ಅಲ್ಲು ಅಭಿಮಾನಿಗಳಿಗೆ ನಿರಾಸೆ – ಪುಷ್ಟ ರಿಲೀಸ್ ಡೇಟ್ ಮತ್ತೆ ಮುಂದೂಡಿಕೆ..! ಕಾರಣವೇನು..?
ಟಾಲಿವುಡ್ ನ ಸ್ಟಾರ್ ನಟ ಅಲ್ಲು ಅರ್ಜುನ್ ಹಾಗೂ ಕನ್ನಡದ ಕಿರಿಕ್ ರಾಣಿ ರಶ್ಮಿಕಾ ನಟಿಸುತ್ತಿರುವ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ಪುಷ್ಪ ರಿಲೀಸ್ ಡೇಟ್ ಮತ್ತೆ ಮುಂದೂಡಿಕೆಯಾಗಿರೋದಾಗಿ ಹೇಳಲಾಗ್ತಿದೆ. ಹೌದು ನಿರ್ದೇಶಕ ಸುಕುಮಾರ್ ಆಕ್ಷನ್ ಕಟ್ ಹೇಳ್ತಿರುವ ‘ಪುಷ್ಪ’ ಸಿನಿಮಾ ಯಾವಾಗ ರಿಲೀಸ್ ಆಗುತ್ತೆ ಅಂತ ಅಭಿಮಾನಿಗಳು ಕಾತರದಿಂದ ಎದುರು ನೋಡ್ತಿದ್ರು. ಇನ್ನೇನು ಸಿನಿಮಾ ರಿಲೀಸ್ ದಿನಾಂಕಹತ್ತಿರವಾಗ್ತಿದೆ ಅನ್ನೋ ಹೊತ್ತಲ್ಲೇ ಮತ್ತೆ ಪೋಸ್ಟ್ ಪೋನ್ ಆಗಿರೋದು ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ.
ಶಾರುಖ್ ಖಾನ್ ಚಿತ್ರದಲ್ಲಿ ನಯನತಾರಾ ಅಲ್ಲ ಸಮಂತಾ ನಾಯಕಿ..!
ಪುಷ್ಪ ಸಿನಿಮಾ ಈಗಾಗಲೇ ರಿಲೀಸ್ ದಿನಾಂಕವನ್ನು ಅನೌನ್ಸ್ ಮಾಡಿದೆ. ಇದೇ ವರ್ಷದ ಡಿಸೆಂಬರ್ 17ಕ್ಕೆ ಚಿತ್ರದ ರಿಲೀಸ್ ಡೇಟ್ ಪ್ರಕಟ ಮಾಡಿದೆ. ಆದರೆ ಇದೀಗ ಪುಷ್ಪಾ ಚಿತ್ರದ ರಿಲೀಸ್ ಮುಂದೂಡುವ ಸಾಧ್ಯತೆಯಿದೆ ಎನ್ನಲಾಗ್ತಿದೆ. ಇದಕ್ಕೆ ಕಾರಣ ಸಿನಿಮಾದ ಶೂಟಿಂಗ್ ಇನ್ನೂವರೆಗೂ ಮುಕ್ತಾವಾಗಿಲ್ಲ ಎಂದು ಹೇಳಲಾಗ್ತಿದೆ. ಕೊನೆಯ ಹಂತದ ಚಿತ್ರೀಕರಣವು ಈ ತಿಂಗಳ 28ರಿಂದ ಪ್ರಾರಂಭವಾಗಲಿದ್ದು, ಇದು ಸುಮಾರು 15 ದಿನಗಳ ಕಾಲ ತೆಗೆದುಕೊಳ್ಳಲಿದೆ ಎನ್ನಲಾಗ್ತಿದೆ. ಹೀಗಾಗಿ ಸಿನಿಮಾ ಸಂಪೂರ್ಣ ಶೂಟಿಂಗ್ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಕೆಲಸ ಮುಗಿದು ತೆರೆ ಮೇಲೆ ಬರಲು ಇನ್ನೂ ಸಾಕಷ್ಟು ಸಮಯ ಬೇಕಾಗಬಹುದು ಎನ್ನಲಾಗ್ತಾಯಿದೆ.
ಪಾಕಿಸ್ತಾನಕ್ಕೆ ರಹಸ್ಯ ಮಾಹಿತಿ ರವಾನೆ ಮಾಡ್ತಿದ್ದ BSF ಕಾನ್ಸ್ ಟೇಬಲ್ ಅರೆಸ್ಟ್
ಮೈತ್ರಿ ಮೂವೀಸ್ ನಿರ್ಮಾಣದಲ್ಲಿ ಮೂಡಿಬರುತ್ತಿರುವ ಪುಷ್ಪ ಸಿನಿಮಾದ 2 ಹಾಡುಗಳು ಈಗಾಗಲೇ ರಿಲೀಸ್ ಆಗಿ ಧೂಳೆಬ್ಬಿಸುತ್ತಿದೆ. ಜೋಕೆ ಜೋಕೆ ಮೇಕೆ ಹಾಗೂ ಶ್ರೀವಲ್ಲಿ ಎರೆಡೂ ಹಾಡುಗಳು ಸಹ ಕನ್ನಡ , ತೆಲುಗು , ತಮಿಳು , ಹಿಂದಿ , ಮಳಯಾಳಂನಲ್ಲಿ ರಿಲೀಸ್ ಆಗಿ ಧೂಳೆಬ್ಬಿಸುತ್ತಿದೆ. ಹಾಡುಗಳಿಗೆ ಸಖತ್ ರೆಸ್ಪಾನ್ಸ್ ಬಂದಿದೆ. ಈ ಹಾಡುಗಳು ಸಿನಿಮಾದ ನಿರೀಕ್ಷೆ ಹೆಚ್ಚಿಸಿವೆ. ಈ ನಡುವೆ ಸಿನಿಮಾತಂಡ ಚಿತ್ರದ ಮೂರನೇ ಹಾಡನ್ನ ಇದೇ ಅಕ್ಟೋಬರ್ ಗೆ ರಿಲೀಸ್ ಮಾಡುವುದಾಗಿಯೂ ಅನೌನ್ಸ್ ಮಾಡಿದೆ.
ಸ್ವಂತ ಯೂಟ್ಯೂಬ್ ಚಾನಲ್ ಆರಂಭಿಸಿದ ಶರಣ್…!