ನವದೆಹಲಿ : ಐಐಟಿ ಮತ್ತು ವೈದ್ಯಕೀಯ ಕೋರ್ಸ್ ಗಳಿಗಾಗಿ ಜೆಇಇ ಮತ್ತು ಎನ್ ಇಇಟಿ ಪರೀಕ್ಷೆಗಳು ಮುಂದೂಡುವಂತೆ ವಿದ್ಯಾರ್ಧಿಗಳ ಪೋಷಕರು ಸಲ್ಲಿಸಿರುವ ಅರ್ಜಿ ಸುಪ್ರೀಂಕೋರ್ಟಿನಲ್ಲಿ ವಿಚಾರಣೆಗೆ ಬರುತ್ತಿರುವಂತೆಯೇ ಕಾಂಗ್ರೆಸ್ ನಾಯಕರ ರಾಹುಲ್ ಗಾಂಧಿ ಪೋಷಕರ ಬೇಡಿಕೆಯನ್ನು ಬೆಂಬಲಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, ಕೇಂದ್ರ ಸರ್ಕಾರ ವಿದ್ಯಾರ್ಥಿಗಳ ಮನದ ಮಾತು ಕೇಳಲಿ ಮತ್ತು ಕೊರೊನಾ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಐಐಟಿ ಮತ್ತು ವೈದ್ಯಕೀಯ ಕೋರ್ಸ್ ಗಳಿಗಾಗಿ ಜೆಇಇ ಮತ್ತು ಎನ್ ಇಇಟಿ ಪರೀಕ್ಷೆಗಳು ಮುಂದೂಡಲಿ. ಎನ್ ಇಇಟಿ, ಜೆಇಇ ಪರೀಕ್ಷೆ ಬಗ್ಗೆ ವಿದ್ಯಾರ್ಥಿಗಳ ಮನದ ಮಾತನ್ನು ಕೇಂದ್ರ ಸರ್ಕಾರ ಕೇಳಬೇಕು, ನಂತರ ಸ್ವೀಕರಿಸಹಬಹುದಾದ ಪರಿಹಾರಕ್ಕೆ ಬರಲಿ ಎಂದು ಒತ್ತಾಯಿಸಿದ್ದಾರೆ.









