ರಾಧೆ ಶ್ಯಾಮ್ ಗೆ ವಿದೇಶದಲ್ಲಿ ಭಾರೀ ಡಿಮ್ಯಾಂಡ್ – ಅತಿ ಹೆಚ್ಚು ಮೌಲ್ಯಕ್ಕೆ ವಿದೇಶಿ ವಿತರಣೆ ರೈಟ್ಸ್ ಮಾರಾಟ..!
ಬಾಹುಬಲಿ ನಿನಿಮಾ ಮೂಲಕ ನ್ಯಾಷನಲ್ ಸ್ಟಾರ್ ಆಗಿ ಹೊರಹೊಮ್ಮಿರುವ ಪ್ರಭಾಸ್ ಅವರ ಬಹುನಿರೀಕ್ಷೆಯ ‘ರಾಧೆ ಶ್ಯಾಮ್’ ಸಿನಿಮಾ ರಿಲೀಸ್ ಗೂ ಮುನ್ನವೇ ಕೋಟಿ ಕೋಟಿ ಹಣ ಗಳಿಸಿದೆ. 500 ಕೋಟಿ ಬಿಗ್ ಬಜೆಟ್ ನ ಸಿನಿಮಾವಾಗಿರುವ ರಾಧೆ ಶ್ಯಾಮ್ ಅಲ್ಲಿ ಮಾಸ್ ಹೀರೋ ಪ್ರಭಾಸ್ ಪಕ್ಕಾ ಲವರ್ ಬಾಯ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಸಿನಿಮಾದಲ್ಲಿ ಪೂಜಾ ಹೆಗ್ಡೆ ಜೊತೆಗೆ ಪ್ರಭಾಸ್ ರೋಮ್ಯಾಂಟಿಕ್ ಸೀನ್ ಗಳು ಕಂಡುಬರಲಿದೆ.
ಸಿನಿಮಾ ಈಗಾಗಲೇ ಪೋಸ್ಟರ್ ಟೀಸರ್ ಗಳಿಂದಲೇ ಭಾರೀ ಸೌಂಡ್ ಮಾಡ್ತಿದೆ. ಕನ್ನಡ , ತೆಲುಗು ಸೇರಿ 5 ಭಾಷೆಗಳಲ್ಲಿ ರಿಲೀಸ್ ಆಗಲಿರುವ ‘ರಾಧೆಶ್ಯಾಮ್’ ಸಿನಿಮಾಗೆ ವಿದೇಶದಲ್ಲೂ ಭಾರೀ ಡಿಮ್ಯಾಂಡ್ ಕ್ರಿಯೇಟ್ ಆಗಿದ್ಯಂತೆ. ಅಲ್ಲದೇ ಸಿನಿಮಾದ ವಿದೇಶಿ ವಿತರಣೆ ಹಕ್ಕು ಕೂಡ ಕೋಟ್ಯಾಂತರ ರೂಪಾಯಿಗಳಿಗೆ ಮಾರಾಟವಾಗಿದೆ ಎನ್ನಲಾಗಿದೆ. ಮೂಲಗಳ ಪ್ರಕಾರ ರಾಧೆ ಶ್ಯಾಮ್ ಚಿತ್ರವನ್ನು ಬರೋಬ್ಬರಿ 3.5 ಮಿಲಿಯನ್ ಡಾಲರ್ ಗೆ ಖರೀದಿಸಿದ್ದಾರೆ ಎಂದು ಹೇಳಲಾಗ್ತಿದೆ.
ತನಿಗಿಂತ 27 ವರ್ಷ ಚಕ್ಕವಳಾದ ದಿಶಾಗೆ ಮುತ್ತಿಟ್ಟ ಸಲ್ಲು ಭಾಯ್ – ಟ್ರೋಲಿಗರ ಬಾಯ್ಮುಚ್ಚಿಸಿದ್ದು ಹೇಗೆ ಗೊತ್ತಾ..?