‘ಯಾರ್ ಸ್ಯಾಮಿ ಕುಟುಂಬ ರಾಜಕಾರಣ ಮಾಡ್ತಿರೋರು..? ಪ್ರಧಾನಿಯಾಗಿ 30 ವರ್ಷವಾಗಿದೆ’..!
ನವದೆಹಲಿ: ನಮ್ಮ ಕುಟುಂಬದವರು ಪ್ರಧಾನಿಯಾಗಿ 30 ವರ್ಷವಾಗಿದೆ. ಆದರೂ ಕುಟುಂಬ ರಾಜಕಾರಣ ಎಂದು ಟೀಕಿಸುತ್ತಾರೆ. ಕುಟುಂಬ ರಾಜಕಾರಣ ಮಾಡ್ತಿದ್ದೇವೆ, ವಂಶ ರಾಜಕೀಯ ಮಾಡುತ್ತಿದ್ದೇವೆ ಎಂದು ಪದೇ ಪದೇ ಕೆಲವರು ಹೀಯಾಳಿಸುತ್ತಿದ್ದಾರೆ. ನಾವೇನು ಕುಟುಂಬ ರಾಜಕಾರಣ ಮಾಡುತ್ತಿದ್ದೇವಾ. ವಿನಾಕಾರಣ ಆರೋಪ ಏಕೆ ಮಾಡುತ್ತಿದ್ದೀರಿ. ನಾವು ಇಂತಹ ಇಂಥ ಟೀಕೆಗಳಿಗೆ ಬೆದರಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕಿಡಿಕಾರಿದ್ದಾರೆ.
ಚಿಕಾಗೊ ವಿಶ್ವವಿದ್ಯಾಲಯದ ಪ್ರೊಫೆಸರ್ ದೀಪೇಶ್ ಚಕ್ರವರ್ತಿ ಅವರ ಜತೆ ನಡೆಸಿದ ಮುಕ್ತ ಸಂವಾದದ ವೇಳೆ ಮಾತನಾಡಿರುವ ರಾಹುಲ್ ಗಾಂಧಿ, ಮಾಜಿ ಪ್ರಧಾನಿ ರಾಜೀವ ಗಾಂಧಿ ಅವರ ಕುಟುಂಬದ ಕುಡಿಯಾಗಿರುವ ನಾನು ಇಂಥ ಟೀಕೆಗಳಿಗೆ ಕಿವಿಗೊಡುವುದಿಲ್ಲ. ನಮ್ಮ ಮೇಲೆ ಯಾರು ಎಷ್ಟೇ ಸುಳ್ಳು ಆರೋಪ ಮಾಡಿದರೂ ಮಾಜಿ ಪ್ರಧಾನಿಯ ಮಗನಾಗಿ ತಾತ್ವಿಕ ಸಿದ್ಧಾಂತಗಳಿಗೆ ನನ್ನ ಹೋರಾಟ ನಿಲ್ಲುವುದಿಲ್ಲ. ನಾನು ಹೋರಾಟವನ್ನ ಮುಂದುವರಿಸಿಕೊಂಡು ಹೋಗುತ್ತೇನೆ ಎಂದು ಹೇಳಿದ್ದಾರೆ.
ಕಾಶ್ಮೀರದಲ್ಲಿ ಭಯೋತ್ಪಾದಕ ಚಟುವಟಿಕೆಗೆ ಟರ್ಕಿ ಸಂಚು – ಪಾಪಿ ಪಾಕ್ ಗೆ ಟರ್ಕಿ ಸಾಥ್..!
ಅಲ್ಲದೇ ನನ್ನ ಅಜ್ಜಿ, ಮುತ್ತಾತ ಯಾರು ಎಂದು ನನಗೆ ಬೇಕಾಗಿಲ್ಲ, ಸದ್ಯದ ಭಾರತದ ಪರಿಸ್ಥಿತಿಯಲ್ಲಿ ತತ್ವ, ಸಿದ್ಧಾಂತಗಳ ಬಗ್ಗೆ ನನ್ನ ಹೋರಾಟ ಮುಂದುವರಿಯಲಿದೆ ಎಂದಿದ್ದಾರೆ. ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಸ್ಥಾನವನ್ನ ಸೋನಿಯಾಗಾಂಧಿ ರಾಹುಲ್ ಗಾಂಧಿಯವರೇ ವಹಿಸಿಕೊಳ್ಳುತ್ತಿರುವ ಬೆನ್ನಲ್ಲೇ ಕುಟುಂಬ ರಾಜಕಾರಣದ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ರಾಹುಲ್ ಗಾಂಧಿ ಅವರು ಈ ರೀತಿ ಉತ್ತರ ನೀಡಿದ್ದಾರೆ. ಜೊತೆಗೆ ಟ್ರೋಲ್ಗಳ ಬಗ್ಗೆ ಎಂದಿಗೂ ತಲೆ ಕೆಡಿಸಿಕೊಂಡೇ ಇಲ್ಲ. ಯಾವುದರ ಪರ ನಿಲ್ಲಬೇಕು, ಏನು ಮಾಡಬೇಕು, ಏನು ಮಾತನಾಡಬೇಕು ಎಂಬ ಸಂಪೂರ್ಣ ಅರಿವು ನನಗೆ ಇದೆ. ಕೆಲವೊಮ್ಮೆ ಟ್ರೋಲ್ಗಳು ನನಗೆ ಮಾರ್ಗದರ್ಶನಂತೆ ದಾರಿ ತೋರುತ್ತವೆ ಎಂದರು.
ಮೈಸೂರು | 50 ಅಂಗಡಿಗಳ ತೆರವು ಕಾರ್ಯಾಚರಣೆ
ಚೀನಾಗೆ ಒಂದಿಂಚೂ ಭೂಮಿಯನ್ನ ಬಿಟ್ಟುಕೊಟ್ಟಿಲ್ಲ: ರಕ್ಷಣಾ ಸಚಿವಾಲಯ..!
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








