ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC) ಮತ್ತು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗಳು (BMTC) ಬಸ್ ಟಿಕೆಟ್ ದರವನ್ನು 15% ಏರಿಸಿವೆ. ಈ ದರ ಏರಿಕೆಯು ಬೆಂಗಳೂರು ನಗರ ಪ್ರಯಾಣಿಕರಿಗೆ ಮತ್ತು ಬೆಂಗಳೂರಿನಿಂದ ವಿವಿಧ ಜಿಲ್ಲೆಗಳಿಗೆ ಪ್ರಯಾಣಿಸುವ ಪ್ರಯಾಣಿಕರ ಮೇಲೆ ಪರಿಣಾಮ ಬೀಳಲಿದೆ.ಹಾಗದ್ರೆ ಎಷ್ಟು ಹೆಚ್ಚಾಗಿದೆ ಎಂದು ಈಗ ತಿಳಿಯೋಣ…ಮೊದಲಿಗೆ ಬೆಂಗಳೂರಿನಲ್ಲಿ ಪ್ರಸ್ತುತ ದರ ಮತ್ತು ಪರಿಷ್ಕೃತ ದರ ಎಷ್ಟು ಹೆಚ್ಚಾಗಿದೆ ತಿಳಿಯೋಣ…
ಕೆಂಪೇಗೌಡ ಬಸ್ ನಿಲ್ದಾಣ ಮೆಜೆಸ್ಟಿಕ್ – ಜಯನಗರ ಹಿಂದಿನ ದರ 20 ರೂಪಾಯಿ 15% ಹೆಚ್ಚಳದ ಬಳಿಕ 23 ರೂಪಾಯಿ. ಮೆಜೆಸ್ಟಿಕ್-ಸರ್ಜಾಪುರ ಪ್ರಸ್ತುತ ದರ 25 ರೂಪಾಯಿ, ಹೆಚ್ಚಳವಾದ ಬಳಿಕ 28 ರೂಪಾಯಿ. ಮೆಜೆಸ್ಟಿಕ್-ಅತ್ತಿಬೆಲೆ ಪ್ರಸ್ತುತ ದರ 25 ರೂಪಾಯಿ, ಬೆಲೆ ಹೆಚ್ಚಳದ ಬಳಿಕ 28 ರೂಪಾಯಿ. ಮೆಜೆಸ್ಟಿಕ್-ಹಾರೊಹಳ್ಳಿ ಪ್ರಸ್ತುತ ದರ 25, ಪರಿಷ್ಕರಣೆಯಾದ ಬಳಿಕ 28.75 ರೂಪಾಯಿ ಆಗಲಿದೆ.
ಮೆಜೆಸ್ಟಿಕ್-ಬನಶಂಕರಿ ಈಗಿನ ದರ 20 ರೂಪಾಯಿ, ಪರಿಷ್ಕೃತ ದರದ ಬಳಿಕ 23 ರೂಪಾಯಿ ಆಗಲಿದೆ. ಮೆಜೆಸ್ಟಿಕ್-ಏರ್ ಪೋರ್ಟ್ ಪ್ರಸ್ತುತ ದರ 235 ರೂಪಾಯಿ, ಪರಿಷ್ಕರಣೆಯಾದ ಬಳಿಕ 270 ರೂಪಾಯಿ ಹೆಚ್ಚಳವಾಗಲಿದೆ.
ಬೆಂಗಳೂರಿನಿಂದ ವಿವಿಧ ಜಿಲ್ಲೆಗಳಿಗೆ ಬಸ್ ಟಿಕೆಟ್ ದರಗಳು:
1.ಮೈಸೂರು: ಈಗ ₹300, ಹಿಂದಿನ ₹260.
2.ಮಂಗಳೂರು: ಈಗ ₹575, ಹಿಂದಿನ ₹500.
3.ಹುಬ್ಬಳ್ಳಿ: ಈಗ ₹460, ಹಿಂದಿನ ₹400.
4.ದಾವಣಗೆರೆ: ಈಗ ₹345, ಹಿಂದಿನ ₹300.
5.ಚಿಕ್ಕಮಗಳೂರು: ಈಗ ₹345, ಹಿಂದಿನ ₹300.
ಈ ದರ ಏರಿಕೆಯಿಂದ ಪ್ರಯಾಣಿಕರು ತತ್ತರಿಸಿದ್ದು, KSRTC ಮತ್ತು BMTC ಗಳು ಈ ನಿರ್ಧಾರವನ್ನು ಇಂಧನ ದರ ಏರಿಕೆ ಮತ್ತು ನಿರ್ವಹಣಾ ವೆಚ್ಚ ಹೆಚ್ಚಳದ ಕಾರಣದಿಂದ ತೆಗೆದುಕೊಂಡಿದೆ ಎಂದು ತಿಳಿಸಿವೆ.
ಪ್ರಯಾಣಿಕರ ಪ್ರತಿಕ್ರಿಯೆ:
ಪ್ರಯಾಣಿಕರು ಈ ದರ ಏರಿಕೆಯನ್ನು ತೀವ್ರವಾಗಿ ವಿರೋಧಿಸುತ್ತಿದ್ದಾರೆ. “ಈ ದರ ಏರಿಕೆಯಿಂದ ನಮ್ಮ ದಿನನಿತ್ಯದ ಪ್ರಯಾಣದ ವೆಚ್ಚ ಹೆಚ್ಚಾಗಿದೆ,” ಬದುಕು ಬಲು ಕಷ್ಟ “ಎಂದು ಬೆಂಗಳೂರಿನ ಉದ್ಯೋಗಿಯೊಬ್ಬರು ಹೇಳಿದ್ದಾರೆ. “KSRTC & BMTC ಈ ನಿರ್ಧಾರವನ್ನು ಪುನರ್ವಿಚಾರಿಸಬೇಕು,” ಎಂದು ಅವರು ಒತ್ತಾಯಿಸಿದ್ದಾರೆ.
KSRTC ಸ್ಪಷ್ಟನೆ:
KSRTC ಅಧಿಕಾರಿಗಳು ಈ ದರ ಏರಿಕೆಯನ್ನು ಸಮರ್ಥಿಸುತ್ತಾ, “ಇಂಧನ ದರ ಏರಿಕೆ ಮತ್ತು ನಿರ್ವಹಣಾ ವೆಚ್ಚ ಹೆಚ್ಚಳದ ಕಾರಣದಿಂದ ಬಸ್ ಟಿಕೆಟ್ ದರವನ್ನು ಏರಿಸಲಾಗಿದೆ,” ಎಂದು ಹೇಳಿದ್ದಾರೆ. “ಪ್ರಯಾಣಿಕರ ಅನುಕೂಲಕ್ಕಾಗಿ ನಾವು ಉತ್ತಮ ಸೇವೆಗಳನ್ನು ನೀಡಲು ಬದ್ಧರಾಗಿದ್ದೇವೆ,” ಎಂದು ಅವರು ಹೇಳಿದ್ದಾರೆ.








