ಬೆಂಗಳೂರು: ಇಂದು ಕರ್ನಾಟಕ ಸೇರಿದಂತೆ ದೇಶಾದ್ಯಂತ ಈ ವರ್ಷದ ಅತಿದೊಡ್ಡ ರಾಹುಗ್ರಸ್ತ ಚೂಡಾಮಣಿ ಸೂರ್ಯಗ್ರಹಣ ಗೋಚರವಾಗಿದೆ. ಉತ್ತರ ಭಾರತದಲ್ಲಿ ಗ್ರಹಣ ಸ್ಪಷ್ಟವಾಗಿ ಗೋಚರವಾಗುತ್ತಿದ್ದು, ದಕ್ಷಿಣ ಭಾರತದಲ್ಲಿ ಭಾಗಶಃ ಗ್ರಹಣ ಕಂಡುಬಂದಿದೆ.
ಕರ್ನಾಟಕದಲ್ಲೂ ಸಹ ಸೂರ್ಯಗ್ರಹಣ ಭಾಗಶಃ ಗೋಚರವಾಗಿದೆ. ಬೆಂಗಳೂರು, ಹಾಸನ, ಮಂಡ್ಯ, ಮಡಿಕೇರಿ, ಶಿವಮೊಗ್ಗ, ಕೋಲಾರ, ರಾಯಚೂರಿನಲ್ಲಿ ಸೂರ್ಯಗ್ರಹಣ ಗೋಚರವಾದರೆ, ತುಮಕೂರು, ಚಿತ್ರದುರ್ಗ, ಮಂಗಳೂರು, ಕಲಬುರ್ಗಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಸೂರ್ಯಗ್ರಹಣ ವೀಕ್ಷಣೆಗೆ ಮೋಡ ಅಡ್ಡಿಯಾಗಿದೆ. ಹೀಗಾಗಿ ಹಲವು ಕಡೆ ಗ್ರಹಣ ಕಾಣದೆ ನಿರಾಸೆ ಮೂಡಿಸಿದೆ.
ಇದು ಅತೀ ದೊಡ್ಡ ಸೂರ್ಯ ಗ್ರಹಣವಾಗಿದ್ದು, 100 ವರ್ಷಕ್ಕೊಮ್ಮೆ ಸಂಭವಿಸಲಿದೆ. ಈ ಸೂರ್ಯಗ್ರಹಣ ಈ ಹಿಂದೆ 1911ರಲ್ಲಿ ಆಗಿತ್ತು.
ಗ್ರಹಣ ಹಿನ್ನೆಲೆ ಬೆಂಗಳೂರು ನಗರ ಸ್ತಬ್ಧ..!
ಬೆಂಗಳೂರು ನಗರದಲ್ಲೂ ರಾಹುಗ್ರಸ್ತ ಸೂರ್ಯಗ್ರಹಣ ಗೋಚರವಾಗಿದೆ. ಸೂರ್ಯಗ್ರಹಣ ಹಿನ್ನೆಲೆಯಲ್ಲಿ ನಗರದ ಬಹುತೇಕ ರಸ್ತೆಗಳು ಖಾಲಿ ಖಾಲಿಯಾಗಿವೆ. ಗ್ರಹಣದ ಭೀತಿಯಿಂದ ಜನರು ಮನೆಯಿಂದ ಹೊರಬಾರದ ಹಿನ್ನೆಲೆಯಲ್ಲಿ ರಸ್ತೆಗಳು ಬಿಕೋ ಎನ್ನುತ್ತಿವೆ.
ಸೂರ್ಯಗ್ರಹಣ ಹಿನ್ನೆಲೆಯಲ್ಲಿ ಬಹುತೇಕ ಎಲ್ಲಾ ದೇವಾಲಯಗಳ ಬಾಗಿಲು ಮುಚ್ಚಿವೆ. ಗ್ರಹಣದ ಬಳಿಕ ದೇವಾಲಯ ಬಾಗಿಲು ತೆರೆದು ಶುದ್ಧಿ ಮಾಡಿ ಪೂಜೆ ಮಾಡಲಾಗುತ್ತದೆ.
ಉತ್ತರ ಭಾರತದಲ್ಲಿ ಗ್ರಹಂ ಗೋಚರ
ಕರ್ನಾಟಕ ಮಹಾರಾಷ್ಟ್ರ, ತಮಿಳುನಾಡು, ಹರಿಯಾಣ, ಜಮ್ಮು ಮತ್ತು ಕಾಶ್ಮೀರ, ಚೆನೈ ಅಹಮದಾಬಾದ್ ಹಾಗೂ ದೆಹಲಿ ಸೇರಿದಂತೆ ಹಲವು ರಾಜ್ಯಗಳಲ್ಲಿ ಸೂರ್ಯಗ್ರಹಣ ಗೋಚರವಾಗಿದೆ.
ಜಮ್ಮು ಕಾಶ್ಮೀರ, ನವದೆಹಲಿ, ಅಮೃತಸರದಲ್ಲಿ ಪೂರ್ಣ ಸೂರ್ಯಗ್ರಹಣದ ದೃಷ್ಯ ಕಂಡು ಬಂದಿದ್ದು, ಕತ್ತಲೆಯ ವಾತಾವರಣ ನಿರ್ಮಾಣವಾಗಿದೆ.
ಅದೇ ರೀತಿ ಅಬುದಾಬಿ, ಸೈದಿ ಅರೇಬಿಯಾ ಹಾಗೂ ಪಾಕಿಸ್ತಾನದಲ್ಲಿ ಸೂರ್ಯಗ್ರಹಣ ಸ್ಪಷ್ಟವಾಗಿ ಗೋಚರವಾಗಿದ್ದು, ಕೆಲಕಾಲ ಕತ್ತಲೆಯ ಅನುಭವವಾಗಿದೆ.