ರಾಜಕೀಯ ಪ್ರವೇಶದ ಬಗ್ಗೆ ರಾಧಿಕಾ ಕುಮಾರಸ್ವಾಮಿ ಸ್ಪಷ್ಟನೆ
ಬೆಂಗಳೂರು : ನಟಿ ರಾಧಿಕಾ ಕುಮಾರಸ್ವಾಮಿ ಶೀಘ್ರದಲ್ಲೇ ರಾಜಕೀಯಕ್ಕೆ ಬರುತ್ತಾರೆ ಎಂಬ ಸುದ್ದಿಗಳು ಹರಿದಾಡುತ್ತಿವೆ. ಈ ಸುದ್ದಿ ಬಗ್ಗೆ ಇಂದು ಸ್ವತಃ ರಾಧಿಕಾ ಅವರೇ ಸ್ಪಷ್ಟನೆ ನೀಡಿದ್ದಾರೆ.
ಯುವರಾಜ್ ಅಲಿಯಾಸ್ ಸ್ವಾಮಿಯಿಂದ 1.5 ಕೋಟಿ ಹಣ ಪಡೆದ ಆರೋಪಕ್ಕೆ ಸಂಬಂಧಿಸಿದಂತೆ ಇಂದು ರಾಧಿಕಾ ಕುಮಾರಸ್ವಾಮಿ ಸುದ್ದಿಗೋಷ್ಠಿ ನಡೆಸಿ ಎಲ್ಲವುದಕ್ಕೂ ಸ್ಪಷ್ಟನೆ ನೀಡಿದರು.
ಇದೇ ವೇಳೆ ರಾಜಕೀಯ ಪ್ರವೇಶ ಯಾವಾಗ ಎಂಬ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿ, ಸಿನಿಮಾದವರು ಮತ್ತು ನನ್ನ ಕುಟುಂಬದವರು ರಾಜಕೀಯಕ್ಕೆ ಬನ್ನಿ ಎಂದು ನನ್ನನ್ನು ಕರೆಯುತ್ತಿದ್ದರು.
ಆದ್ರೆ ನನಗೆ ರಾಜಕೀಯ ಬಗ್ಗೆ ಆಸಕ್ತಿ ಇಲ್ಲ. ಸಿನಿಮಾವೇ ನನ್ನ ಕನಸಾಗಿತ್ತು. ಸಿನಿಮಾ ಮಾಡುವವರೆಗೂ ಸಿನಿಮಾದಲ್ಲಿ ತೊಡಗಿಕೊಳ್ಳೊಣ.
ಮುಂದೆ ಯಾವ ಸಂದರ್ಭ ಬರುತ್ತೋ ಎಂಬೋದನ್ನ ನೋಡಿ ನಿರ್ಧರಿಸಬೇಕು ಎಂದಿದ್ದೇನೆ ಎಂದು ತಿಳಿಸಿದರು.
ಒಮನ್ ನಲ್ಲಿ ಪತ್ತೆಯಾಯ್ತು ಬ್ರಿಟನ್ ‘ರೂಪಾಂತರಿ’ ಕೊರೊನಾ ವೈರಸ್..!
ರಾಜಕೀಯ ನಾಯಕರ ಭೇಟಿ ಬಗ್ಗೆ ಮಾತನಾಡಿ, ನಾನು ರಾಜಕಾರಣಿಗಳನ್ನು ಭೇಟಿಯಾಗಿಲ್ಲ ಅಂತ ಹೇಳುವುದಿಲ್ಲ. ತುಂಬಾ ಜನ ರಾಜಕಾರಣಿಗಳನ್ನು ನಾನು ಭೇಟಿಯಾಗಿದ್ದೇನೆ.
ಸಿನಿಮಾ ಕಾರ್ಯಕ್ರಮಗಳಿಗೆ ಅವರನ್ನು ಕರೆಸುವ ಉದ್ದೇಶದಿಂದ ಅವರ ಜೊತೆ ಮಾತನಾಡಿರಬಹುದು ಹೊರತು ಬೇರೆ ಯಾವುದೇ ಉದ್ದೇಶದಿಂದಲ್ಲ ಎಂದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel









