವಂತೆ.. ಆದ್ರೆ ಪುಷ್ಪ ಸಿನಿಮಾ 5 ಭಾಷೆಗಳಲ್ಲಿ ತೆರೆಕಾಣಲು ಕಾರಣೀಭೂತರು ಎಸ್ ಎಸ್ ರಾಜಮೌಳಿ ಅವರಂತೆ..
ಈ ವಿಚಾರವನ್ನು ಇತ್ತೀಚೆಗೆ ಸುದ್ದಿಗೋಷ್ಟಿಯಲ್ಲಿ ನಿರ್ದೇಶಕ ಸುಕುಮಾರ್ ಹಂಚಿಕೊಂಡಿದ್ದಾರೆ. ಪುಷ್ಪ ಸಿನಿಮಾವನ್ನು ಕೇವಲ ತೆಲುಗಿನಲ್ಲಿ ಬಿಡುಗಡೆ ಮಾಡಬೇಕು ಎಂದು ನಿರ್ಧರಿಸಲಾಗಿತ್ತಂತೆ. ಆದರೆ ಈ ವಿಚಾರ ಗೊತ್ತಾಗಿ ಚಿತ್ರ ತಂಡವನ್ನು ನಿರ್ದೇಶಕ ರಾಜಮೌಳಿ ಸಂಪರ್ಕಿಸಿ , ಪ್ಯಾನ್ ಇಂಡಿಯಾ ರಿಲೀಸ್ ಮಾಡುವ ಯೋಜನೆ ಕೈ ಬಿಡಬೇಡಿ. ದೇಶದ ಹಲವು ಭಾಷೆಗಳಲ್ಲಿ ಸಿನಿಮಾ ರಿಲೀಸ್ ಮಾಡಿ. ಅದು ಪ್ಯಾನ್ ಇಂಡಿಯಾ ಆಗುತ್ತದೆ. ಅದಕ್ಕೆ ಹೆಚ್ಚಿನದನ್ನು ನೀವು ಏನು ಮಾಡಬೇಕಾಗಿಲ್ಲ ಎಂದಿದ್ದ್ರು. ಅದಾದ ಮೇಲೆಯೇ ಈ ಸಿನಿಮಾವನ್ನ ಪ್ಯಾನ್ ಇಂಡಿಯಾ ಮಾಡುವ ಪ್ಲಾನ್ ಮಾಡಿದ್ರಂತೆ ಸಿನಿಮಾ ತಂಡ..