Biggboss 8 – ಮನೆಯ ಸದಸ್ಯರಿಗಾಗಿ ಲಗೇಜ್ ತ್ಯಾಗ ಮಾಡಿದ ಶಮಂತ್..!

1 min read

Biggboss 8 – ಮನೆಯ ಸದಸ್ಯರಿಗಾಗಿ ಲಗೇಜ್ ತ್ಯಾಗ ಮಾಡಿದ ಶಮಂತ್..!

ಬಿಗ್ ಬಾಸ್ ನೀಡಿರುವ ಈ ವಾರದ ಟಾಸ್ಕ್ ನಿಂದಾಗಿ ಮನೆ ಸದಸ್ಯರು ಮೂಲಭೂತ ಸೌಕರ್ಯಗಳನ್ನೇ ಕಳೆದುಕೊಂಡಿದ್ದು, ಟಾಸ್ಕ್ ಮೂಲಕ ಮತ್ತೆ ಎಲ್ಲಾ ಸೌಕರ್ಯಗಳಾದ , ನೀರು, ಬಟ್ಟೆ , ರೂಮ್ಸ್ , ಜಿಮ್ ಐಟಮ್ಸ್ ಎಲ್ಲವನ್ನೂ ವಾಪಸ್ ಪಡೆಯಬೇಕಾಗಿದೆ.

ಹೀಗಿರುವಾಗ  ಮನೆ ಮಂದಿ ಪರದಾಟ ನೋಡೋಕಾಗ್ತಿಲ್ಲ. ಒಂದ್ ಕಡೆ ಮಂಜು ಸ್ಮೋಕಿಂಗ್ ಝೋನ್ ಗಾಗಿ ಬಿಗ್ ಬಾಸ್ ಬಳಿ ಬೇಡಿಕೊಂಡ್ರೆ , ಮತ್ತೊಂದೆಡೆ ಬಾತ್ ರೂಮ್ ಕಿಟ ಗಾಗಿಯೂ ಬೇಡಿಕೊಳ್ತಿದ್ದಾರೆ. ಇನ್ನೂ ಹೇಗೋ ಜುಗಾಡ್ ಮಾಡಿ ದಿನ ಗಳೆಯುತ್ತಿರುವ ಸ್ಪರ್ಧಿಗಳು ಇತ್ತೀಚೆಗೆ ಕೆಲ ಕಿಚನ್ ಐಟಮ್ಸ್ ದಿನಸಿ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಇತ್ತ ಸ್ಪರ್ಧಿಗಳ ಲಜೇಜ್ ಪಡೆಯುವ ಅವಕಾಶವನ್ನ ಬಿಗ್ ಬಾಸ್ ನೀಡಿದ್ದರು.  ಟೈನಿ ಬಾಲ್ಸ್ ಟಾಸ್ಕ್ ನೀಡಿದ್ದರು. ಗೆದ್ರೆ ಮನೆ ಮಂದಿ ಲಜೇಜ್ ಪಡೆಯಬಹುದಾಗಿತ್ತು. ಆದ್ರೆ ಈ ಟಾಸ್ಕ್ ನಲ್ಲಿ ಅರವಿಂದ್, ರಘು ಗೌಡ , ಶಮಂತ್ ಗೌಡ ಭಾಗವಹಿಸಿ ಸೋಲು ಅನುಭವಿಸಿದ್ದರು. ಹೀಗಾಗಿ ಈ ಅವಕಾಶ ಮನೆಮಂದಿಯ ತೈತಪ್ಪಿಹೋಗಿತ್ತು.

ಅಲ್ದೇ ಇದಾದ ಮೇಲೆ ಬಿಗ್ ಬಾಸ್ ಲಜೇಜ್ ಪಡೆಯಲು ಮತ್ತೊಂದು ಚಾನ್ಸ್ ನೀಡಿದ್ದರು.  ಇದರ ಅನ್ವಯ ಮನೆಯ ಒಬ್ಬ ಸದಸ್ಯ  ಮನೆಯ ಇತರೇ ಸದಸ್ಯರಿಗಾಗಿ ತಮ್ಮ ಲಗೇಜ್ ಅನ್ನ ತ್ಯಾಗ ಮಾಡಬೇಕಾಗಿತ್ತು. ಅಲ್ಲದೇ ಆ ಸದಸ್ಯರು ಮನೆಯ ಇತರೇ ಸದಸ್ಯರ ಬಟ್ಟೆಗಳನ್ನ ಸಹ ತಾವು ಬಳಸುವಂತಿರಲಿಲ್ಲ.

ಬಿಗ್ ಬಾಸ್ ನ ಈ ಶರತ್ತನ್ನ ಶಮಂತ್ ಗೌಡ ಸ್ವಯಂಪ್ರೇರಿತರಾಗಿ ಒಪ್ಪಿಕೊಂಡು ಮನೆಯ ಸದಸ್ಯರಿಗಾಗಿ ತಮ್ಮ ಲಗೇಜ್ ತ್ಯಾಗಮಾಡಿಬಿಟ್ಟರು. ಅಂದ್ಹಾಗೆ ಇದು ಫೇವರ್ ರಿಟರ್ನ್ ಅಂದ್ರೆ ಸದಸ್ಯರು ಈ ಹಿಂದೆ ಶಮಂತ್ ಗೆ ಮಾಡಿದ್ದ ಸಹಾಯದ ಋಣವನ್ನ ಶಮಂತ್ ತೀರಿಸಿದ್ದಾರೆ ಎನ್ನಬಹುದು..

ಈ ಹಿಂದೆ ಮನೆ ಸದಸ್ಯರು ಶಮಂತ್ ಗಾಗಿ ತಮ್ಮ ರೂಮ್ ಗಳನ್ನೇ ತ್ಯಾಗ ಮಾಡಿದ್ದರು. ಹೀಗಾಗಿ ಈಗ ಆ  ಋಣ ತೀರಿಸುವುದಕ್ಕೆ ಸರಿಯಾದ ಸಮಯ ಎಂದು ಶಮಂತ್ ತಮ್ಮ ಲಜೇಜ್ ತ್ಯಾಗ ಮಾಡಿದ್ದಾರೆ.  ಅಲ್ಲದೇ ಶಮಂತ್ ಅವರ ನಿರ್ಧರಾದಿಂದ ಮನೆ ಸದಸ್ಯರು ಖುಷಿಯಾಗಿದ್ದು, ಶಮಂತ್ ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬಳಿಕ ಶಮಂತ್ ಬಿಟ್ಉ ಮತ್ತೆಲ್ಲರ ಲಗೇಜ್ ಗಳನ್ನ ಬಿಗ್ ಬಾಸ್ ವಾಪಸ್ ಕಳುಹಿಸಿಕೊಟ್ಟಿದ್ದಾರೆ.

ಭಾರತದ ಮಾರ್ಕೊಸ್ ಕಮಾಂಡೋ ಪಡೆಯ ಭಯಾನಕ ತರಬೇತಿ ಬಗ್ಗೆ ನಿಮಗೆಷ್ಟು ಗೊತ್ತು…!

ಸರ್ದಾರ್ ಕಾ ಗ್ರ್ಯಾಂಡ್ ಸನ್ – ನೀನಾ ಗುಪ್ತರ ಆಸೆ ಈಡೇರಿಸಲು ಲಾಹೋರ್ ಅನ್ನು ಅಮೃತಸರಕ್ಕೆ ಸ್ಥಳಾಂತರಿಸುವ ಅರ್ಜುನ್

ಬಾಂಡಲಿಯಾದ ರಶ್ಮಿಕಾ… ಅಭಿಮಾನಿಗಳು ಶಾಕ್… ಏನಿದು ಕಿರಿಕ್ ರಾಣಿಯ ಹೊಸ ವರಸೆ..!

 

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd