ಬಾಲಕಿಗೆ ಚಪ್ಪಲಿ ಧರಿಸಲು ನೆರವಾದ ರಾಹುಲ್ ಗಾಂಧಿ
ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ನ ಭಾರತ್ ಜೋಡೋ ಯಾತ್ರೆ ಭಾನುವಾರ ಕೇರಳದ ಹರಿಪಾಡ್ನಿಂದ ಪುನರಾರಂಭಗೊಂಡಿದೆ. ಬೆಳಗ್ಗೆ 6.30ರ ನಂತರ ಆರಂಭವಾದ ಯಾತ್ರೆ 11ನೇ ದಿನಕ್ಕೆ ಕಾಲಿಟ್ಟಿದೆ. ಈ ಸಂದರ್ಭದಲ್ಲಿ ರಾಹುಲ್ ಗಾಂಧಿಯವರು ಹುಡುಗಿಯೊಬ್ಬಳಿಗೆ ಚಪ್ಪಲಿ ಧರಿಸಲು ಸಹಾಯ ಮಾಡುತ್ತಿರುವ ವಿಡಿಯೋವೊಂದು ವೈರಲ್ ಆಗುತ್ತಿದೆ.
ಈ ವಿಡಿಯೋ ಅಲಪ್ಪುಳ ಜಿಲ್ಲೆಯ ಅಂಬಲಪುಳ ಪಟ್ಟಣದಲ್ಲಿಯದು ಎಂದು ಎಂದು ಹೇಳಲಾಗುತ್ತಿದೆ. ರಾಹುಲ್ ಗಾಂಧಿ ಪಕ್ಷದ ಇತರ ನಾಯಕರೊಂದಿಗೆ ಹೆಜ್ಜೆ ಹಾಕುತ್ತಿರುವ ಸಂದರ್ಭದಲ್ಲಿ ಒಬ್ಬ ವ್ಯಕ್ತಿ ಚಿಕ್ಕ ಹುಡುಗಿಯ ಕೈ ಹಿಡಿದುಕೊಂಡು ಅವರಿಗಿಂತ ಸ್ವಲ್ಪ ಮುಂದೆ ನಡೆಯುತ್ತಿದ್ದಾನೆ. ರಾಹುಲ್ ಆ ಬಾಲಕಿಯನ್ನ ತಡೆದು ಚಪ್ಪಲಿ ಬಿಚ್ಚಿಕೊಂಡಿರುವುದನ್ನ ತಿಳಿಸುತ್ತಾರೆ. ಇದರ ನಂತರ ರಾಹುಲ್ ಸ್ವತಃ ಚಪ್ಪಲಿ ತೊಡಿಸಲು ಸಹಕರಿಸುತ್ತಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Leader with the humane touch.
During the Bharat Jodo Padyatra, Sh. @RahulGandhi helps a little girl in wearing sandles. pic.twitter.com/NlvqfY6eOE
— Anshuman Sail (@AnshumanSail) September 18, 2022
ಕಾಂಗ್ರೆಸ್ ನ ‘ಭಾರತ್ ಜೋಡೋ ಯಾತ್ರೆ’ 150 ದಿನಗಳಲ್ಲಿ ಪೂರ್ಣಗೊಳ್ಳಲಿದ್ದು, 3,570 ಕಿ.ಮೀ. ಸೆಪ್ಟೆಂಬರ್ 7 ರಂದು ತಮಿಳುನಾಡಿನ ಕನ್ಯಾಕುಮಾರಿಯಿಂದ ಆರಂಭವಾದ ಪಾದಯಾತ್ರೆ ಜಮ್ಮು ಮತ್ತು ಕಾಶ್ಮೀರದಲ್ಲಿ ಕೊನೆಗೊಳ್ಳಲಿದೆ. ಸೆಪ್ಟೆಂಬರ್ 10 ರ ಸಂಜೆ ಕೇರಳವನ್ನು ಪ್ರವೇಶಿಸಿದ ಭಾರತ್ ಜೋಡೋ ಯಾತ್ರೆಯು ಅಕ್ಟೋಬರ್ 1 ರಂದು ಕರ್ನಾಟಕವನ್ನು ಪ್ರವೇಶಿಸಲಿದೆ.