‘ಕನ್ನಡ ಭಾಷೆ ವಿಶ್ವ ಲಿಪಿಗಳ ರಾಣಿ’ : ಕನ್ನಡಿಗರ ಗುಡುಗು.. ಗೂಗಲ್ ಸರ್ಚ್ ಗೆ ಬೆಂಕಿ kannada
ಬೆಂಗಳೂರು : ಗೂಗಲ್ ಸರ್ಚ್ ಎಂಜಿನ್ ನಲ್ಲಿ ಕನ್ನಡ ಭಾಷೆಗೆ ಆದ ಪ್ರಮಾದದಿಂದ ಕನ್ನಡಿಗರು ಸಿಡಿದೆದ್ದಿದ್ದಾರೆ.
ಕನ್ನಡ ಭಾಷಾ ಪ್ರೇಮಿಗಳು, ಸೆಲೆಬ್ರಿಟಿಗಳು, ಸಾಮಾನ್ಯ ಜನರು, ಜನಪ್ರತಿನಿಧಿಗಳು ಸೋಶಿಯಲ್ ಮೀಡಿಯಾದಲ್ಲಿ Queen of languages in the world is ‘ಕನ್ನಡ’ ಅಂತ ಗೂಗಲ್ ನಲ್ಲಿ ಸರ್ಚ್ ಮಾಡಲು ಕರೆ ನೀಡಿದ್ದಾರೆ.
ಕನ್ನಡವನ್ನು ಅಗ್ಲಿ ಲಾಂಗ್ವೇಜ್ ಎಂದು ಅಪಮಾನಿಸುವ debtconsolidationsquad.com ಎಂಬ ಜಾಲತಾಣದ ವಿರುದ್ಧ ಜನ ಕಿಡಿಕಾರಿದ್ದರು.
ತಕ್ಷಣವೇ ಗೂಗಲ್ ಅದನ್ನು ತೆಗೆದು ಹಾಕಿತ್ತು. ಈಗ ಗೂಗಲ್ ಸರ್ಚ್ ಎಂಜಿನ್ ನಲ್ಲಿ ಬಹುತೇಕರು Queen of languages in world (ಭಾಷೆಗಳ ರಾಣಿ) ಎಂದು ಹುಡುಕುತ್ತಿದ್ದಾರೆ. ಈ ಸರ್ಚ್ ಗೆ ಗೂಗಲ್ ಎಂಜಿನ್ ವಿಶ್ವ ಲಿಪಿಗಳ ರಾಣಿ ಕನ್ನಡ ಭಾಷೆ ಎಂದು ತೋರಿಸುತ್ತಿದೆ.
ಭೂದಾನ ಚಳವಳಿಯ ಹರಿಕಾರ ಆಚಾರ್ಯ ವಿನೋಬಾ ಭಾವೆ ಅವರು ಕನ್ನಡವನ್ನು ವಿಶ್ವ ಲಿಪಿಗಳ ರಾಣಿ ಎಂದು ಕರೆದಿದ್ದಾರೆ. ಕನ್ನಡಿಗರು ಈಗ ಇದೇ ಹೇಳಿಕೆಯನ್ನು ಖುಷಿಯಿಂದ ಹಂಚಿಕೊಂಡಿದ್ದಾರೆ. ಸದ್ಯ ಗೂಗಲ್ ಸರ್ಚ್ ಕನ್ನಡಮಯಂ ಆಗುತ್ತಿದೆ.
ಸಾಕಷ್ಟು ತಾರೆಯರು, ಕ್ಷೇತ್ರಗಳ ಬೌಂಡರಿಗಳಿಲ್ಲದೇ ಒಟ್ಟಾಗಿ ಕನ್ನಡ ಭಾಷೆಯ ಪರ ಸೋಶಿಯಲ್ ಮೀಡಿಯಾದಲ್ಲಿ ಧ್ವನಿ ಎತ್ತುತ್ತಿದ್ದಾರೆ. ಅಲ್ಲದೆ Queen of languages in the world is ‘ಕನ್ನಡ’ ಅಂತ ಗೂಗಲ್ ನಲ್ಲಿ ಸರ್ಚ್ ಮಾಡಲು ಕರೆ ನೀಡಿದ್ದಾರೆ.