‘ಊ ಅಂಟಾವಾ..’ ಹಾಡಿನ ವಿವಾದದ ಬಗ್ಗೆ ಕೊನೆಗೂ ತುಟಿ ಬಿಚ್ಚಿದ ದೇವಿ ಶ್ರೀ ಪ್ರಸಾದ್…!

1 min read

‘ಊ ಅಂಟಾವಾ..’ ಹಾಡಿನ ವಿವಾದದ ಬಗ್ಗೆ ಕೊನೆಗೂ ತುಟಿ ಬಿಚ್ಚಿದ ದೇವಿ ಶ್ರೀ ಪ್ರಸಾದ್…!

ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಅಭಿನಯದ ಸಿನಿಮಾ ವಿಶ್ವಾದ್ಯಂತ ಡಿಸೆಂಬರ್ 17 ಕ್ಕೆ ರಿಲೀಸ್ ಆಗಿ ಭರ್ಜರಿ ಸಕ್ಸಸ್ ಕಂಡು ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸಿದ ಪುಷ್ಪ ಸಿನಿಮಾ ಪ್ರಸ್ತುತ ಅಮೆಜಾನ್ ನಲ್ಲಿ ಯಶಸ್ವಿ ಪ್ರದರ್ಶನ ಕಾಣ್ತಿದೆ..
ಬಾಕ್ಸ್ ಆಫೀಸ್ ಕಲೆಕ್ಷನ್ ನಲ್ಲಿ ದಾಖಲೆ ಬರೆದಿರುವ ಪುಷ್ಪ ಸಿನಿಮಾ ಹಿಂದಿಯಲ್ಲೇ 80 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ.. ಆದ್ರೆ ಈ ಸಿನಿಮಾದಲ್ಲಿ ಸಮಂತಾ ಐಟಂಗೆ ಹೆಜ್ಜೆ ಹಾಕಿದ್ದೇ ಹೈಲೇಟ್ ಆಗಿತ್ತು. ಈ ಹಾಡಿಗೆ ಹೆಜ್ಜೆ ಹಾಕಲು , ಹಾಟ್ ಅಂಡ್ ಗ್ಲಾಮರಸ್ ಆಗಿ ದರ್ಶನ ನೀಡಲು ಸ್ಯಾಮ್ ಬರೋಬ್ಬರಿ 1.5 ಕೋಟಿ ರೂಪಾಯಿ ಪಡೆದಿದ್ದರು..

ಆದ್ರೆ ಊ.. ಅಂಟಾವಾ ಊಹೂ ಅಂಟಾವಾ ಅಂತ ಪ್ರಾರಂಭವಾಗುವ ಈ ಹಾಡು ವಿವಾದಕ್ಕೆ ನಾಂದಿ ಹಾಡಿತ್ತು.. ಹಾಡಿನ ಮೇಲೆ ಪುರುಷರ ಸಂಘ ಮುಗಿಬಿದ್ದಿತ್ತು.. ಪುರುಷರ ವ್ಯಕ್ತಿವವನ್ನ ಹಾಡಿನಲ್ಲಿ ಟೀಕಿಸಲಾಗಿದೆ ಎಂದು ಕೆರಳಿದ್ದ ಪುರುಷರ ಸಂಘ ಈ ಹಾಡು , ದೇವಿ ಶ್ರೀ ಪ್ರಸಾದ್ , ಸಮಂತಾ ಹಾಗೂ ಸಿನಿಮಾ ತಂಡದ ವಿರುದ್ಧ ದೂರು ದಾಖಲಿಸಿದ್ದೂ ಉಂಟು.. ಆದ್ರೆ ಈ ವಿವಾದ ಕಡೆಗೂ ತಣ್ಣಗಾಗಿತ್ತು.. ವಿವಾದ ನಂತರವೂ ಹಾಡನ್ನ ತೆಗೆದುಹಾಕಲಿಲ್ಲ.. ಈ ಹಾಡು ಸ್ಯಾಮ್ ಅಲ್ಲ ಡ್ಯಾನ್ಸ್ ಥಿಯೇಟರ್ ನಲ್ಲಿ ಅಭಿಮಾನಿಗಳು ಹುಚ್ಚೆದ್ದು ಕುಣಿಯುವಂತೆ ಮಾಡಿದ್ದು..devi shriprasad , pushpa , saakshatv

ಇದೀಗ ಈ ಹಾಡಿನ ವಿವಾದದ ಬಗ್ಗೆ ಕಡೆಗೂ ಸಂಗೀತ ನಿರ್ದೇಶಕ ದೇವಿ ಶ್ರೀ ಪ್ರಸಾದ್ ಪ್ರತಿಕ್ರಿಯಿಸಿದ್ದಾರೆ.. ಸಂಗೀತಗಾರನಿಂದ ಮತ್ತು ಸಂಯೋಜನೆಯ ಕಡೆಯಿಂದ, ನಿರ್ದೇಶಕರು ಏನು ಬಯಸುತ್ತಾರೆ, ಸಿನಿಮಾದ ವಿಷಯವು ಏನನ್ನು ಬಯಸುತ್ತೆ ಅದನ್ನು ನಾವು ಮೊದಲು ತಿಳಿದುಕೊಳ್ಳುತ್ತೇವೆ. ನಂತರ ಅವರಿಗೆ ಬೇಕಾಗಿರುವ ರೀತಿ ನಾವು ಪೂರೈಸಬೇಕು.

ಪ್ರೇಕ್ಷಕರು ಒಂದು ಹಾಡನ್ನು ಯಾವುದೇ ರೀತಿ ನೋಡಿದರೂ ಅದು ಸರಿಯೇ. ಲವ್ ಸಾಂಗ್ ಆಗಿದ್ದರೆ ಲವ್ ಸಾಂಗ್, ಐಟಂ ಸಾಂಗ್ ಆಗಿದ್ದರೆ ಐಟಂ ಸಾಂಗ್ ಆಗುತ್ತೆ ಎಂದು ಪ್ರತಿಕ್ರಿಯಿಸಿದರು.
ನನಗೆ, ಅದು ಭಕ್ತಿ, ಪ್ರೀತಿ ಅಥವಾ ಐಟಂ ಹಾಡು ಆಗಿರಲಿ. ಸಂಯೋಜನೆಯ ಪ್ರಕ್ರಿಯೆಯು ಒಂದೇ ಆಗಿರುತ್ತದೆ. ಇದನ್ನು ಈ ವ್ಯಕ್ತಿಗಳು ಬೇರೆ ಸನ್ನಿವೇಶದಲ್ಲಿ ತೆಗೆದುಕೊಂಡಿದ್ದಾರೆ ಅದು ಅನಗತ್ಯವಾಗಿತ್ತು ಎಂದು ಪರೋಕ್ಷವಾಗಿ ರಾಜಕೀಯ ವ್ಯಕ್ತಿಗಳ ವಿರುದ್ಧ ಕಿಡಿಕಾರಿದ್ದಾರೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd