ಮುಂಬೈ : ಸಿನಿಮಾ ಮಂದಿ ಬಗ್ಗೆ ಚಿತ್ರ ಮಾಡಿ ಸದ್ದು ಮಾಡುತ್ತಿದ್ದ ವಿವಾದಿತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಇದೀಗ ಪತ್ರಕರ್ತ ಅರ್ನಬ್ ಗೋಸ್ವಾಮಿ ಕುರಿತಂತೆ ಚಿತ್ರ ಮಾಡೋದಾಗಿ ಘೋಷಿಸಿದ್ದಾರೆ.
ಅರ್ನಬ್ ಬಗ್ಗೆ ಸಿನಿಮಾ ಮಾಡೋದಾಗಿ ಟ್ವೀಟ್ ಮಾಡಿರುವ ಆರ್ ಜಿವಿ, ಚಿತ್ರಕ್ಕೆ ಅರ್ನಬ್ ಎಂದು ಹೆಸರಿಟ್ಟು, ‘ದಿ ನ್ಯೂಸ್ ಪ್ರಾಸ್ಟಿಟ್ಯೂಟ್’ ಅಂತ ಅಡಿ ಬರಹ ನೀಡುವುದಾಗಿಯೂ ಘೋಷಣೆ ಮಾಡಿದ್ದಾರೆ. ಅಲ್ಲದೆ ತನ್ನ ಟ್ಯಾಗ್ ಲೈನ್ ಬಗ್ಗೆಯೂ ವಿವರಣೆ ನೀಡಿದ್ದಾರೆ.
https://twitter.com/RGVzoomin/status/1290205853518184448?s=20
ನಟ ಸುಶಾಂತ್ ಸಿಂಗ್ ರಜಪೂತ್ ಕುರಿತಂತೆ ಅರ್ನಬ್ ಅವರ ರಿಪಬ್ಲಿಕ್ ಸುದ್ದಿವಾಹಿನಿಯಲ್ಲಿ ಪ್ರಸಾರವಾದ ಕಾರ್ಯಕ್ರಮದ ಕುರಿತು ಸರಣಿ ಟ್ವೀಟ್ ಗಳನ್ನು ಮಾಡಿರುವ ವರ್ಮಾ, ಬಾಲಿವುಡ್ ಕುರಿತಂತೆ ಅರ್ನಬ್ ಗೋಸ್ವಾಮಿ ತುಂಬಾ ಆಘಾತಕಾರಿಯಾಗಿ ಮಾತನಾಡುತ್ತಿದ್ದಾರೆ. ಚಿತ್ರರಂಗವನ್ನು ಅತ್ಯಂತ ಕೊಳಕಿನ ಉದ್ಯಮ ಎಂದು ಕರೆಯುವ ಮೂಲಕ ಅವರು ಇಡೀ ಚಿತ್ರರಂಗಕ್ಕೆ ಅವಮಾನ ಮಾಡಿದ್ದಾರೆ. ಬಾಲಿವುಡ್ ಅಪರಾಧ ಸಂಪರ್ಕಗಳನ್ನು ಹೊಂದಿರುವ ಉದ್ಯಮ, ಇದು ಅತ್ಯಾಚಾರಿಗಳು, ದರೋಡೆಕೋರರು, ಲೈಂಗಿಕ ಶೋಷಕರಿಂದ ತುಂಬಿದೆ ಎಂದೆಲ್ಲಾ ಟೀಕಿಸುತ್ತಿದ್ದಾರೆ.
https://twitter.com/RGVzoomin/status/1290203117548482560?s=20
ಅಂತೆಯೇ ಸುಶಾಂತ್ ಸಿಂಗ್ ರಜಪೂತ್ ಸಾವನ್ನು ಅರ್ನಬ್ ಟಿಆರ್ ಪಿಯ ಟೂಲ್ ಆಗಿ ಬಳಕೆ ಮಾಡುತ್ತಿದ್ದು, ಅರ್ನಬ್ ಸುಳ್ಳುಸುದ್ದಿಗಳಿಗೆ ಹೆದರಿ ಬಾಲಿವುಡ್ ನ ಖ್ಯಾತನಾಮರಾದ ಆದಿತ್ಯಾ ಚೋಪ್ರಾ, ಶಾರುಖ್ ಖಾನ್, ಸಲ್ಮಾನ್ ಖಾನ್, ಸೇರಿದಂತೆ ಹಲವರು ಮೌನವಹಿಸಿದ್ದಾರೆ. ಮಾಧ್ಯಮಗಳೂ ಇಡೀ ಉದ್ಯಮವನ್ನು ಕೆಟ್ಟದಾಗಿ ಬಿಂಬಿಸುತ್ತಿದ್ದು, ಸಿನಿಮಾ ಉದ್ಯಮದಲ್ಲಿರುವವರನ್ನು ಅತ್ಯಾಚಾರಿಗಳು ಮತ್ತು ಕೊಲೆಗಡುಕರು ಎಂಬಂತೆ ಬಿಂಬಿಸುತ್ತಿವೆ ಎಂದು ರಾಮ್ ಗೋಪಾಲ್ ವರ್ಮಾ ಕಿಡಿಕಾರಿದ್ದಾರೆ.
ಒಂದು ವೇಳೆ ಅರ್ನಬ್ ನನ್ನ ಸಿನಿಮಾವನ್ನು ತಡೆಯಲು ಪ್ರಯತ್ನಿಸಿದರೇ ನಾನು ಅದನ್ನು ಚಿತ್ರದ ಪ್ರಚಾರಕ್ಕಾಗಿ ಬಳಿಸಿಕೊಳ್ಳುತ್ತೇನೆ ಎಂದು ಕೂಡ ಆರ್ ಜಿವಿ ಟ್ವೀಟ್ ಮಾಡಿದ್ದಾರೆ.