ಪುತ್ತೂರು :ದಕ್ಷಿಣ ಕನ್ನಡದಲ್ಲಿ ಫೆಂಗಾಲ್ ಚಂಡಮಾರುತ ಪರಿಣಾಮವಾಗಿ ಭಾರಿ ಗಾಳಿಮಳೆಯಾಗಿದೆ, ಜೊತೆಗೆ ಜನಜೀವನವು ಕೂಡ ಅಸ್ತವ್ಯಸ್ತಗೊಂಡಿದೆ. ಮಂಗಳೂರು ನಗರ ಸೇರಿದಂತೆ ದ.ಕನ್ನಡ ಜಿಲ್ಲೆಯ ಕೆಲವು ಕಡೆ ಕೃತಕ ನೆರೆ ಸೃಷ್ಟಿಯಾಗಿದೆ.ಪುತ್ತೂರಿನಲ್ಲಿ ಸಿಡಿಲು ಓರ್ವ ಯುವಕನನ್ನು ಬಲಿ ಪಡೆದಿದೆ.
ಪುತ್ತೂರಿನ ಕೆಯ್ಯೂರು ಬಳಿ ಈ ಘಟನೆ ನಡೆದಿದ್ದು ಮೃತರನ್ನು 25 ವರ್ಷದ ನಾರಾಯಣ ಎಂದು ಗುರುತಿಸಲಾಗಿದೆ. ನೆರೆ ಮನೆಯ ಕೆಟ್ಟು ಹೋದ ವಿದ್ಯುತ್ ಬಲ್ಬ್ ನ್ನು ಸರಿಪಡಿಸಲು ಹೋದಾಗ ಸಿಡಿಲು ಬಡಿದು ನಾರಾಯಣ ಸಾವನ್ನಪ್ಪಿದ್ದಾರೆ.
ಬಂಟ್ವಾಳ ದಲ್ಲಿ ಮನೆಯೊಂದಕ್ಕೆ ಸಿಡಿಲು ಬಡಿದು ಅಪಾರ ಪ್ರಮಾಣದಲ್ಲಿ ಹಾನಿಯಾಗಿದೆ. ಮನೆ ಮಂದಿ ಯಾವುದೇ ತೊಂದರೆ ಇಲ್ಲದೆ ಪಾರಾಗಿದ್ದಾರೆ.
ಫೆಂಗಲ್ ಚಂಡಮಾರುತ ಪರಿಣಾಮದಿಂದಾಗಿ ಮಂಗಳವಾರ ಮಂಗಳೂರಿನಲ್ಲಿ ನಡೆಯಬೇಕಿದ್ದ ಬಹುಸಂಸ್ಕೃತಿ ಉತ್ಸವವನ್ನು ಮುಂದೂಡಲಾಗಿದೆ