ರಾಗಿಣಿಗೆ ಮಲಯಾಳಂ ಬಳಿಕ ತಮಿಳಿನಲ್ಲಿ ಬಂಪರ್ ಆಫರ್
ಬೆಂಗಳೂರು : ಸ್ಯಾಂಡಲ್ ವುಡ್ ಡ್ರಗ್ ಕೇಸ್ ನಲ್ಲಿ ಸಿಲುಕಿ ಪರಪ್ಪನ ಅಗ್ರಹಾರ ಜೈಲು ಸೇರಿ ಸುಮಾರು 3 ತಿಂಗಳ ನಂತರ ಜಾಮೀನಿನ ಮೇಲೆ ಜೈನಿಲಿಂದ ಹೊರ ಬಂದಿರುವ ರಾಗಿಣಿ ಸೋಷಿಯಲ್ ಮೀಡಿಯಾದಲ್ಲೂ ಸಿಕ್ಕಾಪಟ್ಟೆ ಹೈಪರ್ ಆಕ್ಟೀವ್ ಆಗಿದ್ದಾರೆ.. ಜೊತಗೆ ಸಿನಿಮಾಗಳಲ್ಲೂ ಬ್ಯುಸಿಯಿದ್ದಾರೆ..
ಕೆಲ ದಿನಗಳ ಹಿಂದೆ ಹಿಂದಿ ಆಲ್ಬಂಬ್ ಸಾಂಗ್ ಬಗ್ಗೆಯೂ ಅಪ್ ಡೇಟ್ ಕೊಟ್ಟಿದ್ದರು.. ಕನ್ನಡಲ್ಲೂ 3 – 4 ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ರಾಗಿಣಿ ಇತ್ತೀಚೆಗೆ ಮಲಯಾಳಂ ಸಿನಿಮಾದಲ್ಲಿ ನಟಿಸುತ್ತಿರುವ ವಿಚಾರವೂ ಗೊತ್ತಾಗಿತ್ತು.. ಆದ್ರೆ ಇದ್ರ ಬೆನ್ನಲ್ಲೇ ಅವರಿಗೆ ತಮಿಳು ಸಿನಿಮಾದಿಂದ ಆಫರ್ ಸಿಕ್ಕಿದೆ..
ಕನ್ನಡದಲ್ಲಿ ರಾಣ ಸಿನಿಮಾದ ಒಂದು ಹಾಡಿನಲ್ಲಿ ರಾಗಿಣಿ ಡಾನ್ಸ್ ಮಾಡಿದ್ದಾರೆ. ನಂತರ ಸಾರಿ ಕರ್ಮಾ ರಿಟರ್ನ್ ಎನ್ನು ಟೈಟಲ್ ಅಡಿಯಲ್ಲಿ ದ್ವಿಭಾಷಾ ಸಿನಿಮಾವನ್ನು ರಾಗಿಣಿ ಪ್ರಕಟ ಮಾಡಿದ್ದಾರೆ. ಈಗ ಮಲಯಾಳಂ ಮತ್ತು ತಮಿಳು ಚಿತ್ರಗಳಲ್ಲೂ ಸದ್ದು ಮಾಡೋಕೆ ರೆಡಿಯಾಗ್ತಿದ್ದಾರೆ..
ಇತ್ತೀಚೆಗೆಷ್ಟೇ ಶೈಲಾ ಎನ್ನುವ ಮಲಯಾಳಂ ಚಿತ್ರವನ್ನು ಮಾಡುತ್ತಿರೋದಾಗಿ ತಿಳಿಸಿದ್ದ ರಾಗಿಣಿ ಈಗ ಅವರ ಮುಂದಿನ ತಮಿಳು ಚಿತ್ರವನ್ನ ಪ್ರಕಟಿಸಿದ್ದಾರೆ. ಚಿತ್ರದ ಮುಹೂರ್ತ ಕೂಡ ನೆರವೇರಿದೆ. ಸಮಾರಂಭದ ಫೋಟೊಗಳನ್ನು ರಾಗಿಣಿ ಹಂಚಿಕೊಂಡಿದ್ದಾರೆ. ರಾಗಿಣಿ ಸದ್ಯ ತಮಿಳಿನ ಚಿತ್ರಕ್ಕೆ ಸಹಿ ಹಾಕಿದ್ದಾರೆ. ಈ ಸಿನಿಮಾಗೆ ‘ಒನ್2 ಒನ್’ ಎಂಬ ಟೈಟಲ್ ಫಿಕ್ಸ್ ಮಾಡಲಾಗಿದೆ.. ಅಲ್ಲದೇ ಸಿನಿಮಾದ ಶೂಟಿಂಗ್ ಕೂಡ ಆರಂಭ ಆಗಿದೆ. ಇನ್ನೂ ಸಿನಿಮಾದಲ್ಲಿ ರಾಗಿಣಿ ಹೋಮ್ಲಿ ಲುಕ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.