ಪ್ರಭಾಸ್ ರಾಧೇ ಶ್ಯಾಮ್ ಚಿತ್ರದ 5ನೇ ದಿನದ ಬಾಕ್ಸ್ ಆಫೀಸ್ ಕಲೆಕ್ಷನ್…
ಮಾರ್ಚ್ 11 ರಂದು ಬಿಡುಗಡೆಯಾದ ಪ್ರಭಾಸ್ ಮತ್ತು ಪೂಜಾ ಹೆಗ್ಡೆ ಅಭಿನಯದ ರಾಧೆ ಶ್ಯಾಮ್ ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಮೂರೇ ದಿನಗಳಲ್ಲಿ 150 ಕೋಟಿ ರುಪಾಯಿ ಗಡಿ ದಾಟಿದ ಚಿತ್ರ ಇದೀಗ 200 ಕೋಟಿ ಕ್ಲಬ್‌ನತ್ತ ದಾಪುಗಾಲು ಹಾಕುತ್ತಿದೆ.
ಮಿಶ್ರ ವಿಮರ್ಶೆಗಳ ಪ್ರತಿಕ್ರಿಯೆಗಳ ಹೊರತಾಗಿಯೂ, ರಾಧೆ ಶ್ಯಾಮ್ ಬಾಕ್ಸ್ ಆಫಿಸ್ ಗಳಿಕೆಯಲ್ಲಿ ಉತ್ತಮ ಪ್ರದರ್ಶನ ತೋರುತ್ತಿದೆ. ಇನ್ನೊಂದು ವಾರದವರೆಗೆ ಥಿಯೇಟರ್ ನಲ್ಲಿ ಓಟವನ್ನು ಮುಂದುವರೆಸುವ ಸಾಧ್ಯತೆಯಿದೆ. ರಾಧಾ ಕೃಷ್ಣ ಕುಮಾರ್ ನಿರ್ದೇಶನದ ರಾಧೆ ಶ್ಯಾಮ್ ಪ್ರೇಮಕಥೆಯಾಧಾರಿತ ಮಹಾ ಕಾವ್ಯ…
ರಾಧೆ ಶ್ಯಾಮ್ ಪ್ರಪಂಚದಾದ್ಯಂತ ತನ್ನ ಉತ್ತಮ ಪ್ರದರ್ಶನ ಮುಂದುವರೆಸುತ್ತಿದೆ.
ರಾಧೆ ಶ್ಯಾಮ್ 2022 ರ ಸಂಕ್ರಾಂತಿಯ ಸಮಯದಲ್ಲಿ ಬಿಡುಗಡೆಯಾಗಬೇಕಿತ್ತು. ಕರೋನಾದ ಮೂರನೇ ಅಲೆಯಿಂದಾಗಿ ಚಲನಚಿತ್ರವನ್ನು ಮುಂದೂಡಲಾಗಿತ್ತು. ಕೊನೆಗೆ ಮಾರ್ಚ್ 11 ಅನ್ನು ಚಿತ್ರವನ್ನ ಬಿಡುಗಡೆ ಮಾಡಲಾಗಿದೆ. ರಾಧೇ ಶ್ಯಾಮ್ ತೆಲುಗು, ತಮಿಳು, ಮಲಯಾಳಂ, ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ಬಿಡುಗಡೆಯಾಗಿದೆ.
ಸಿನಿಮಾ ಬಾಕ್ಸ್ ಆಫೀಸ್ ವಿಶ್ಲೇಷಕ ಮನೋಬಾಲಾ ವಿಜಯಬಾಲನ್ ಪ್ರಕಾರ, ರಾಧೆ ಶ್ಯಾಮ್ ಕೇವಲ ನಾಲ್ಕು ದಿನಗಳಲ್ಲಿ ವಿಶ್ವದಾದ್ಯಂತ 165.18 ಕೋಟಿ ರೂ. ಗಳಿಸಿದೆ. ಮೊದಲನೆ ದಿನ 1 – ರೂ 72.41 ಕೋಟಿ.
ದಿನ 2 – ರೂ 39.65 ಕೋಟಿ.
ದಿನ 3 – ರೂ 38.29 ಕೋಟಿ.
ದಿನ 4 – ರೂ 14.83 ಕೋಟಿ.
ಒಟ್ಟು – ರೂ 165.18 ಕೋಟಿ .”
ಆಂಧ್ರ, ತೆಲಂಗಾಣದಲ್ಲಿ ನಾಲ್ಕು ದಿನಗಳಲ್ಲಿ ಚಿತ್ರ 85.38 ಕೋಟಿ ಕಲೆಕ್ಷನ್ ಮಾಡಿದೆ. ಶೀಘ್ರದಲ್ಲೇ 100 ಕೋಟಿ ಗಡಿ ದಾಟುವ ಸಾಧ್ಯತೆ ಇದೆ.
ರಾಧೆ ಶಾಮ್ ಹಸ್ತಸಾಮುದ್ರಿಕ ಜೋತಿಷ್ಯ ಹೇಳುವ ವಿಕ್ರಮಾದಿತ್ಯ ಮತ್ತು ಅವನ ಗೆಳತಿ ಡಾ ಪ್ರೇರಣಾ ಕುರಿತ ಪ್ರೇಮಕಥೆಯನ್ನ ಹೊಂದಿದೆ. ವಿಧಿ ಅವರನ್ನ ಬೇರೆ ಮಾಡಿದಾಗ ಇಬ್ಬರೂ ಹೇಗೆ ಪ್ರೀತಿಯಲ್ಲಿ ಬೀಳುತ್ತಾರೆ ಎಂಬುದು ಕಥೆಯನ್ನು ರೂಪಿಸುತ್ತದೆ.
Radhe Shyam box office collection Day 5: Prabhas’ film wreaks havoc worldwide