BIGGBOSS 8 – ದಿವ್ಯಾ ಸುರೇಶ್ ಇಂದ ಮಂಜು ಸೈಟ್ ಲೈನ್ ಆಗ್ತಿದ್ದಾರಾ..? ಮಂಜು ಆಟ ಹಾಳು ಮಾಡ್ತಿದ್ದಾರಾ ದಿವ್ಯಾ..!
ಬೆಂಗಳೂರು : ಬಿಗ್ ಬಾಸ್ ಸಸೀಸನ್ 8 ಆರಂಭದದಿಂದಲೂ ಸಿಕ್ಕಾಪಟ್ಟೆ ಗಮನ ಸೆಳೆದಿರುವ ಜೋಡಿಗಳೆಂದ್ರೆ ದಿವ್ಯಾ ಸುರೇಶ್ ಪಾವಗಡ ಮಂಜು , ದಿವ್ಯಾ ಉರುಡುಗ ಹಾಗೂ ಅರವಿಂದ್ ಅವರದ್ದು. ಈ 2 ಜೋಡಿಗಳು ಪರಸ್ಪರ ಒಬ್ಬರಿಗಗೊಬ್ಬರು ಸಪೋರ್ಟ್ ಮಾಡುತ್ತಾ ಸಾಕಷ್ಟು ಅಭಿಮಾನಿಗಳ ಮನಗೆದ್ದಿದ್ದಾರೆ.
ಆದ್ರೆ ಪ್ರಣಯ ಪಕ್ಷಿಗಳಂತೆ ಸದಾ ಜೊತೆಯಲ್ಲೇ ಕಾಣಿಸಿಕೊಳ್ಳುವ ದಿವ್ಯಾ ಉರುಡುಗ ಹಾಗೂ ಅರವಿಂದ್ ಅವರ ನಡುವಿನ ಬಾಂಧವ್ಯವನ್ನ ಹಾಗೂ ಮಂಜು ದಿವ್ಯಾ ಸುರೇಶ್ ನಡುವಿನ ಬಾಂಡಿಂಗ್ ಕಂಪೇರ್ ಮಾಡ್ತಿರುವ ನೆಟ್ಟಿಗರು ಹೆಚ್ಚಾಗಿ ಅರವಿಂದ್ ಉರುಡುಗ ಜೋಡಿಯನ್ನೇ ಇಷ್ಟ ಪಡ್ತಿದ್ದಾರೆ.
ಮತ್ತೊಂದೆಡೆ ಮಂಜು ಪಾವಗಡ ಅವರು ಅವರು ಮಾತ್ರ ಸೈಡ್ ಲೈನ್ ಆಗ್ತಿದ್ದಾರೆ. ಅವರು ಹೆಚ್ಚು ನೋಟೀಸ್ ಆಗಲು ಆಗ್ತಿಲ್ಲ.. ಸರಿಯಾಗಿ ಏಕಾಗ್ರತೆಯಿಂದ ತಮ್ಮ ಆಟವನ್ನ ಆಡಲು ಆಗ್ತಿಲ್ಲ ಎಂದು ಪ್ರೇಕ್ಷಕರು ಅಭಿಪ್ರಾಯಗಳನ್ನ ಹೊರಹಾಕ್ತಿದ್ದಾರೆ. ದಿವ್ಯಾ ಸುರೇಶ್ ಸದಾ ಮಂಜು ಪಾವಗಡ ಅವರ ಜೊತೆಯಲ್ಲೇ ಹೆಚ್ಚು ಸಮಯ ಕಳೆಯುತ್ತಾರೆ. ಆದ್ರೆ ಇದ್ರಿಂದ ಮಂಜು ಅವರು ಸರಿಯಾಗಿ ಫೋಕಸ್ ಮಾಡಿ ತಮ್ಮ ಆಟ ಆಡಲು ಆಗ್ತಿಲ್ಲ. ಅದ್ರಿಂದ ಲೈಮ್ ಲೈಟ್ ಗೂ ಬರಲಾಗ್ತಿಲ್ಲ ಎನ್ನುವುದು ಅಭಿಮಾನಿಗಳ ಅಭಿಪ್ರಾಯವಾಗಿದೆ.
ಇದಕ್ಕೆ ಮುಖ್ಯ ಕಾರಣ ಇತ್ತೀಚೆಗೆ ನಡೆದ ಟಾಸ್ಕ್ ನಲ್ಲಿ ದಿವ್ಯಾ ಮಂಜು ನಿಧಿ ಮೋಸದಾಟ ಕುತಂತ್ರ.. ಇದ್ರಿಂದ ಮೂವರು ಅದ್ರಲ್ಲೂ ವಿಶೇಷವಾಗಿ ದಿವ್ಯಾ ಸುರೇಶ್ ಕೇವಲ ಮನೆಯವರ ಕಣ್ಣಲ್ಲಿ ನೆಗೆಟಿವ್ ಆಗಿಲ್ಲ ಬದಲಾಗಿ ಹೊರಗಿನ ಪ್ರೇಕ್ಷಕರೂ ಅಸಮಾಧಾನಗೊಂಡಿದ್ದಾರೆ.
ದಿವ್ಯಾ ಸದಾ ಮಂಜು ಅವರ ಹಿಂದೆ ಹಿಂದೆಯೇ ಅಂಟಿಕೊಂಡಿರುತ್ತಾರೆ. ದಿವ್ಯಾ ತಮ್ಮ ಆಟ ಆಡಲು ಮನೆಗೆ ಬಂದಿದ್ದಾರಾ ಅಥವಾ ಇತರೇ ಸದಸ್ಯರ ಗೇಮ್ ಹಾಳು ಮಾಡಲು ಬಮದಿದ್ದಾರಾ.. ಮಂಜು ಇದನ್ನ ಹೇಗೆ ಸಹಿಸಿಕೊಳ್ತಾಯಿದ್ದಾರೆ. ಅಷ್ಟೇ ಅಲ್ಲ ಕೆಲ ಸದಸ್ಯರು ದಿವ್ಯಾ ಸುರೇಶ್ ರನ್ನ ಎಲಿಮಿನೇಟ್ ಮಾಡಬೇಕು ಆಗ ಮಂಜು ಮತ್ತೆ ಫಾರ್ಮ್ ಗೆ ಬರುತ್ತಾರೆ ಎಂದೆಲ್ಲಾ ದಿವ್ಯಾ ಸುರೇಶ್ ರನ್ನ ಟ್ರೋಲ್ ಮಾಡ್ತಾಯಿದ್ದಾರೆ.