‘ಶ್ರೀವಲ್ಲಿ’ ಅಲ್ಲು ಸ್ಟೆಪ್ಸ್ ರಿಕ್ರಿಯೇಟ್ ಮಾಡಿದ ಸೂರ್ಯಕುಮಾರ್, ಇಶಾನ್

1 min read

ಶ್ರೀವಲ್ಲಿ ಹಾಡಿನ ಅಲ್ಲು  ಸ್ಟೆಪ್ ರೀಕ್ರಿಯೇಟ್ ಮಾಡಿದ ಸೂರ್ಯಕುಮಾರ್ ಯಾದವ್ , ಇಶಾನ್ ಕಿಶನ್

ಪುಷ್ಪ ಸಿನಿಮಾದ ಕ್ರೇಜ್ ಎಷ್ಟರ ಮಟ್ಟಿಗಿದೆ ಅನ್ನೋದು ಈಗಾಗಲೇ ಎಲ್ರಿಗೂ ಗೊತ್ತಾಗಿದೆ.. ಡಿಸೆಂಬರ್ 17 ಕ್ಕೆ ರಿಲೀಸ್ ಆಗಿ ಥಿಯೇಟರ್ ಗಳಲ್ಲಿ ಧೂಳೆಬ್ಬಿಸಿ , ಬಾಕ್ಸ್ ಆಫೀಸ್ ಕಲೆಕ್ಷನ್ ನಲ್ಲಿ ಬಾಲಿವುಡ್ ಸಿನಿಮಾಗಳನ್ನ ಹಿಂದಿಕ್ಕಿ ಈಗ ಅಮೇಜಾನ್ ಪ್ರೈಮ್ ನಲ್ಲಿ ಅದ್ಭುತ ಪ್ರದರ್ಶನ ಕಾಣ್ತಿದೆ..

ಈ ನಡುವೆ ಈ ಸಿನಿಮಾವನ್ನ ಬಾಲಿವುಡ್, ಟಾಲಿವುಡ್ ನ ಸ್ಟಾರ್ ಗಳು ಮೆಚ್ಚಿಕೊಂಡಿದ್ರೆ ,, ಸಿನಿಮಾದ ಹಾಡುಗಳಿಗೆ ಎಷ್ಟು ಕ್ರೇಜ್ ಇದೆ ಅನ್ನೋ ವಿಚಾರವೂ ಎಲ್ರಿಗೂ ಗೊತ್ತಿದೆ.. ಟೀಮ್ ಇಂಡಿಯಾ ಆಟಗಾರ ರವೀಂದ್ರ ಜಡೇಜಾ ಹೀ ಹಿಂದೆ ಪುಷ್ಪರಾಜ( ಸಿನಿಮಾದಲ್ಲಿ ಅಲ್ಲು ಪಾತ್ರ )ನ ಲುಕ್ ನಲ್ಲಿ ಫೋಟೋ ಕೊಟ್ಟಿದ್ದ ಫೊಟೋ ಶೇರ್ ಮಾಡಿ ಸಂಚಲನ ಸೃಷ್ಟಿ ಮಾಡಿದ್ದರು..

 

ಇದೀಗ ಟೀಮ್ ಇಂಡಿಯಾದ ಇಬ್ಬರು ಆಟಗಾರರು ಶ್ರೀವಲ್ಲಿ ಹಾಡಿಗೆ ಥೇಟ್ ಅಲ್ಲು ಹೇಗೆ ಸ್ಟೆಪ್ ಹಾಕಿ , ಕಾಣಿಸಿಕೊಂಡಿದ್ದಾರೋ ಅಂತೆಯೇ ಕಾಣಿಸಿಕೊಂಡು ಅಲ್ಲು ಸ್ಟೆಪ್ ನ ರಿಕ್ರಿಯೇಟ್ ಮಾಡಿದ್ದಾರೆ. ಈ ವಿಡಿಯೋವನ್ನ ಮುಂಬೈ ಇಂಡಿಯನ್ಸ್ ಇನ್ಸ್ಟಾಗ್ರಾಮ್ ಪೇಜ್ ನಲ್ಲಿ ಹಂಚಿಕೊಂಡಿದೆ..  ಇವರ ಈ ವಿಡಿಯೋಗೆ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ.. ನೆಟ್ಟಿಗರಂತೂ ನಾನಾ ರೀತಿಯ ಕಮೆಂಟ್ ಗಳನ್ನ ಮಾಡ್ತಿದ್ದಾರೆ..

ಪುಷ್ಪ ಸಿನಿಮಾಗೆ ಸುಕುಮಾರ್ ಆಕ್ಷನ್ ಕಟ್ ಹೇಳಿದ್ದು , ರಶ್ಮಿಕಾ ಅಲ್ಲು ಅರ್ಜುನ್ ಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.. ಈ ಸಿನಿಮಾಗ ಭಾಗ 2 ಮುಂದಿನ ವರ್ಷಕ್ಕೆ ರಿಲೀಸ್ ಆಗುವ ಸಾಧ್ಯತೆಯಿದೆ.. ಈ ಸಿನಿಮಾ ಈವರೆಗೂ ವಿಶ್ವಾದ್ಯಂತ ಬಾಕ್ಸ್ ಆಫೀಸ್ ನಲ್ಲಿ ಸುಮಾರು 400 ಕೋಟಿ ರೂ ಕಲೆಕ್ಷನ್ ಮಾಡಿದ್ದು ಹಿಂದಿ ಅವತರಣಿಕೆಯೊಂದರಿಂದಲೇ 85 – 888 ಕೋಟಿ ಕಲೆಕ್ಷನ್ ಮಾಡಿದೆ ಎನ್ನಲಾಗಿದೆ..

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd