“ಐಪಿಎಲ್ ನಲ್ಲಿ 20 ಕೋಟಿಗೆ ರಾಹುಲ್ ಹರಾಜು” Rahul saaksha tv
ಮುಂಬೈ : ಕನ್ನಡಿಗ ಕೆ.ಎಲ್. ರಾಹುಲ್ ಸದ್ಯ ವಿಶ್ವ ಕ್ರಿಕೆಟ್ ನಲ್ಲಿ ಘರ್ಜಿಸುತ್ತಿದ್ದಾರೆ. ಕ್ಲಾಸ್ ಅಂಡ್ ಮಾಸ್ ಬ್ಯಾಟಿಂಗ್ ಮಾಡುತ್ತಾ ಎದುರಾಳಿಗೆ ನಡುಕ ಹುಟ್ಟಿಸುತ್ತಿದ್ದಾರೆ.
ಐಪಿಎಲ್ ಇರಲಿ.. ಟಿ-20 ಇರಲಿ.. ಏಕದಿನ ಕ್ರಿಕೆಟ್ ಇರಲಿ.. ಟೆಸ್ಟ್ ಕ್ರಿಕೆಟ್ ಇರಲಿ.. ಎದುರಾಳಿ ಯಾರೇ ಆಗಿರಲಿ.. ಪಿಚ್ ಯಾವುದೇ ಆಗಿರಲಿ.. ರಾಹುಲ್ ಅಲ್ಲಿ ರಾಕಿಂಗ್ ಪ್ರದರ್ಶನ ನೀಡುತ್ತಿದ್ದಾರೆ.
ಹೌದು..! ರಾಹುಲ್ ಸದ್ಯ ಟೀಂ ಇಂಡಿಯಾದ ರಾಕಿಂಗ್ ಸ್ಟಾರ್. ಮೂರು ಮಾದರಿಯ ಕ್ರಿಕೆಟ್ ನಲ್ಲಿ ಭಾರತ ತಂಡದ ಪ್ರಮುಖ ಆಟಗಾರ.
ಐಪಿಎಲ್ ನಲ್ಲಿ ಹಸಿದ ಹೆಬ್ಬುಲಿಯಂತೆ ಘರ್ಜಿಸುವ ಕನ್ನಡಿಗ ಈ ಬಾರಿಯ ಹರಾಜು ಪ್ರಕ್ರಿಯೆಯಲ್ಲಿ ದಾಖಲೆಯ ಮೊತ್ತಕ್ಕೆ ಸೇಲ್ ಆಗಲಿದ್ದಾರೆ ಎಂದು ಟೀಂ ಇಂಡಿಯಾದ ಮಾಜಿ ಆಟಗಾರ ಆಕಾಶ್ ಚೋಪ್ರಾ ಭವಿಷ್ಯ ನುಡಿದಿದ್ದಾರೆ.
ಈ ಬಾರಿ ಐಪಿಎಲ್ ನ ಮೆಗಾ ಹರಾಜು ನಡೆಯಲಿದೆ. ಈ ವೇಳೆ ಆಟಗಾರನ ಸಂಭಾವನೆಗೆ ಯಾವುದೇ ಮಿತಿಯಿಲ್ಲದಿದ್ದರೆ, ಕೆಎಲ್ ರಾಹುಲ್ 20 ಕೋಟಿಗೂ ಹೆಚ್ಚು ಮೊತ್ತಕ್ಕೆ ಹರಾಜು ಆಗಬಹುದು ಎಂದು ಆಕಾಶ್ ಭವಿಷ್ಯ ನುಡಿದಿದ್ದಾರೆ.
ಮೂಲಗಳ ಪ್ರಕಾರ ಕೆ.ಎಲ್ ರಾಹುಲ್, ಐಪಿಎಲ್ 2022 ಕ್ಕೆ ಮುಂಚಿತವಾಗಿ ರಾಹುಲ್ ಪಂಜಾಬ್ ಕಿಂಗ್ಸ್ ನಾಯಕತ್ವವನ್ನು ತೊರೆಯಲಿದ್ದಾರಂತೆ.
ಈಗಾಗಲೇ ಲಕ್ನೋ ಮತ್ತು ಅಹಮದಾಬಾದ್ ತಂಡಗಳು ಸೇರ್ಪಡೆಯಾಗಿದ್ದು ಹರಾಜು ಪ್ರಕ್ರಿಯೆ ಜೋರಾಗಿ ನಡೆಯುವ ಸಾಧ್ಯತೆಯಿದೆ.
ರಾಹುಲ್ ಉತ್ತಮ ಬ್ಯಾಟ್ಸ್ಮನ್ ಮತ್ತು ತಂಡವನ್ನು ಮುನ್ನಡೆಸುವ ಸಾಮಥ್ರ್ಯ ಇರುವ ಕಾರಣ ಫ್ರಾಂಚೈಸಿಗಳು ಅವರನ್ನು ದುಬಾರಿ ಬೆಲೆ ನೀಡಿ ಖರೀದಿಸಬಹುದು ಎಂದು ಹೇಳಲಾಗುತ್ತಿದೆ.
ಇತ್ತ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೂಡ ರಾಹುಲ್ ಮೇಲೆ ಕಣ್ಣಿಟ್ಟಿದೆ.