ಕೇರಳದಲ್ಲೂ ‘ಪುಷ್ಪ’ ಎಡವಟ್ಟು: ಇದ್ರಲ್ಲೂ ಕನ್ನಡದ ಮೇಲಿನ ತಾತ್ಸಾರ ತೋರಿದ ಚಿತ್ರತಂಡ..!
ಕೊಚ್ಚಿ : ಐಕಾನ್ ಸ್ಟಾರ್ ಅಲ್ಲು ಅರ್ಜುನ್ ನಟನೆಯ ಪ್ಯಾನ್ ಇಂಡಿಯಾ ಸಿನಿಮಾ ಪುಷ್ಪ ಸದ್ಯ ದೇಶಾದ್ಯಂತ ರಿಲೀಸ್ ಆಗಿದೆ.. ಕರ್ನಾಟಕದಲ್ಲಿ ಸಿನಿಮಾಗೆ ಅಷ್ಟು ಒಳ್ಳೆ ಪ್ರತಿಕ್ರಿಯೆ ಸಿಗದೇ ಹೋದ್ರು, ಬೇರೆ ರಾಜ್ಯಗಳಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗ್ತಿದೆ.. ಕರ್ನಾಟಕದಲ್ಲಿ ಬಾಯ್ಕಟ್ ಪುಷ್ಪ ಅಭಿಯಾನವೂ ಶುರುವಾಗಿತ್ತು.. ಅದಕ್ಕೆ ಕಾರಣ ಕನ್ನಡದ ಕಡೆಗಣನೆ.. ಸಿನಿಮಾ ಕನ್ನಡದಕ್ಕೂ ಡಬ್ ಆಗಿತ್ತು.. ಆದ್ರೆ ಕನ್ನಡದ ವರ್ಷನ್ ಗೆ ಕೊಟ್ಟಿದ್ದು ಕೇವಲ ಒಂದೇ ಒಂದು ಸ್ಕ್ರೀನ್,.. ಹೀಗಾಗಿ ಕನ್ನಡಿಗರು ಆಕ್ರೋಶಗೊಂಡು ಪುಷ್ಪ ವಿರುದ್ಧ ಬಾಯ್ಕಟ್ ಘೋಷಣೆ ಸಾರಿದ್ದರು.. ಈ ನಡುವೆಯೂ ಕೆಲವೆಡೆ ಸಿನಿಮಾಗೆ ರಾಜ್ಯದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ..
ಆದ್ರೆ ಕರ್ನಾಟಕದಲ್ಲಿ ಮಾಡಿದ ತಪ್ಪನ್ನೇ ಕೇರಳದಲ್ಲೂ ಮಾಡಿರೋ ಸಿನಿಮಾತಂಡ ಮತ್ತೊಂದು ಸಂಕಷ್ಟ ಎದುರಿಸಿದೆ.. ಮಲಯಾಳಂನಲ್ಲೂ ರಿಲೀಸ್ ಆಗೋದು ಡೌಟ್ ಆಗಿದೆ.. ಮಲಯಾಳಂನಲ್ಲಿ ಡಬ್ ಆದ ಪುಷ್ಪ ಸಿನಿಮಾ ರಿಲೀಸ್ ಮಾಡುವಲ್ಲಿ ಎಡವಿದೆ ಸಿನಿಮಾತಂಡ.. ಮೊದಲ ದಿನವೇ ಪುಷ್ಪ ಮಲಯಾಳಂನಲ್ಲಿ ರಿಲೀಸ್ ಆಗದೇ , ತಮಿಳು ಭಾಷೆಯಲ್ಲಿ ಪುಷ್ಪ ಸಿನಿಮಾವನ್ನು ರಿಲೀಸ್ ಮಾಡಿದೆ.. ಕನ್ನಡದ ಬಳಿಕ ಮಲಯಾಳಂನಲ್ಲೂ ಕೂಡ ಈ ಪ್ಯಾನ್ ಇಂಡಿಯಾ ಸಿನಿಮಾ ರಿಲೀಸ್ ಆಗಿಲ್ಲ. ಕೇರಳದಲ್ಲಿ ಸಿನಿಮಾ ಡಿಸೆಂಬರ್ 18 ಕ್ಕೆ ಮಲಯಾಳಂ ವರ್ಷನ್ ರಿಲೀಸ್ ಆಗಬೇಕಿದೆ ಪುಷ್ಪ..ಡಿಸೆಂಬರ್ 17ರಂದು ಕೇವಲ ತಮಿಳು ವರ್ಷನ್ ರಿಲೀಸ್ ಮಾಡಿದೆ. ಆದ್ರೀಗ ಡಿಸೆಂಬರ್ 18ರಂದು ಮಲಯಾಳಂನಲ್ಲಿ ಪುಷ್ಪವನ್ನು ಬಿಡುಗಡೆ ಮಾಡಲಿದೆ. ಈ ವಿಚಾರಕ್ಕೆ ಅಲ್ಲು ಅರ್ಜುನ್ ಅಭಿಮಾನಿಗಳಿಗೆ ಚಿತ್ರತಂಡ ಕ್ಷಮೆಯನ್ನೂ ಕೇಳಿದೆ.
‘ಪುಷ್ಪ’ ಪ್ಯಾನ್ ಇಂಡಿಯಾ ಆಗುತ್ತಿರಲಿಲ್ವಂತೆ.. ಆದ್ರೆ ಆಗೋದಕ್ಕೆ ಕಾರಣ ಇವರೇ..!
ಆದ್ರೆ ಇಲ್ಲೂ ಕೂಡ ಕನ್ನಡದ ಮೇಲೆ ಸಿನಿಮಾ ತಂಡದ ತಾತ್ಸಾರ ಗೊತ್ತಾಗ್ತಿದೆ.. ಮಲಯಾಂಳಂನಲ್ಲಿ ಸಿನಿಮಾ ರಿಲೀಸ್ ಆಗದೇ ಇದ್ದಕ್ಕೆ ಸಾರಿ ಕೇಳಿದ ಸಿನಿಮಾ ತಂಡ , ಕನ್ನಡದಲ್ಲಿ ಮಾಡಿದ ಎಡವಟ್ಟಿಗೆ ಕ್ಷಮೆ ಕೇಳಿಲ್ಲ.. ಕರ್ನಾಟಕದಲ್ಲಿ ಕನ್ನಡ ಭಾಷೆಗೆ ಡಬ್ ಆದ ಸಿನಿಮಾವನ್ನು ಕೇವಲ ಒಂದೇ ಸಕ್ರೀನ್ ನಲ್ಲಿ ಕನ್ನಡದಲ್ಲಿ ನಾಮಕಾವಸ್ಥೆಗೆ ರಿಲೀಸ್ ಮಾಡಿದ್ರು.. ಕನ್ನಡಿಗರು ಆಕ್ರೋಶ ಹೊರಹಾಕಿ ಬಾಯ್ಕಟ್ ಹೇಳಿದ್ರೂ ಕ್ಷಮೆಯಾಚಿಸಿಲ್ಲ ಪುಷ್ಪ ತಂಡ..