ರಾಗಿಣಿ ಹೊಸ ಸಾಧನೆ : ಶಿವರಾತ್ರಿ ದಿನ ಸೋಷಿಯಲ್ ಮೀಡಿಯಾದಲ್ಲಿ ಹೇಳಿದ್ದೇನು..!
ಡ್ರಗ್ಸ್ ಕೇಸ್ ನಲ್ಲಿ ಜೈಲು ಸೇರಿದ್ದ ತುಪ್ಪದ ಬೆಡಗಿ ರಾಗಿಣಿ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್ ಆಗಿದ್ದಾರೆ. ಕೆಲ ಸಿನಿಮಾಗಳು ಅವರ ಕೈಯಲ್ಲಿದೆ. ನಿನ್ನೆ ಶಿವರಾತ್ರಿ ಹಬ್ಬದಂದು ರಾಗಿಣಿ ತಮ್ಮ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಒಂದನ್ನ ಶೇರ್ ಮಾಡಿದ್ದು, ನೆಟ್ಟಿಗರು ಸಕಾರಾತ್ಮಕವಾಗಿಯೇ ಕಮೆಂಟ್ ಗಳನ್ನ ಮಾಡ್ತಾಯಿದ್ದಾರೆ. ಈ ಪೋಸ್ಟ್ ನಲ್ಲಿ ರಾಗಿಣಿ ರೆಡ್ – ಗ್ರೀನ್ ಚೂಡಿದಾರ್ ನಲ್ಲಿ ಫೋಟ್ ಶೂಟ್ ಮಾಡಿಸಿ ಶೇರ್ ಮಾಡಿಕೊಂಡಿದ್ದಾರೆ.
ಏನದು ಅನೌನ್ಸ್ ಮೆಂಟ್..?
ನಟಿ ರಾಗಿಣಿ ತಾವು ಯೂಟ್ಯೂಬ್ ಚಾನಲ್ ತೆರೆದಿರುವುದಾಗಿ ಘೋಷಣೆ ಮಾಡಿದ್ದಾರೆ. ಅಂದ್ಹಾಗೆ ರಾಗಿಣಿ ಮಹಿಳಾ ದಿನದಂದೇ ತಮ್ಮದೇ ಆದ ಯೂಟ್ಯೂಬ್ ಚಾನೆಲ್ ಆರಂಭಿಸಿದ್ದಾರೆ. ಇನ್ನು ಮುಂದೆ ತಮ್ಮ ವಿಡಿಯೋಗಳನ್ನು ಅಲ್ಲೇ ಪೋಸ್ಟ್ ಮಾಡುವುದಾಗಿ ಹೇಳಿಕೊಂಡಿದ್ದಾರೆ. ಅಲ್ದೇ ನಿನ್ನೆ ಶಿವರಾತ್ರಿ ಹಬ್ಬದಂದು ಮಾಡಿದ ವಿಶೇಷ ಪೂಜೆಯ ವಿಡಿಯೋವನ್ನು ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಪೋಸ್ಟ್ ಮಾಡಿರುವುದಾಗಿಯೂ ಹೇಳಿಕೊಂಡಿದ್ದಾರೆ.








