ಕೊರೊನಾ ಸೋಂಕಿತರಿಗೆ ರೇಡಿಯೋ ಥೆರಪಿ ಚಿಕಿತ್ಸೆ
ಬೆಂಗಳೂರು : ವಿಶ್ವವನ್ನೇ ತಲ್ಲಣಗೊಳಿಸಿರುವ ಕೊರೊನಾ ವೈರಸ್ ನಿಯಂತ್ರಣಕ್ಕೆ ಜಗತ್ತಿನಾದ್ಯಂತ ನಾನಾ ಅಧ್ಯಯನ, ಪ್ರಯೋಗಗಳು ನಡೆಯುತ್ತಿವೆ.
ಅದರಂತೆ ಇದೀಗ ಕ್ಯಾನ್ಸರ್ ಗೆ ಬಳಸುವ ರೇಡಿಯೋ ಥೆರಪಿಯನ್ನ ಕೊರೊನಾ ಚಿಕಿತ್ಸೆಗೆ ಬಳಸಲು ಬೆಂಗಳೂರಿನ ವೈದ್ಯರೊಬ್ಬರು ಮುಂದಾಗಿದ್ದಾರೆ.
ನಗರದ ಹೆಚ್ ಸಿಜಿ ಆಸ್ಪತ್ರೆಯ ವತಿಯಿಂದ Low Doze Radio Therapy ಪ್ರಯೋಗ ನಡೆಯಲಿದೆ. ಥೆರಪಿ ಬಗ್ಗೆ ಈಗಾಗಲೇ ವೈದ್ಯರ ತಂಡ ಅಧ್ಯಯನವನ್ನು ನಡೆಸಿದ್ದು, ಶೇಕಡಾ 85 ರಿಂದ 90 ಭಾಗ ಈ ಥೆರಪಿ ಸಕ್ಸಸ್ ಆಗಲಿದೆಯಂತೆ.
ಕ್ಯಾನ್ಸರ್ ಖಾಯಿಲೆಗೆ ರೇಡಿಯೋ ಥೆರಪಿ ಚಿಕಿತ್ಸೆ ನೀಡಲಾಗುತ್ತಿತ್ತು. ಹೀಗಾಗಿ ಕೊರೊನಾಗೂ ಕಡಿಮೆ ವಿಕಿರಣ ಚಿಕಿತ್ಸೆ ನೀಡಲು ವೈದ್ಯರು ಮುಂದಾಗಿದ್ದಾರೆ.
ಅಲ್ಲದೇ ಒಂದು ವೇಳೆ ಈ ಥೆರಪಿ ಯಶಸ್ಸು ಕಂಡಿಲ್ಲಾ ಎಂದರೂ ಅಡ್ಡ ಪರಿಣಾಮ ಇರಲ್ಲ ಎಂದು ವೈದ್ಯರು ಹೇಳುತ್ತಿದ್ದಾರೆ.
ಒಂದು ವೇಳೆ ಚಿಕಿತ್ಸೆ ಯಶ ಕಂಡರೆ, ರೋಗದ ಬಾಧೆ ಹೆಚ್ಚಾಗಿ ಇರುವವರಿಗೆ ಇದು ವರದಾನವೂ ಆಗಬಹುದು. ಹಾಗೇ ಮುಂಬರುವ ಮೂರನೇ ಅಲೆಯನ್ನು ತಡೆಯಲು ಕೂಡಾ ಪರಿಣಾಮಕಾರಿಯಾಗಲಿದೆ ಎಂದು ವೈದ್ಯರು ಹೇಳಿದ್ದಾರೆ.