ಕಾಂಗ್ರೆಸ್ ನದ್ದು ಮನೆಯೊಂದು ಮೂರು ಬಾಗಿಲು ಪರಿಸ್ಥಿತಿ : ಆರ್.ಅಶೋಕ್
ಬೆಂಗಳೂರು : ಸದ್ಯ ಕಾಂಗ್ರೆಸ್ ನದ್ದು ಮನೆಯೊಂದು ಮೂರು ಬಾಗಿಲುನಂತಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಲೇವಡಿ ಮಾಡಿದ್ದಾರೆ.
ಶಿರಾ ಮತ್ತು ರಾಜರಾಜೇಶ್ವರಿ ನಗರ ಉಪಚುನಾವಣೆ ಮತ ಎಣಿಕೆ ನಡೆಯುತ್ತಿದ್ದು, ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ.
ಈ ವಿಚಾರವಾಗಿ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಅಶೋಕ್, ಆರ್ ಆರ್ ನಗರದಲ್ಲಿ ಮುನಿರತ್ನ ಬಹುದೊಡ್ಡ ಅಂತರದಿಂದ ಗೆಲ್ಲಲಿದ್ದಾರೆ. ಇದೊಂದು ವಿರೋಚಿತ ಗೆಲುವು.
ಡಿ.ಕೆ.ಶಿವಕುಮಾರ್ ಅವರು ಆರ್.ಆರ್.ನಗರ ಉಪಚುನಾವಣೆಯನ್ನು ಸವಾಲಾಗಿ ಸ್ವೀಕರಿಸಿದ್ದರು. ನಾನು ಸಹ ಡಿಕೆಶಿ ವಿರುದ್ಧ ಕ್ಷೇತ್ರವನ್ನು ಸವಾಲಾಗಿ ಸ್ವೀಕರಿಸಿದ್ದೆ. ಇದೀಗ ಬಹುದೊಡ್ಡ ಅಂತರದಲ್ಲಿ ನಾವು ಗೆಲುವು ಸಾಧಿಸುತ್ತೇವೆ ಎಂದು ಭರವಸೆ ವ್ಯಕ್ತಪಡಿಸಿದರು.
ಡಿ.ಕೆ.ಶಿವಕುಮಾರ್ ನಿನ್ನೆ ಕೂಡ ನಾವು ಗೆದ್ದೇ ಗೆಲ್ಲುತ್ತೇವೆ ಎಂದು ಹೇಳಿದ್ದಾರೆ. ನಮಗೆ ಬಿಜೆಪಿ, ಜೆಡಿಎಸ್ ಹಾಗೂ ಕಾಂಗ್ರೆಸ್ ಮೂರು ಪಕ್ಷದವರು ಮತ ಹಾಕಿದ್ದಾರೆ ಎಂದಿದ್ದಾರೆ.
ಆದ್ರೆ ಮೂರೂ ಪಕ್ಷದವರು ಮತ ಹಾಕಿದರೆ ಗೆಲ್ಲುವುದಿಲ್ಲ, ಯಾವುದಾದರೂ ಒಂದು ಪಕ್ಷಕ್ಕೆ ಮತ ಹಾಕಿದರೆ ಮಾತ್ರ ಗೆಲ್ಲುತ್ತಾರೆ. ಸದ್ಯ ಕಾಂಗ್ರೆಸ್ ಮನೆಯೊಂದು ಮೂರು ಬಾಗಿಲು ಸ್ಥಿತಿ ಅವರದ್ದಾಗಿದೆ ಎಂದು ಟಾಂಗ್ ನೀಡಿದರು.
ಬಿಹಾರದಲ್ಲಿ ಎನ್ ಡಿಎ ಕಮಾಲ್ : ಸುಳ್ಳಾಗುತ್ತಾ ಚುನಾವಣೋತ್ತರ ಸಮೀಕ್ಷೆ ?
ನಾನು ರಾಜರಾಜೇಶ್ವರಿ ನಗರದಲ್ಲಿ ಸುಮಾರು 12 ದಿನ ಮೊಕ್ಕಾಂ ಹೂಡಿ ಕೆಲಸ ಮಾಡಿದ್ದೇನೆ. ಇದೀಗ ಭರ್ಜರಿ ಗೆಲುವು ದಾಖಲಿಸುತ್ತಿದ್ದೇವೆ. ಆರ್ ಆರ್ ನಗರ ಕ್ಷೇತ್ರದ ಉಸ್ತುವಾರಿಯನ್ನು ಸಿಎಂ ನನಗೆ ನೀಡಿದ್ದರು.
ನಾನು ಎರಡು ಬಾರಿ ಶಾಸಕನಾಗಿದ್ದರಿಂದ ಆರ್ ಆರ್ ನಗರದ ಜನರ ನಾಡಿಮಿಡಿತ ಗೊತ್ತಿತ್ತು. 35 ಸಾವಿರ ಮತಗಳ ಅಂತರದಿಂದ ಗೆಲ್ಲುತ್ತೇವೆ ಎಂದು ಮೊದಲಿಂದಲೂ ಹೇಳಿದ್ದೆ.
ಈಗಿನ ಟ್ರೆಂಡ್ ನೋಡಿದರೆ 35 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಿಡಿಸಿ, ಈ ಚುನಾವಣೆ ಮಹಾನಗರಪಾಲಿಕೆ ಚುನಾವಣೆಗೆ ಮುನ್ನುಡಿಯಾಗಲಿದೆ. ಮಹಾನಗರ ಪಾಲಿಕೆ ಚುನಾವಣೆಯನ್ನ ಬಿಜೆಪಿಯೇ ಗೆಲ್ಲಲಿದೆ ಎಂದು ಭವಿಷ್ಯ ನುಡಿದಿದ್ದಾರೆ.
ಇದೇ ವೇಳೆ ಸಿಎಂ ಬದಲಾವಣೆ ಕುರಿತು ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದ ಅಶೋಕ್, ನಾಯಕತ್ವ ಬದಲಾಗುತ್ತೆ. ಆದರೆ ಯಡಿಯೂರಪ್ಪನವರದಲ್ಲ, ಸಿದ್ದರಾಮಯ್ಯನವರದು.
ಎರಡೂ ಕ್ಷೇತ್ರಗಳಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಸೋಲಿನ ಅಂಚಿಗೆ ಬಂದಿದ್ದಾರೆ. ಹೀಗಾಗಿ ಸಿದ್ದರಾಮಯ್ಯನವರ ನಾಯಕತ್ವವೇ ಪ್ರಶ್ನೆಯಾಗಿದೆ.
ಆರ್.ಆರ್ ನಗರ, ಶಿರಾದಲ್ಲಿ ಬಿಜೆಪಿ ನಾಗಾಲೋಟ..ಮಂಕಾದ ಕೈ-ದಳ..!
ಅವರು ಯಡಿಯೂರಪ್ಪನವರಿಗೆ ಸವಾಲು ಹಾಕಿದ್ದರು. ಈಗ ಯಾರನ್ನು ತೆಗೆಯುತ್ತಾರೆ ಎಂದು ರಾಜ್ಯದ ಜನ ಸ್ಪಷ್ಟ ಸಂದೇಶ ಕೊಟ್ಟಿದ್ದಾರೆ. ಈಗ ಕಾಂಗ್ರೆಸ್ ಪಕ್ಷ ಸೋಲನುಭವಿಸುತ್ತಿದೆ. ಯಾರನ್ನ ನಾಯಕತ್ವದಿಂದ ತೆಗೆಯುತ್ತಾರೋ ಗೊತ್ತಾಗುತ್ತೆ ಎಂದು ಕಿಡಿಕಾರಿದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel