ಕೊರೊನಾ | ವೈದ್ಯಕೀಯ ಸಲಹೆಗಾಗಿ +919983836838ಗೆ ಕರೆ ಮಾಡಿ : ರಾಹುಲ್

1 min read
rahul gandhi

ಕೊರೊನಾ | ವೈದ್ಯಕೀಯ ಸಲಹೆಗಾಗಿ +919983836838ಗೆ ಕರೆ ಮಾಡಿ : ರಾಹುಲ್ rahul-gandhi

ನವದೆಹಲಿ : ಕೊರೊನಾ ಎರಡನೇ ಅಲೆಗೆ ದೇಶದ ಮಂದಿ ತತ್ತರಿಸಿ ಹೋಗಿದ್ದು, ಜನರ ಬದುಕು ಬೀದಿಗೆ ಬಂದಿದೆ. ದೇಶದಲ್ಲಿ ಒಂದು 4 ಲಕ್ಷಕ್ಕೂ ಹೆಚ್ಚು ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, 3 ಸಾವಿರಕ್ಕೂ ಹೆಚ್ಚು ಮಂದಿ ಕೊನೆಯುಸಿರೆಳೆದಿದ್ದಾರೆ.

ಈ ಮಧ್ಯೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೋವಿಡ್19ರೊಂದಿಗೆ ಹೋರಾಡುವವರಿಗೆ ಸಹಾಯ ಮಾಡಲು ವೈದ್ಯಕೀಯ ಸಲಹಾ ಸಹಾಯವಾಣಿಯನ್ನು ಪ್ರಾರಂಭಿಸಿದ್ದಾರೆ.

rahul-gandhi

ಈ ಕುರಿತು ಟ್ವೀಟ್ ಮಾಡಿರುವ ಅವರು, ಭಾರತ ಒಟ್ಟಾಗಿ ನಿಂತು ನಮ್ಮ ಜನರಿಗೆ ಸಹಾಯ ಮಾಡಬೇಕಾಗಿದೆ. ನಾವು ಹಲೋ ಡಾಕ್ಟರ್ ಎನ್ನುವ ವೈದ್ಯಕೀಯ ಸಲಹಾ ಸಹಾಯವಾಣಿಯನ್ನು ಪ್ರಾರಂಭಿಸಿದ್ದೇವೆ. ದಯವಿಟ್ಟು ವೈದ್ಯಕೀಯ ಸಲಹೆಗಾಗಿ +919983836838ಗೆ ಕರೆ ಮಾಡಿ ಎಂದು ಮನವಿ ಮಾಡಿಕೊಂಡಿದ್ದಾರೆ.

ಅಲ್ಲದೆ ಕೊರೊನಾ ವಿರುದ್ಧದ ಯುದ್ಧದಲ್ಲಿ ಸೇರಲು ಮತ್ತು ವೈದ್ಯಕೀಯ ಸಲಹೆಯ ಅಗತ್ಯವಿರುವವರಿಗೆ ಸಹಾಯ ಮಾಡುವಂತೆ ವೈದ್ಯರು ಮತ್ತು ವೈದ್ಯಕೀಯ ವೃತ್ತಿಪರರಿಗೆ ಅವರು ಮನವಿ ಮಾಡಿಕೊಂಡಿದ್ದಾರೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd