5ನೇ ಹಂತದಲ್ಲಿ ಫ್ರಾನ್ಸ್ ನಿಂದ ಭಾರತಕ್ಕೆ ಬಂದಿಳಿದ ‘ರಣಬೇಟೆಗಾರ’ ರಫೇಲ್ ಜೆಟ್ ಗಳು..!
ನವದೆಹಲಿ : ಫ್ರಾನ್ಸ್ ನಿಂದ ಭಾರತಕ್ಕೆ 5ನೇ ಹಂತದಲ್ಲಿ ರಫೇಲ್ ಫೈಟರ್ ಜೆಟಗಳು ಬಂದು ಲ್ಯಾಂಡ್ ಆಗಿವೆ. ಫ್ರಾನ್ಸ್ ನ ಮಿಲಿಟರಿ ಏರ್ ಬೇಸ್ನಿಂದ ಹೊರಟಿದ್ದ 5ನೇ ಬ್ಯಾಚ್ನ ಅತ್ಯಾಧುನಿಕ ರಫೇಲ್ ಫೈಟರ್ ಜೆಟ್ ಗಳು ಭಾರತಕ್ಕೆ ಬಂದು ತಲುಪಿವೆ.
5 ದಿನಗಳ ಅಧಿಕೃತ ಫ್ರಾನ್ಸ್ ಪ್ರವಾಸದಲ್ಲಿರುವ ಭಾರತೀಯ ಏರ್ ಚೀಫ್ ಮಾರ್ಷಲ್ ಆರ್ ಕೆಎಸ್ ಭದೌರಿಯಾ ಫ್ರಾನ್ಸ್ ನ ಮೆರಿಗ್ನಾಕ್ ಏರ್ ಬೇಸ್ನಲ್ಲಿ ರಫೇಲ್ ಫೈಟರ್ ಜೆಟ್ಗಳ ಹಾರಾಟಕ್ಕೆ ಚಾಲನೆ ನೀಡಿದ್ದರು.
ಆ ಬಳಿಕ ಸುಮಾರು 8 ಸಾವಿರ ಕಿ.ಮೀ ದೂರವನ್ನು ಕ್ರಮಿಸಿ ಯುದ್ಧ ವಿಮಾನಗಳು ಭಾರತವನ್ನು ತಲುಪಿವೆ. ಫ್ರಾನ್ಸ್ನಿಂದ ಭಾರತಕ್ಕೆ ಬರುವ ಮಧ್ಯೆ ಫ್ರಾನ್ಸ್ ಮತ್ತು ಯುಎಇ ವಾಯುಸೇನೆಗಳು ಫೈಟರ್ ಜೆಟ್ಗಳಿಗೆ ಇಂಧನ ಪೂರೈಕೆ ಮಾಡಿವೆ.