ರಷ್ಯಾದಲ್ಲಿ ನಡೆದ ಉಗ್ರರ ದಾಳಿಗೆ ಎಲ್ಲೆಡೆ ತೀವ್ರ ಆಕ್ರೋಶ ವ್ಯಕ್ತವಾಗತ್ತಿದೆ. ಈ ಮಧ್ಯೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ತೀವ್ರವಾಗಿ ಖಂಡಿಸಿದ್ದಾರೆ.
ರಷ್ಯಾದ ಮಾಸ್ಕೋ ಹಾಲ್ ನಲ್ಲಿ ಶನಿವಾರ ಉಗ್ರರ ದಾಳಿ ನಡೆದಿದ್ದು, ಘಟನೆಯಲ್ಲಿ 143 ಜನ ಬಲಿಯಾಗಿದ್ದಾರೆ. ಸುಮಾರು 200 ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ. ಈ ಘಟನೆ ಇಡೀ ಜಗತ್ತನ್ನೇ ಬೆಚ್ಚಿ ಬೀಳಿಸಿತ್ತು. ಹೀಗಾಗಿ ಘಟನೆಯನ್ನು ‘ಅನಾಗರಿಕ ಭಯೋತ್ಪಾದಕ ಕೃತ್ಯ’ ಎಂದು ಪುಟಿನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಕ್ತಸಿಕ್ತ, ಬರ್ಬರ ಭಯೋತ್ಪಾದಕ ಕೃತ್ಯದಲ್ಲಿ ಡಜನ್ಗಟ್ಟಲೆ ಮುಗ್ಧ, ಶಾಂತಿಯುತ ಜನರು ಬಲಿಯಾಗಿದ್ದಾರೆ. ನಾನು ಮಾರ್ಚ್ 24 ಅನ್ನು ರಾಷ್ಟ್ರೀಯ ಶೋಕಾಚರಣೆಯ ದಿನವೆಂದು ಘೋಷಿಸುತ್ತೇನೆ ಎಂದು ಅವರು ಮಾತನಾಡಿದ್ದಾರೆ.
ಅಲ್ಲದೇ, ದಾಳಿಯಲ್ಲಿ ಭಾಗಿಯಾದ ಎಲ್ಲರಿಗೂ ಕಠಿಣ ಶಿಕ್ಷೆ ನೀಡುವುದಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜನರನ್ನು ಗುಂಡಿಕ್ಕಿ ಕೊಂದ ಭಯೋತ್ಪಾದಕ ದಾಳಿಯ ಎಲ್ಲಾ ನಾಲ್ಕು ಅಪರಾಧಿಗಳನ್ನು ಬಂಧಿಸಲಾಗಿದೆ. ಭಯೋತ್ಪಾದಕರು, ಕೊಲೆಗಾರರು, ಮಾನವರಲ್ಲದವರು ಪ್ರತೀಕಾರ ಮತ್ತು ಕಠಿಣ ಶಿಕ್ಷೆಗೊಳಪಡುತ್ತಾರೆ ಎಂದು ಹೇಳಿದ್ದಾರೆ.
ಬಂಧಿತ ನಾಲ್ವರು ದಾಳಿಕೋರರು ದಾಳಿ ನಡೆಸಿದ ನಂತರ ಉಕ್ರೇನ್ ಕಡೆಗೆ ತಪ್ಪಿಸಿಕೊಳ್ಳಲು ಯತ್ನಿಸಿದ್ದರು. ದಾಳಿಕೋರರನ್ನು ರಷ್ಯಾದಿಂದ ಗಡಿ ದಾಟಿಸಲು ಉಕ್ರೇನಿಯನ್ ಕಡೆಯ ಕೆಲವರು ಸಿದ್ಧತೆ ನಡೆಸಿದ್ದಾರೆ ಎಂದು ರಾಯಿಟರ್ಸ್ ವರದಿ ಮಾಡಿದೆ.
ಉಕ್ರೇನ್ ಸಹಜವಾಗಿ ಈ ಭಯೋತ್ಪಾದಕ ದಾಳಿಯಲ್ಲಿ ಭಾಗಿಯಾಗಿಲ್ಲ. ಆಕ್ರಮಣಕಾರರ ಸೈನ್ಯ ಮತ್ತು ಮಿಲಿಟರಿ ಗುರಿಗಳೊಂದಿಗೆ ಹೋರಾಡುತ್ತಿದೆ, ನಾಗರಿಕರೊಂದಿಗೆ ಅಲ್ಲ ಎಂದು ಉಕ್ರೇನ್ ಹೇಳಿದೆ.