ರಾಮನ ಲೆಕ್ಕ ಕೇಳಲು ಇವರು ಯಾರು : ಹೆಚ್ ಡಿಕೆ ವಿರುದ್ಧ ಸಾಮ್ರಾಟ್ ಕಿಡಿ
ಬೆಂಗಳೂರು : ರಾಮನ ಲೆಕ್ಕ ಕೇಳಲು ಇವರು ಯಾರು..? ಇವರಂತೂ ನಯಾಪೈಸೆ ಕೊಟ್ಟಿಲ್ಲ. ಕೊಡೋರನ್ನ ಬೇಡ ಅನ್ನೋಕೆ ಇವರು ಯಾರು ಅಂತಾ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ವಿರುದ್ಧ ಸಚಿವ ಆರ್.ಅಶೋಕ್ ವಾಗ್ದಾಳಿ ನಡೆಸಿದ್ದಾರೆ.
ರಾಮಮಂದಿರಕ್ಕೆ ದೇಣಿಗೆ ನೀಡದ್ದಕ್ಕೆ ನನಗೆ ಬೆದರಿಕೆ ಹಾಕಿದ್ರು. ಹಣ ಸಂಗ್ರಹದಲ್ಲಿ ಭಾರಿ ಅವ್ಯವಹಾರ ನಡೆಯುತ್ತಿದೆ ಎಂಬ ಹೆಚ್ ಡಿ ಕುಮಾರಸ್ವಾಮಿ ಅವರ ಆರೋಪಕ್ಕೆ ಇಂದು ಬೆಂಗಳೂರಿನಲ್ಲಿ ಆರ್.ಅಶೋಕ್ ಪ್ರತಿಕ್ರಿಯೆ ನೀಡಿದರು.
ವಿಧಾನಸೌಧದ ಬಳಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ರಾಮಮಂದಿರ ನಿರ್ಮಾಣಕ್ಕೆ ಕುಮಾರಸ್ವಾಮಿ ಒಂದು ಪೈಸೆಯನ್ನೂ ನೀಡಿಲ್ಲ. ದೇಣಿಗೆ ಲೆಕ್ಕದಲ್ಲಿ ಅವ್ಯವಹಾರ ಆಗಿದ್ರೆ ತೋರಿಸಲಿ. ರಾಜ್ಯದಲ್ಲಿ ಯಾರಾದರೂ ಕುಮಾರಸ್ವಾಮಿಗೆ ಧಮಕಿ ಹಾಕಲು ಆಗುತ್ತಾ. ಇವರೇ ಇನ್ನೊಬ್ಬರಿಗೆ ಧಮ್ಕಿ ಹಾಕುತ್ತಾರೆ ಎಂದು ವ್ಯಂಗ್ಯವಾಡಿದರು.
ರಾಮನ ಲೆಕ್ಕದಲ್ಲಿ ಅವ್ಯವಹಾರ ಆರೋಪ ವಿಚಾರವಾಗಿ ಮಾತನಾಡಿ, ರಾಮನ ಲೆಕ್ಕ ಕೇಳಲು ಇವರು ಯಾರು. ಇವರಂತೂ ನಯಾಪೈಸೆ ಕೊಟ್ಟಿಲ್ಲ. ಕೊಡೋರನ್ನ ಬೇಡ ಅನ್ನೋಕೆ ಇವರು ಯಾರು ಎಂದು ಪ್ರಶ್ನಿಸಿದರು. ಇನ್ನು ಇವರದೇ ಪಕ್ಷದ ಶಾಸಕರು ದೇಣಿಗೆ ಕೊಟ್ಟಿದ್ದಾರೆ. ಇವರ ಮಾತನ್ನ ಅವರದೇ ಪಕ್ಷದ ಶಾಸಕರು ಕೇಳೋದಿಲ್ಲ. ಈಗಾಗಲೇ ಆರ್‍ಟಿಜಿಎಸ್, ಚೆಕ್, ಆನ್ ಲೈನ್ ಮೂಲಕ ದೇಣಿಗೆ ನೀಡುವ ವ್ಯವಸ್ಥೆ ಇದೆ. ಇದರಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ.
ಇದನ್ನೂ ಓದಿ : ಹಿಂದೂಗಳನ್ನ ಹಿಯಾಳಿಸೋದೆ ಸಿದ್ದರಾಮಯ್ಯ ಚಾಳಿ : ಅಶೋಕ್ ಗರಂ
ಇನ್ನು ಮೀಸಲಾತಿ ವಿಚಾರವಾಗಿ ಮಾತನಾಡಿ, ರಾಜ್ಯದ ಎಲ್ಲಾ ಸಮಾಜದ ಸ್ವಾಮಿಜೀಗಳು ನಾಯಕರು ಮೀಸಲಾತಿ ಬೇಡಿಕೆ ಇಟ್ಟಿದ್ದಾರೆ. ಕಾನೂನಾತ್ಮಾಕವಾಗಿ ಆಯೋಗ ಈ ಬಗ್ಗೆ ಚರ್ಚೆ ಮಾಡಿ, ಅಧ್ಯಯನ ನಡೆಸಿ ವರದಿ ನೀಡುತ್ತೆ. ಆ ನಂತರ ಸಚಿವ ಸಂಪುಟದಲ್ಲಿ ಇಟ್ಟು ಚರ್ಚೆ ಮಾಡ್ತೀವಿ. ಸಿಎಂ ಅವರು ಕಾನೂನು ತಜ್ಞರ ಜೊತೆ ಚರ್ಚೆ ಮಾಡ್ತಿದ್ದಾರೆ. ಸೂಕ್ತ ಕಾಲದಲ್ಲಿ ಸೂಕ್ತ ನಿರ್ಧಾರ ಮಾಡ್ತಾರೆ. ಸ್ವಾಮಿಜಿಗಳು ದಯಮಾಡಿ ಈ ವಿಚಾರವಾಗಿ ಗಡುವವನ್ನು ನೀಡಬೇಡಿ ಎಂದು ಮನವಿ ಮಾಡಿಕೊಂಡರು.