ಬೆಂಗಳೂರು: ಸ್ಯಾಂಡಲ್ವುಡ್ನ ಡ್ರಗ್ಸ್ ಮಾಫಿಯಾ ನಂಟಿನ ಆರೋಪದ ಮೇರೆಗೆ ಸಿಸಿಬಿ ಪೊಲೀಸರ ವಶದಲ್ಲಿರುವ ಹಾಟ್ ನಟಿ ರಾಗಿಣಿ ದ್ವಿವೇದಿ ವಿಚಾರಣೆ ಆರಂಭವಾಗಿದೆ.
ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಸಿಸಿಬಿ ಕೇಂದ್ರ ಕಚೇರಿಯಲ್ಲಿ ಎಸಿಪಿ ಗೌತಮ್ ನೇತೃತ್ವದಲ್ಲಿ ನಟಿ ರಾಗಿಣಿ ವಿಚಾರಣೆ ನಡೆಯುತ್ತಿದೆ. ಈ ವೇಳೆ ಸಿಸಿಬಿ ಪೊಲೀಸರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಲು ರಾಗಿಣಿ ನಿರಾಕರಿಸಿದ ಹಿನ್ನೆಲೆಯಲ್ಲಿ ಎಸಿಪಿ ಗೌತಮ್ ಗರಂ ಆದ ಘಟನೆಯೂ ನಡೆದಿದೆ.
ನಿನ್ನೆ ನೀವು ಎಲ್ಲಿಗೆ ಹೋಗಿದ್ರಿ, ನೋಟಿಸ್ ನೀಡಿದ್ರೂ ಯಾಕೆ ವಿಚಾರಣೆಗೆ ಬಂದಿಲ್ಲ. ವಿಚಾರಣೆಗೆ ಯಾಕೆ ಬರಲ್ಲ ಎನ್ನುತ್ತಿದ್ದಂತೆ ನಾನು ಸಾಮಾಜಿಕ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿದ್ದೇನೆ. ಹೀಗಾಗಿ ಬರಲು ಆಗಿಲ್ಲ ಎಂದು ರಾಗಿಣಿ ಉತ್ತರ ನೀಡಿದ್ದಾರೆ.
ನಿಮಗೆ ರವಿಶಂಕರ್ ಗೊತ್ತಾ, ರವಿಶಂಕರ್ ನೀವು ಫ್ರೆಂಡ್ಸ್ ಆಗಿದ್ದು ಯಾವಾಗ, ಹೇಗೆ ಪರಿಚಯ ಆಯಿತು. ರವಿಶಂಕರ್ ನಿಮ್ಮ ಸಂಪರ್ಕಕ್ಕೆ ಬಂದಿದ್ದು ಹೇಗೆ ಎನ್ನುತ್ತಿದ್ದಂತೆ ರಾಗಿಣಿ ಹೈಡ್ರಾಮ ಶುರು ಮಾಡಿದ್ದಾರೆ ಎನ್ನಲಾಗಿದೆ.
ರವಿಶಂಕರ್ ತಪ್ಪು ಮಾಡಿದ್ರೆ ಅವನನ್ನು ಕೇಳಿ. ನನಗೆ ಯಾಕೆ ಈ ಪ್ರಶ್ನೆ ಕೇಳುತ್ತಿದ್ದೀರಿ ಎಂದು ರಾಗಿಣಿ ಸಿಸಿಬಿ ಪೊಲೀಸರನ್ನೇ ಮರು ಪ್ರಶ್ನೆ ಹಾಕಿದ್ದಾರೆ.
ನೀವು ಯಾವ ಯಾವ ಪಾರ್ಟಿಗಳಿಗೆ ಹೋಗಿದ್ರಿ, ಪಾರ್ಟಿಗಳಿಗೆ ಯಾರು ಯಾರು ಬರುತ್ತಿದ್ದರು. ಪಾರ್ಟಿಗಳಲ್ಲಿ ಡ್ರಗ್ಸ್ ಸಪ್ಲೈ ಆಗಿದ್ದು ಎಲ್ಲಿ, ಯಾವಾಗ ? ರವಿಶಂಕರ್ ಡ್ರಗ್ಸ್ ಸಪ್ಲೈ ಮಾಡಿದ್ದನಾ..? ರವಿಶಂರ್ ನಿಮ್ಮ ಜೊತೆ ಪಾರ್ಟಿಗಳಿಗೆ ಬರುತ್ತಿದ್ದನಾ..? ರವಿಶಂಕರ್ ಡ್ರಗ್ಸ್ ಪೆಡ್ಲರ್ ಜೊತೆ ಸಂಪರ್ಕ ಹೊಂದಿದ್ದನಾ ಎಂದು ರಾಗಿಣಿ-ರವಿಶಂಕರ್ ಎದುರು ಕೂರಿಸಿ ಸಿಸಿಬಿ ಪೊಲೀಸರು ಪ್ರಶ್ನೆಗಳ ಪ್ರಶ್ನೆ ಹಾಕಿ ವಿಚಾರಣೆ ನಡೆಸುತ್ತಿದ್ದಾರೆ.