ರಾಮನವಮಿಯಂದೇ ‘ಶಬರಿ’ಯಾಗಿ ದರ್ಶನ ಕೊಟ್ಟ ‘ಡಿಂಪಲ್ ಕ್ವೀನ್’..!
ಬೆಂಗಳೂರು : ಚಂದನವನದ ಗುಳಿ ಕೆನ್ನೆ ಸುಂದರಿ ರಚಿತಾ ರಾಮ್ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಬ್ಯಾಡ್ ಮ್ಯಾನರ್ಸ್, ಮ್ಯಾಟ್ನಿ, ಲಿಲ್ಲಿ, ಏಪ್ರಿಲ್, ಡಾಲಿ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ರಚಿತಾ ಬ್ಯುಸಿಯಾಗಿದ್ದಾರೆ. ಈ ನಡುವೆ ಇಂದು ಶ್ರೀರಾಮ ನವಮಿ ಹಬ್ಬದಂದೇ ರಚಿತಾ ‘ಶಬರಿ’ಯಾಗಿ ದರ್ಶನ ಕೊಟ್ಟಿದ್ದಾರೆ. ಅಂದ್ರೆ ಅವರ ಅಭಿನಯದ ಹೊಸ ಸಿನಿಮಾ ‘ಶಬರಿ ಸರ್ಚಿಂಗ್ ಫಾರ್ ರಾವಣ’ದ ಫಸ್ಟ್ ಲುಕ್ ಇಂದು ರಿವೀಲ್ ಆಗಿದೆ.
ಫಸ್ಟ್ ಲುಕ್ ನಲ್ಲಿ ಡಿಂಪಲ್ ಕ್ವೀನ್ ಟೆರರ್ ಲುಕ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಇಂದು ರಾಮ ನವಮಿಯ ವಿಶೇಷವಾಗಿ ಚಿತ್ರದ ಫಸ್ಟ್ ಲುಕ್ ಮತ್ತು ಟೈಟಲ್ ಬಿಡುಗಡೆ ಮಾಡಲಾಗಿದೆ. ಚಿತ್ರಕ್ಕೆ ನವೀನ್ ಶೆಟ್ಟಿ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಮಹಿಳಾ ಪ್ರಧಾನ ಸಿನಿಮಾ ಇದಾಗಿದ್ದು, ಚಿತ್ರದಲ್ಲಿ ರಚಿತಾ ವಿಭಿನ್ನವಾಗಿ ಕಾಣಿಸಿಕೊಳ್ಳಲಿದ್ದಾರೆ.