ನಟಿಗೆ ಇದೆಂಥಾ ಶೋಕಿ ಬಂತು …. ಮಗನ ಮುಂದೆ ಬೆತ್ತಲಾಗಿ ಫೋಟೋ ಶೂಟ್ – ಜೈಲಿಗಟ್ಟಿದ ಕೋರ್ಟ್..!
ಘಾನಾ: ಘಾನಾದ ನಟಿ ರೋಸ್ಮಂಡ್ ಬ್ರೌನ್ ತನ್ನ 7 ವರ್ಷದ ಮಗನ ಮುಂದೆ ಬೆತ್ತಲೆಯಾಗಿ ಫೋಟೋಗೆ ಫೋಸ್ ನೀಡಿದ್ದು, ಆಕೆಗೆ ಈಗ ನ್ಯಾಯಾಲಯವು 3 ತಿಂಗಳ ಜೈಲು ಶಿಕ್ಷೆ ವಿಧಿಸಿದೆ.
ಈಕೆ ತನ್ನ ಮಗನ ಹುಟ್ಟುಹಬ್ಬದಂದು ಆತನ ಕೈ ಹಿಡಿದುಕೊಂಡು ಆತನ ಎದುರಲ್ಲಿ ಸಂಪೂರ್ಣವಾಗಿ ಬೆತ್ತಲಾಗಿ ಫೊಟೋ ತೆಗೆಸಿಕೊಂಡಿದ್ದರು. ಈ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು.
ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದ್ದಂತೆ, ನೆಟ್ಟಿಗರ ಆಕ್ರೋಶದ ಕಟ್ಟೆ ಒಡೆದುಹೀಗಿತ್ತು. ಈ ನಟಿ ವಿರುದ್ಧ ನೆಟ್ಟಿಗರು ಛೀಮಾರಿ ಹಾಕುತ್ತಾ, ಆಕ್ರೋಶ ಹೊರಹಾಕಿದ್ದರು.
ನೋಡ ನೋಡ್ತಿದ್ದಂತೆ ಈ ಪ್ರಕರಣ ನ್ಯಾಯಾಲಯದ ಹೊಸ್ತಿಲು ತಲುಪಿತ್ತು. ಕಳೆದ ವರ್ಷದಿಂದಲೂ ಈ ಸಂಬಂಧ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಲೇ ಇತ್ತು. ಇದೀಗ ಅಂತಿಮವಾಗಿ ತೀರ್ಪು ನೀಡಿರುವ ನ್ಯಾಯಾಲಯವು 3 ತಿಂಗಳು ಅಂದ್ರೆ 90 ದಿನಗಳ ಕಾಲ ಜೈಲು ಶಿಕ್ಷೆ ಘೋಷಿಸಿದೆ.
ಅಶ್ಲೀಲ ಮತ್ತು ಕೌಟುಂಬಿಕ ದೌರ್ಜನ್ಯ ಕಾಯ್ದೆ ಅಡಿ ಈ ನಟಿಗೆ 3 ತಿಂಗಳು ಜೈಲು ಪ್ರಕಟಸಿದೆ. ಇತ್ತ ರೋಸ್ಮಂಡ್ ಬ್ರೌನ್ ಗೆ ಜೈಲು ಶಿಕ್ಷೆ ಪ್ರಕಟಿಸಿದ ನ್ಯಾಯಾಲಯದ ತೀರ್ಪನ್ನು ಅಮೆರಿಕನ್ ಗಾಯಕಿ ಕಾರ್ಡಿ ಖಂಡಿಸಿದ್ದಾರೆ.
ನಾನು ಅಮೆರಿಕದಲ್ಲಿ ಇಂತಹ ಅನೇಕ ಫೋಟೋಶೂಟ್ ಗಳನ್ನು ನೋಡಿದ್ದೇನೆ. ಅದು ಲೈಂಗಿಕ ಪ್ರಚೋದನೆ ಎಂದು ನಾನು ಭಾವಿಸುವುದಿಲ್ಲ. ಜೈಲು ಶಿಕ್ಷೆ ನೀಡಿದ್ದು ಸಮಂಜಸವಲ್ಲ ಎಂದು ಅಭಿಪ್ರಾಯ ಪಟ್ಟಿದ್ದಾರೆ.
Biggboss 8 – ಮನೆಯ ಸದಸ್ಯರಿಗಾಗಿ ಲಗೇಜ್ ತ್ಯಾಗ ಮಾಡಿದ ಶಮಂತ್..!
ಭಾರತದ ಮಾರ್ಕೊಸ್ ಕಮಾಂಡೋ ಪಡೆಯ ಭಯಾನಕ ತರಬೇತಿ ಬಗ್ಗೆ ನಿಮಗೆಷ್ಟು ಗೊತ್ತು…!