ಮನೆ ಮದ್ದು..ಮುದ್ದೆ.
ಧಾನ್ಯಗಳ ರಾಣಿ.. ರಾಗಿ ಗಿರುವ ಮಹತ್ವ ಇತಿಹಾಸ ಎಲ್ಲರು ತಿಳಿದು ಕೋಳ್ಳಬೇಕಾದದ್ದು.
ದೇಹಕ್ಕೆ ತಂಪು ಮಾತ್ರವಲ್ಲದೆ .ದೇಹದ ತೂಕ ಇಳಿಸುವಲ್ಲಿ ಮಹತ್ವದ ಪಾತ್ರವಹಿಸಿದೆ.
ಇಂತಹ ರಾಗಿ ಮುದ್ದೆಯ ಇನ್ನಷ್ಟು ಹಲವಾರು ವಿಶೇಷತೆಗಳನ್ನು ತಿಳಿಯೋಣ.

ಕೊಬ್ಬು ಮತ್ತು ದೇಹದ ತೂಕ ಇಳಿಸಲು ಹೆಚ್ಚು ಸಹಾಯಕಾರಿ. ರಾಗಿಯಲ್ಲಿ ಅಮೀನೊ ಐಸಿಂಗ್ ಟ್ರೈಫ್ಟೋಫನ್ ಎನ್ನುವ ಅಂಶ ಹಸಿವನ್ನು ಕಡಿಮೆ ಮಾಡುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ.
ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ:
ರಾಗಿಯಲ್ಲಿರುವ ಅಮೀನೊ ಏಸಿಡ್ ಲೆಸಿತಿನ್ ಹಾಗೂ ಮೆಥೊನಿನ್ ಎಂಬ ಅಂಶವು ಜೀರ್ಣಾಂಗವ್ಯೂಹದಲ್ಲಿರುವ ಹೆಚ್ಚುವರಿ ಕೊಬ್ಬನ್ನು ಕಡಿಮೆ ಮಾಡುವ ಮೂಲಕ ಕೊಲೆಸ್ಟ್ರಾಲ್ ಮಟ್ಟವನ್ನು ಸುಧಾರಿಸುತ್ತದೆ.
ದೇಹಕ್ಕೆ ತಂಪು:
ರಾಗಿ ಬೇಸಿಗೆ ಸಮಯದಲ್ಲಿ ದೇಹವನ್ನು ತಂಪಾಗಿಸುವ ಶಕ್ತಿಯನ್ನು ಹೊಂದಿದೆ.
ಬೇಸಿಗೆ ಸಮಯದಲ್ಲಿ ಕಂಡುಬರುವ ಹಲವಾರು ರೋಗಗಳಿಗೆ ಪರಿಣಾಮಕಾರಿ ಮನೆ ಮದ್ದು ರಾಗಿ ಆಗಿದೆ.
ಮಧುಮೇಹಿಗಳಿಗೆ ಸೂಕ್ತ:
ನೀವು ಮಧುಮೇಹ ಹೊಂದಿದ್ದಲ್ಲಿ ನಿಮಗೆ ರಾಗಿಯು ಉತ್ತಮ ಮದ್ದಾಗಿದೆ.
ನಿಮಗೆ ಇದೊಂದು ಪರಿಪೂರ್ಣ ಆಹಾರವಾಗಿದೆ. ಮಧುಮೇಹದಲ್ಲಾಗುವ ಮೆಲ್ಲಿಟಸ್ ಮತ್ತು ಜೀರ್ಣಾಂಗವ್ಯೂಹದ ಅಸ್ವಸ್ಥತೆಗಳನ್ನು ಅಪಾಯ ಮಟ್ಟವನ್ನು ರಾಗಿ ಮುದ್ದೆ ಕಡಿಮೆ ಮಾಡುತ್ತದೆ.
ಅನೀಮಿಕ್ :
ಅನಿಮೀಯಾದಿಂದ ಬಳಲುತ್ತಿರುವವರು ನೀವಾಗಿದ್ದರೆ ನಿಮ್ಮ ದೇಹಕ್ಕೆ ಅಗತ್ಯವಾಗಿರುವ ನೈಸರ್ಗಿಕ ಐರನ್ನ ಮೂಲವನ್ನು ರಾಗಿ ಒದಗಿಸುತ್ತದೆ.
ಮೂಳೆಗಳಿಗೆ ಉತ್ತಮ:
ಮೂಳೆಗಳನ್ನು ಬಲಪಡಿಸುವ ಶಕ್ತಿಯನ್ನು ಹೊಂದಿದೆ.
ಮುದ್ದೆಯಲ್ಲಿ ಹೆಚ್ಚು ಪ್ರಮಾಣದ ಕ್ಯಾಲ್ಶಿಯಂ ಮತ್ತು ವಿಟಮಿನ್ ಡಿ ಇದೆ.
ಇದು ಮಕ್ಕಳಿಗೆ ಹಾಗೂ ವೃದ್ಧರಿಗೆ ಆವಶ್ಯಕವಾಗಿರುವ ಪ್ರಮುಖ ಅಂಶಗಳನ್ನು ಹೊಂದಿದೆ.
ರಿಲ್ಯಾಕ್ಸ್:
ರಾಗಿಯು ಒತ್ತಡದಿಂದ ರಿಲ್ಯಾಕ್ಸ್ ಆಗುವಂತೆ ಮಾಡುತ್ತದೆ.
ರಾಗಿಯು ಒತ್ತಡ ನಿವಾರಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ.

ಥೈರಾಯ್ಡ್ ಸಮಸ್ಯೆ ಇದ್ದಲ್ಲಿ :
ರಾಗಿ ಮುದ್ದೆಯ ಆರೋಗ್ಯಕಾರಿ ಪ್ರಯೋಜನದಲ್ಲಿ ಮೇಲುಗೈ ಯಾಗಿದೆ.
ಥೈರಾಯ್ಡ್ ಹೊಂದಿದ್ದಲ್ಲಿ ರಾಗಿಯು ಗುಣಪಡಿಸುವಲ್ಲಿ ಹೆಚ್ಚು ಕೆಲಸ ನಿರ್ವಹಿಸುತ್ತದೆ.
ಹೈಪೋಥೈರಾಯ್ಡ್‌ನಿಂದ ಬಳಲುತ್ತಿರುವವರಿಗೆ ಇದು ಉತ್ತಮ ಮನೆಮದ್ದಾಗಿದೆ.
ಮಲಬದ್ಧತೆಗೆ ಉಪಯೋಗಕಾರಿ:
ಫೈಬರ್ ಗುಣವು ರಾಗಿಯಲ್ಲಿ ಹೆಚ್ಚಾಗಿದ್ದು ಮಲಬದ್ಧತೆಗೆ ಸಹಾಯಕಾರಿಯಾಗಿದೆ.
ಸುಲಭವಾದ ಮಲಬದ್ಧತೆಯನ್ನು ಹೊಂದಲು ದಿನದ ಆಹಾರದಲ್ಲಿ ರಾಗಿಮುದ್ದೆ ಸೇವಿಸುವುದು ಉತ್ತಮ
ತಾಯಂದಿರಿಗೆ:
ನೂತನ ತಾಯಂದಿರಿಗೆ, ಹಿಮೋಗ್ಲೋಬೀನ್ ಮಟ್ಟಗಳನ್ನು ಸುಧಾರಿಸಲು ಮತ್ತು ಹಾಲಿನ ಉತ್ಪಾದನೆಯಲ್ಲಿ ರಾಗಿ ಮಹತ್ವದ ಕಾರ್ಯ ನಿರ್ವಹಿಸುತ್ತದೆ.
ಸದೃಢತೆಗೆ ಸಹಕಾರಿ ರಾಗಿ : ಸಾಮರ್ಥ್ಯ ಹೆಚ್ಚಿಸಲು ಮತ್ತು ರೋಗನಿರೋಧಕ ವ್ಯವಸ್ಥೆಯನ್ನು ಸುಧಾರಿಸಲು ರಾಗಿ ಬಲು ಉಪಯೋಗಕರ
ರಾಗಿಯಲ್ಲಿರುವ ಪ್ರೊಟೀನ್ ವಿಟಮಿನ್‌ಗಳು ನಿಮ್ಮನ್ನು ದೈಹಿಕವಾಗಿ ಆರೋಗ್ಯವಾಗಿಡಲು ಸಹಕಾರಿಯಾಗಿದೆ.