ADVERTISEMENT
Wednesday, November 25, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಕಾಂಗ್ರೆಸ್ ಕಾರ್ಯಕರ್ತರ ಗಂಜಿ ಕೇಂದ್ರಕ್ಕೆ 2,000 ಕೋಟಿ, ಆಶಾ ಕಾರ್ಯಕರ್ತೆಯರಿಗೆ 480 ಕೋಟಿ ರೂ. ನೀಡಲು ಆಗಲ್ಲ: ಪ್ರತಿಪಕ್ಷ ನಾಯಕ ಆರ್.ಅಶೋಕ

admin by admin
November 25, 2026
in Newsbeat, State, ರಾಜ್ಯ
r-ashoka-slams-congress-govt-over-asha-workers-protest-demands-480-crore-allocation-bengaluru

r-ashoka-slams-congress-govt-over-asha-workers-protest-demands-480-crore-allocation-bengaluru

Share on FacebookShare on TwitterShare on WhatsappShare on Telegram

ಬೆಂಗಳೂರು,  ಕಾಂಗ್ರೆಸ್ ಕಾರ್ಯಕರ್ತರ ಗಂಜಿ ಕೇಂದ್ರಕ್ಕೆ ಸುಮಾರು 2,000 ಕೋಟಿ ರೂ. ಖರ್ಚು ಮಾಡುವ ಸರ್ಕಾರ, ಆಶಾ ಕಾರ್ಯಕರ್ತೆಯರಿಗೆ 480 ಕೋಟಿ ರೂ. ನೀಡಲು ಮುಂದಾಗುತ್ತಿಲ್ಲ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ದೂರಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರದ ಮೇಲೆ ಎಲ್ಲರೂ ಅಸಮಾಧಾನಗೊಂಡಿದ್ದಾರೆ. ಕಾಂಗ್ರೆಸ್ ಶಾಸಕರೇ ಆನೆ ವಿಚಾರದಲ್ಲಿ ಸರ್ಕಾರದ ಮೇಲೆ ಬೇಸರಗೊಂಡಿದ್ದಾರೆ. ಆಶಾ ಕಾರ್ಯಕರ್ತೆಯರು ಮಳೆ ಚಳಿಯಲ್ಲಿ ಹೋರಾಟ ಮಾಡುತ್ತಿದ್ದರೂ ಅವರಿಗೆ ಯಾವುದೇ ವ್ಯವಸ್ಥೆ ಮಾಡಿಲ್ಲ. ಮುಖ್ಯಮಂತ್ರಿ ಜರ್ಮನಿ,‌ ಜಪಾನ್ ಪ್ರವಾಸ ಮಾಡಲಿ. ಆದರೆ ಹೋರಾಟಗಾರರ ರಕ್ಷಣೆಗೆ ಸರಿಯಾದ ವ್ಯವಸ್ಥೆ ಮಾಡಬೇಕಿತ್ತು. ಜಪಾನ್ ನ ರಸ್ತೆ, ಕಸ ವಿಲೇವಾರಿ ವ್ಯವಸ್ಥೆ ನೋಡುತ್ತಿದ್ದಾರೆ. ಆದರೆ ಬೆಂಗಳೂರನ್ನೇ ಇವರು ಸುತ್ತಾಡಿಲ್ಲ ಎಂದು ವ್ಯಂಗ್ಯವಾಡಿದರು.

Related posts

bjp-alleges-threefold-hike-in-bengaluru-whitetopping-cost-2321-crore-cabinet-approval

ವೈಟ್‌ಟಾಪಿಂಗ್ ವೆಚ್ಚ ಮೂರು ಪಟ್ಟು ಹೆಚ್ಚಳ: ಕಮಿಷನ್ ಲೂಟಿಗೆ ಕಾಂಗ್ರೆಸ್‌ ಸರ್ಕಾರದ ಸ್ಕೆಚ್‌?

November 25, 2026
wadhwani-grants-3-to-5-years-funding-for-startups-msme-skill-training-institutes-how-to-apply

ಸ್ಟಾರ್ಟಪ್, ಎಂಎಸ್‌ಎಂಇ, ಕೌಶಲ್ಯ ತರಬೇತಿ ಸಂಸ್ಥೆಗಳಿಗೆ 3 – 5 ವರ್ಷ ಅನುದಾನ: ಅರ್ಜಿ ಸಲ್ಲಿಸುವುದು ಹೇಗೆ?

November 25, 2026

ಆಶಾ ಕಾರ್ಯಕರ್ತೆಯರು ಹೋರಾಟ ಆರಂಭಿಸಿ ಹತ್ತು ದಿನಗಳಾಗಿದೆ. ಬೆಳಗಾವಿ ಅಧಿವೇಶನ ಆರಂಭವಾದರೆ ಅಧಿಕಾರಿಗಳು ಗಂಟು ಮೂಟೆ ಕಟ್ಟಿಕೊಂಡು ಹೋದರೆ ಮತ್ತೆ ಇಲ್ಲಿ ಯಾರೂ ಇರುವುದಿಲ್ಲ. ಇಷ್ಟು ವರ್ಷದಲ್ಲಿ ಇವರು ಬೆಂಗಳೂರಿಗೆ ಏನೂ ಮಾಡದೆ ಕಂಪನಿಗಳು ಮಹಾರಾಷ್ಟ್ರ, ಆಂಧ್ರಕ್ಕೆ ಹೋಗುತ್ತಿವೆ.‌ ಆಶಾ ಕಾರ್ಯಕರ್ತೆಯರನ್ನು ಸಿಎಂ ಸಹೋದರಿ ಎಂದು ಕರೆಯುತ್ತಾರೆ. ಈಗ ಅವರೇ ಬಂಡೆ ಹೃದಯ ಎಂದು ಸಾಬೀತುಪಡಿಸಿದ್ದಾರೆ. ತಾಯಂದಿರ ಮತದಲ್ಲಿ ನಾವು ಗೆದ್ದಿದ್ದೇವೆ ಎನ್ನುತ್ತಾರೆ. ವೀಡಿಯೋ ಕಾಲ್ ಮಾಡುವ ಬದಲು ನೇರವಾಗಿ ಫ್ರೀಡಂ ಪಾರ್ಕ್ ಗೆ ಬಂದು ಅಹವಾಲು ಆಲಿಸಲಿ. ಇಲ್ಲವಾದರೆ ಡಿ.ಕೆ.ಶಿವಕುಮಾರ್ ರಿಯಲ್ ಎಸ್ಟೇಟ್ ಉದ್ಯಮಿ ಎಂದು ಸಾಬೀತಾಗುತ್ತದೆ ಎಂದರು.

ಸೋನಿಯಾ ಗಾಂಧಿಯವರ ಪುಸ್ತಕ ಬಿಡುಗಡೆಗೆ ಎಲ್ಲಿಲ್ಲದ ಉತ್ಸಾಹ ತೋರಿದ್ದರು. ಪಕ್ಷದಲ್ಲಿ ಎಲ್ಲರೂ ಖರೀದಿ ಮಾಡುವುದನ್ನು ಕಡ್ಡಾಯಗೊಳಿಸಲಾಗಿದೆ. ಸಚಿವ ಮುನಿಯಪ್ಪ ಹತ್ತು ಸಾವಿರ ಪುಸ್ತಕ ಖರೀದಿ ಮಾಡುವುದಾಗಿ ಹೇಳಿದ್ದಾರೆ. ಪುಸ್ತಕ ಮಾರಾಟಕ್ಕೂ ಮೊದಲು ಜನರ ಸಮಸ್ಯೆ ಆಲಿಸಬೇಕು. ಆ ಪುಸ್ತಕದ ಬರವಣಿಗೆ ಹೇಗೂ ಹಾಳಾಗಿದೆ. ಇದಕ್ಕೆ ತೋರುವ ಉತ್ಸಾಹವನ್ನು ಆಶಾ ಹೋರಾಟಗಾರರ ಸಮಸ್ಯೆ ಈಡೇರಿಸಲು ತೋರಿಸಲಿ. ಪ್ರಣಾಳಿಕೆಯಲ್ಲಿ ಹೇಳಿರುವುದನ್ನೇ ಈಡೇರಿಸಿದರೂ ಸಾಕು. ನಮ್ಮ ಸರ್ಕಾರದ ಅವಧಿಯಲ್ಲಿ ಪ್ರಧಾನಿ ಮೋದಿ 1,000 ರೂ. ಸಹಾಯಧನ ನೀಡಿದ್ದರು. 50 ಲಕ್ಷ ರೂ. ವಿಮೆ ಮಾಡಿಸಿದ್ದರು. ಕೋವಿಡ್ ಸಮಯದಲ್ಲಿ ಒಂದು ಸಲ 3,000 ರೂ, ನಂತರ ಬಸವರಾಜ ಬೊಮ್ಮಾಯಿ ಸಿಎಂ ಆಗಿದ್ದಾಗ 1,000 ರೂ. ಹೆಚ್ಚಿಸಲಾಗಿತ್ತು. ಬಳಿಕ ಬಜೆಟ್ ನಲ್ಲೇ 1,000 ರೂ. ಘೋಷಿಸಲಾಯಿತು. ಆದರೆ ಸಿದ್ದರಾಮಯ್ಯ ಸಿಎಂ ಆದ ಕೂಡಲೇ ಅದನ್ನು ಹಿಂಪಡೆಯಲಾಯಿತು ಎಂದರು.

ಕೇಂದ್ರದ ಮೇಲೆ ಆರೋಪ

ಈಗ ಎಲ್ಲ ಸಚಿವರು ಕೇಂದ್ರ ಸರ್ಕಾರದ ಮೇಲೆ ಆರೋಪ ಮಾಡುತ್ತಾರೆ. ಆದರೆ ಘೋಷಣೆ ಮಾಡುವಾಗ ಮಾತ್ರ ಕೇಂದ್ರದ ನೆನಪಾಗಲಿಲ್ಲ. ಕಾಂಗ್ರೆಸ್ ಕಾರ್ಯಕರ್ತರಿಗೆ ಭಾರತ್ ಜೋಡೋ ಹೆಸರಲ್ಲಿ ಗಂಜಿ ಕೇಂದ್ರವಾಗಿ 1,000 ಕೋಟಿ ರೂ. ನೀಡಲಾಗಿದೆ. ಗ್ಯಾರಂಟಿ ಅನುಷ್ಠಾನ ಸಮಿತಿಗೆ 250 ಕೋಟಿ ರೂ. ನೀಡಲಾಗಿದೆ. ಇನ್ನು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸಮಿತಿಗಳು ಬಂದರೆ ಒಟ್ಟು ವೆಚ್ಚ 2000 ಕೋಟಿ ರೂ. ಆಗುತ್ತದೆ. ಕಾಂಗ್ರೆಸ್ ಪಕ್ಷದ ಬಾವುಟ ಕಟ್ಟುವವರಿಗೆ ಇಷ್ಟು ಹಣ ವೆಚ್ಚ ಮಾಡಲಾಗುತ್ತಿದೆ. ಮುಸ್ಲಿಮರಿಗೆ 4358 ಕೋಟಿ ರೂ. ನೀಡಿದ್ದು, ಮುಸ್ಲಿಂ ವಿದ್ಯಾರ್ಥಿಗಳಿಗೆ ತಲಾ 50 ಸಾವಿರ ರೂ. ಖರ್ಚಿನಲ್ಲಿ ಲ್ಯಾಪ್ ಟಾಪ್ ಗಾಗಿ ವಿಶೇಷ ಅನುದಾ‌ನ ನೀಡಲಾಗುತ್ತಿದೆ. ಆದರೆ ಆಶಾ ಮಹಿಳೆಯರು 480 ಕೋಟಿ ರೂ. ಮಾತ್ರ ಕೇಳುತ್ತಿದ್ದಾರೆ. ಆಶಾ ಕಾರ್ಯಕರ್ತರು ಹೆಚ್ಚಾಗಿ ರಾಜ್ಯ ಸರ್ಕಾರದ ಆರೋಗ್ಯ ಕಾರ್ಯಕ್ರಮಗಳಿಗೆ ಕೆಲಸ ಮಾಡುತ್ತಿದ್ದಾರೆ. ಇಲ್ಲಿ ಪ್ರತಿಯೊಬ್ಬ ಮಹಿಳೆಗೆ 15,000 ರೂ. ಮಾತ್ರ ನೀಡಬೇಕಾಗುತ್ತದೆ. ಮುಂದಿನ ಚುನಾವಣೆಯಲ್ಲಿ ಅವರ ಶಾಪ ತಟ್ಟಲಿದೆ ಎಂದರು.

ಈ ವಿಚಾರದ ಬಗ್ಗೆ ಬಿಜೆಪಿ-ಜೆಡಿಎಸ್ ಅಧಿವೇಶನದಲ್ಲಿ ಹೋರಾಟ ಮಾಡಲಿದೆ. ಸಮಸ್ಯೆಯನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುತ್ತೇವೆ. ವಿಜಯ್ ಕುಲಕರ್ಣಿ, ನಾಗೇಂದ್ರ ಜೈಲಿಗೆ ಹೋಗಿದ್ದು, ಇದು ರೌಡಿಗಳ ಸರ್ಕಾರ ಎಂದರು.

ಇನ್ನು ಅಂಗನವಾಡಿ ಸಹಾಯಕರು ಕೂಡ ಪ್ರತಿಭಟನೆ ಮಾಡಲಿದ್ದಾರೆ. ಹಿಂದೆ ಅವರೇ ಕಾಂಗ್ರೆಸ್ ಗೆ ಮತ ನೀಡಿದ್ದು, ಅವರೇ ಈಗ ತಿರುಗಿಬಿದ್ದಿದ್ದಾರೆ.‌ ಅವರಿಗೆ ಕಂಠೀಹಾರ ಹಾಕಬೇಕೆ ಎಂದು ಪ್ರಶ್ನೆ ಮಾಡುವವರಿಗೆ ದೊಡ್ಡ ಹಾರ ಬೀಳಲಿದೆ ಎಂದರು.

ರಾಜೀನಾಮೆ ನಾಟಕ

ನಯನ ಮೋಟಮ್ಮ ಸೇರಿದಂತೆ ಕಾಂಗ್ರೆಸ್ ಶಾಸಕರು ಜನರ ಕಣ್ಣಿಗೆ ಮಣ್ಣೆರಚಲು ರಾಜೀನಾಮೆ ನಾಟಕವಾಡಿದ್ದಾರೆ. ಇವರ ರಾಜೀನಾಮೆ ಪತ್ರ ಒಂದು ಸಾಲಿನಲ್ಲೇ ಇರಬೇಕು.‌ ಆದರೆ ಅದು ಒಂದು ಸಾಲಿನಲ್ಲಿ ಬರೆದಿಲ್ಲ ಹಾಗೂ ನೇರವಾಗಿ ಸ್ಪೀಕರ್ ಗೆ ನೀಡಿಲ್ಲ. ಹೀಗೆ ಸುಮ್ಮನೆ ಮೊದಲೇ ಮಾತಾಡಿಕೊಂಡು ನಾಟಕ ಮಾಡಿದ್ದಾರೆ.‌ ಅವರು ನಿಜಕ್ಕೂ ರಾಜೀನಾಮೆ‌ ನೀಡಿದ್ದರೆ ಆನೆಗಾಗಿ ರಾಜೀನಾಮೆ ನೀಡಿದರು ಎಂದು ದಾಖಲೆಯಾಗುತ್ತಿತ್ತು ಎಂದರು.

ಸಮನ್ವಯ ಸಮಿತಿ ಸಭೆ

ಗುರುವಾರ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರೊಂದಿಗೆ ಸಮನ್ವಯ ಸಮಿತಿ ಸಭೆ ನಡೆಯಲಿದೆ. ಅಧಿವೇಶನ, ಮುಂಬರುವ ಚುನಾವಣೆ ಮೊದಲಾದವುಗಳ ಬಗ್ಗೆ ಚರ್ಚೆಯಾಗಲಿದೆ. ಟಿಕೆಟ್ ಬಗ್ಗೆ ವರಿಷ್ಠರು ತೀರ್ಮಾನ ಕೈಗೊಳ್ಳುತ್ತಾರೆ ಎಂದರು.

ಅನೇಕ ಹೋರಾಟಗಾರರು ಅಖಂಡ ಕರ್ನಾಟಕವನ್ನು ನಿರ್ಮಿಸಿದ್ದಾರೆ. ಅಭಿವೃದ್ಧಿ ದೃಷ್ಟಿಯಿಂದಲೂ ಕರ್ನಾಟಕ ಒಂದಾಗಿರಬೇಕು. ಇದು ಪ್ರತಿ ಕನ್ನಡಿಗರ ಆಶಯ. ಪ್ರತ್ಯೇಕ ರಾಜ್ಯದ ಬಗ್ಗೆ ಅಭಿಪ್ರಾಯ ಹೇಳುವ ನಮ್ಮ ಪಕ್ಷದ ಶಾಸಕರ ಜೊತೆ ಮಾತಾಡುತ್ತೇನೆ ಎ‌ಂದರು.

ShareTweetSendShare
Join us on:

Related Posts

bjp-alleges-threefold-hike-in-bengaluru-whitetopping-cost-2321-crore-cabinet-approval

ವೈಟ್‌ಟಾಪಿಂಗ್ ವೆಚ್ಚ ಮೂರು ಪಟ್ಟು ಹೆಚ್ಚಳ: ಕಮಿಷನ್ ಲೂಟಿಗೆ ಕಾಂಗ್ರೆಸ್‌ ಸರ್ಕಾರದ ಸ್ಕೆಚ್‌?

by admin
November 25, 2026
0

130.85 ಕಿ.ಮೀ. ರಸ್ತೆ ಅಭಿವೃದ್ಧಿಗೆ ₹2,321 ಕೋಟಿ ವೆಚ್ಚಕ್ಕೆ ಸಂಪುಟ ಅಸ್ತು; ಪ್ರತಿ ಕಿ.ಮೀ.ಗೆ ₹17.74 ಕೋಟಿ ಖರ್ಚು ಮಾಡಲು ನಿರ್ಧಾರ ಬೆಂಗಳೂರು: ಬೆಂಗಳೂರಿನ ರಸ್ತೆಗಳಿಗೆ ವೈಟ್‌ಟಾಪಿಂಗ್‌...

wadhwani-grants-3-to-5-years-funding-for-startups-msme-skill-training-institutes-how-to-apply

ಸ್ಟಾರ್ಟಪ್, ಎಂಎಸ್‌ಎಂಇ, ಕೌಶಲ್ಯ ತರಬೇತಿ ಸಂಸ್ಥೆಗಳಿಗೆ 3 – 5 ವರ್ಷ ಅನುದಾನ: ಅರ್ಜಿ ಸಲ್ಲಿಸುವುದು ಹೇಗೆ?

by admin
November 25, 2026
0

ಬೆಂಗಳೂರು: ದೇಶದಲ್ಲಿ ಉದ್ಯೋಗ ಸೃಷ್ಟಿ, ಕೌಶಲ್ಯ ತರಬೇತಿ ಮತ್ತು ಜನರ ಆದಾಯ ಹೆಚ್ಚಿಸುವ ಕೆಲಸ ಮಾಡುತ್ತಿರುವ ಸಂಸ್ಥೆಗಳಿಗೆ ನೆರವಾಗಲು ‘ವಾಧ್ವಾನಿ ಫೌಂಡೇಶನ್’ ಮುಂದಾಗಿದ್ದು, ‘ವಾಧ್ವಾನಿ ಗ್ರ್ಯಾಂಟ್ಸ್’ ಯೋಜನೆಯಡಿ...

karnataka-rajyotsava-cup-2026-season-2-cricket-tournament-doha-qatar-ksq-karnataka-royals

ದೋಹಾದಲ್ಲಿ ‘ಕರ್ನಾಟಕ ರಾಜ್ಯೋತ್ಸವ ಕಪ್ 2026 (ಸೀಸನ್ 2)’ ಕ್ರಿಕೆಟ್ ಪಂದ್ಯಾವಳಿಗೆ ಭರ್ಜರಿ ಚಾಲನೆ

by admin
November 25, 2026
0

ದೋಹಾ, ಕತಾರ್: ಭಾರತೀಯ ರಾಯಭಾರಿ ಕಚೇರಿಯ ಅಧೀನದ ಭಾರತೀಯ ಸಾಂಸ್ಕೃತಿಕ ಕೇಂದ್ರದ (ICC) ಸಹಯೋಗಿ ಸಂಸ್ಥೆಯಾದ ಕರ್ನಾಟಕ ಸಂಘ ಕತಾರ್ (KSQ) ಹಾಗೂ ಕರ್ನಾಟಕ ರಾಯಲ್ಸ್ ಜಂಟಿ...

coconut-lamp-ritual-benefits-financial-health-peace-remedies-in-kannada

ಮನೆಯಲ್ಲಿನ ಪ್ರತಿ ಹಣಕಾಸು,ಆರೋಗ್ಯ,ಕಲಹ ಸಮಸ್ಯೆ ಕಳೆದು ದೈವಬಲ ಹೆಚ್ಚಿಸಲು ತೆಂಗಿನಕಾಯಿ ದೀಪಾರಾಧನೆ ಮಾಡಿ ಬದಲಾವಣೆ ನೋಡಿ..

by admin
November 25, 2026
0

ನಾವು ನಿತ್ಯವು ದೇವರ ಮುಂದೆ ದೀಪವನ್ನು ಬೆಳಗುತ್ತೆವೆ.ಅದೇ ತರಹ ವಿಶೇಷವಾಗಿ ನಮ್ಮ ಕೋರಿಕೆಗಳು, ಕಷ್ಟಗಳು ಕಳೆಯಬೇಕೆಂದು ಹಲವಾರು ತರಹದ ದೀಪಗಳನ್ನು ಬೆಳಗುತ್ತಾರೆ. ಅಂತಹ ವಿಶೇಷ ದೀಪಗಳ ಸಾಲಿಗೆ...

UGC NET: ಪರೀಕ್ಷಾ ನಗರ ಮಾಹಿತಿ ಸ್ಲಿಪ್ ಬಿಡುಗಡೆ ದಿನಾಂಕ ಪರಿಷ್ಕರಣೆ; ನ.25ರೊಳಗೆ ಲಭ್ಯ

UGC NET: ಪರೀಕ್ಷಾ ನಗರ ಮಾಹಿತಿ ಸ್ಲಿಪ್ ಬಿಡುಗಡೆ ದಿನಾಂಕ ಪರಿಷ್ಕರಣೆ; ನ.25ರೊಳಗೆ ಲಭ್ಯ

by Shwetha
November 25, 2026
0

UGC NET ಡಿಸೆಂಬರ್ 2026 ಪರೀಕ್ಷೆಗೆ ಸಿದ್ಧವಾಗುತ್ತಿರುವ ಅಭ್ಯರ್ಥಿಗಳಿಗೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಮಹತ್ವದ ಅಪ್‌ಡೇಟ್ ನೀಡಿದೆ. ಪರೀಕ್ಷಾ ಕೇಂದ್ರದ ನಗರ ಮಾಹಿತಿ ನೀಡುವ Exam...

Load More

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram