ಬೆಂಗಳೂರು: ಸ್ಯಾಂಡಲ್‍ವುಡ್ ಡ್ರಗ್ ಮಾಫಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ರಾಗಿಣಿ ದ್ವಿವೇದಿ ಅವರನ್ನು ಮತ್ತೆ 5 ದಿನಗಳ ಕಾಲ ಸಿಸಿಬಿ ವಶಕ್ಕೆ ನೀಡಲಾಗಿದೆ.
ಕಳೆದ ಶುಕ್ರವಾರ ರಾಗಿಣಿ ಅವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು. ಅಂದು ಮೂರು ದಿನ ಸಿಸಿಬಿ ಕಸ್ಟಡಿಗೆ ನ್ಯಾಯಾಲಯ ನೀಡಿತ್ತು. ಇಂದಿಗೆ ಸಿಸಿಬಿ ಕಸ್ಟಡಿ ಅಂತ್ಯವಾದ ಹಿನ್ನೆಲೆಯಲ್ಲಿ ಬೆಂಗಳೂರಿನ 1ನೇ ಎಸಿಎಂಎಂ ಕೋರ್ಟ್‍ಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರುಪಡಿಸಲಾಯಿತು.
ಈ ವೇಳೆ ಆರೋಪಿ ಸ್ಥಾನದಲ್ಲಿರುವ ನಟಿ ರಾಗಿಣಿ ಕರ್ನಾಟಕ ಮಾತ್ರವಲ್ಲ, ಬೇರೆ ರಾಜ್ಯಗಳಲ್ಲಿ ಹೈಎಂಡ್ ಪಾರ್ಟಿಗಳಲ್ಲಿ ಭಾಗಿಯಾಗಿದ್ದಾರೆ. ಅಲ್ಲಿಗೆ ಆರೋಪಿಯನ್ನು ಕರೆದೊಯ್ದು ಮಹಜರ್ ಮಾಡಿ ವಿಚಾರಣೆ ನಡೆಸಬೇಕಿದೆ. ಆರೋಗ್ಯದ ನೆಪ ಹೇಳಿ ವಿಚಾರಣೆಗೆ ಸಹಕಾರ ನೀಡುತ್ತಿಲ್ಲ. ಹೀಗಾಗಿ 10 ದಿನ ಕಾಲ ಕಸ್ಟಡಿಗೆ ನೀಡುವಂತೆ ಸಿಸಿಬಿ ಪರ ವಕೀಲರು ನ್ಯಾಯಾಧೀಶರಲ್ಲಿ ಮನವಿ ಮಾಡಿದರು.
ಆದರೆ, ಸೆಲಬ್ರಿಟಿ ಎಂಬ ಕಾರಣಕ್ಕೆ ರಾಗಿಣಿ ಅವರನ್ನು ಈ ಕೇಸ್‍ನಲ್ಲಿ ಸಿಲುಕಿಸಲಾಗಿದೆ. ಹೀಗಾಗಿ ರಾಗಿಣಿ ಅವರಿಗೆ ಜಾಮೀನು ನೀಡಿ, ಸಿಸಿಬಿ ವಶಕ್ಕೆ ನೀಡಬೇಡಿ ಎಂದು ರಾಗಿಣಿ ಪರ ವಕೀಲರು ವಾದಿಸಿದ್ದಾರೆ.
ಇದೇ ಪ್ರಕರಣದಲ್ಲಿ ಸಾಕಷ್ಟು ಆರೋಪಿಗಳ ವಿಚಾರಣೆ ಮಾಡಬೇಕಿದೆ. ಇನ್ನೂ 6 ಆರೋಪಿಗಳ ಬಂಧನವಾಗಬೇಕಿದೆ. ಈ ಪ್ರಕರಣದಲ್ಲಿ ರಾಗಿಣಿ ನೇರವಾದ ಲಿಂಕ್ ಹೊಂದಿದ್ದಾರೆ. ಹೀಗಾಗಿ 10 ದಿನಗಳ ನೀಡುವಂತೆ ಮನವಿ ಮಾಡಿದರು. ಆದರೆ, ನ್ಯಾಯಾಧೀಶರು ಕೇವಲ 5 ದಿನಗಳ ಸಿಸಿಬಿ ವಶಕ್ಕೆ ನೀಡಿ ಆದೇಶ ನೀಡಿದ್ದಾರೆ
ಈ ನಡುವೆ, ರಾಗಿಣಿ ಮುಂಬೈ ಮೂಲದ ವಕೀಲರ ಮೊರೆ ಹೋಗಿದ್ದರು. ಇಂದಿನ ವಿಚಾರಣೆಗೆ ಮುಂಬೈ ಮೂಲದ ವಕೀಲರು ಇಂದು ಕೋರ್ಟ್‍ಗೆ ಹಾಜರಾಗಲಿಲ್ಲ.
Rashmika Mandanna : ಟಾಲಿವುಡ್ ಹೀರೋ ನಿತಿನ್ ಜೊತೆ ಮತ್ತೊಂದು ಹೊಸ ಸಿನಿಮಾ ಘೋಷಿಸಿದ ರಶ್ಮಿಕಾ…
Rashmika Mandanna : ಟಾಲಿವುಡ್ ಹೀರೋ ನಿತಿನ್ ಜೊತೆ ಮತ್ತೊಂದು ಹೊಸ ಸಿನಿಮಾ ಘೋಷಿಸಿದ ರಶ್ಮಿಕಾ… ನ್ಯಾಷನಲ್ ಕ್ರಷ್ ರಶ್ಮಿಕಾ ಮಂದಣ್ಣ ವಿಜಯ್ ಜೊತೆ ವಾರಿಸು ನಂತರ ...