ಗಾಯದ ಕಾರಣದಿಂದ ವಿಶ್ವಚಾಂಪಿನ್ ಶಿಪ್ ಟೂರ್ನಿಯಿಂದ ಹೊರಗುಳಿದ ಪಿವಿ ಸಿಂಧು…
ಭಾರತದ ಸ್ಟಾರ್ ಷಟ್ಲರ್ ಪಿವಿ ಸಿಂಧು ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ ನಿಂದ ಹೊರಗುಳಿದಿದ್ದಾರೆ. ಕಾಲಿನ ಗಾಯದಿಂದಾಗಿ ಅವರು ಟೂರ್ನಿಯಲ್ಲಿ ಭಾಗವಹಿಸುತ್ತಿಲ್ಲ. ಸಿಂಧು ಇತ್ತೀಚೆಗೆ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಮಹಿಳೆಯರ ಸಿಂಗಲ್ಸ್ನಲ್ಲಿ ಗಾಯದ ನಡುವೆಯೂ ಫೈನಲ್ ನಲ್ಲಿ ಆಡಿ ಚಿನ್ನ ಗೆದ್ದಿದ್ದರು.
ಗಾಯದ ಸಮಸ್ಯೆಯಿಂದಾಗಿ ಸಿಂಧು ದೆಹಲಿಯಲ್ಲಿ ನಡೆದ ಭಾರತೀಯ ಒಲಿಂಪಿಕ್ ಸಂಸ್ಥೆ (ಐಒಎ) ಗೌರವ ಸಮಾರಂಭದಲ್ಲಿ ಭಾಗವಹಿಸಿರಲಿಲ್ಲ. ಐಒಎ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಪದಕ ವಿಜೇತರಿಗೆ ಸನ್ಮಾನ ಸಮಾರಂಭವನ್ನು ಆಯೋಜಿಸಿತ್ತು.
ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ ಆಗಸ್ಟ್ 21 ರಂದು ಆರಂಭವಾಗಿ ಆಗಸ್ಟ್ 28 ರವರೆಗೆ ನಡೆಯಲಿದೆ. ಸಿಂಧು ವಿಶ್ವ ಚಾಂಪಿಯನ್ಶಿಪ್ನಲ್ಲಿ ಅದ್ಭುತ ದಾಖಲೆ ಹೊಂದಿದ್ದಾರೆ. 2019 ರಲ್ಲಿ ಚಿನ್ನದ ಪದಕವನ್ನು ಗೆದ್ದಿದ್ದರು. ಈ ಟೂರ್ನಿಯಲ್ಲಿ ಎರಡು ಬೆಳ್ಳಿ ಹಾಗೂ ಎರಡು ಕಂಚಿನ ಪದಕವನ್ನೂ ಗೆದ್ದಿದ್ದಾರೆ.
PV Sindhu Will Not Play In World Championship Due To Injury Did Not Participate In IOA Felicitation Ceremony