ನವದೆಹಲಿ : ಕೇಂದ್ರ ಸರ್ಕಾರ ಉದ್ಯಮಿಗಳ ಬೃಹತ್ ಪ್ರಮಾಣದ ಸಾಲ ಮನ್ನಾ ಮಾಡಿದೆ ಎಂಬ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಹೇಳಿಕೆಗೆ ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್ ಪ್ರತಿಕ್ರಿಯೆ ನೀಡಿದ್ದು, ರಾಹುಲ್ ಗಾಂಧಿ ಚಿದಂಬರಂ ಅಂತಹವರಿಂದ ಟ್ಯೂಷನ್ ಪಡೆಯಲಿ ಎಂದು ಟೀಕಿಸಿದ್ದಾರೆ.
ಪ್ರಧಾನಿ ಮೋದಿ ಸರ್ಕಾರ 65 ಸಾವಿರ ಕೋಟಿ ರೂಪಾಯಿ ಸಾಲಮನ್ನಾ ಮಾಡಿದೆ ಎಂಬ ಹೇಳಿಕೆಯನ್ನು ರಾಹುಲ್ ಗಾಂಧಿ ನೀಡಿದ್ದರು. ಇದಕ್ಕೆ ವ್ಯಂಗ್ಯವಾಡಿರುವ ಪ್ರಕಾಶ್ ಜಾವ್ಡೇಕರ್, ಸಾಲಮನ್ನಾ ಬೇರೆ, ಲೆಕ್ಕದ ಪುಸ್ತಕದಿಂದ ಅದನ್ನು ತೆಗೆದುಹಾಕುವುದೇ ಬೇರೆ. ಇದನ್ನು ರಾಹುಲ್ ಗಾಂಧಿ ಅರ್ಥ ಮಾಡಿಕೊಳ್ಳಬೇಕಿದೆ. ಇಂತಹ ವಿಚಾರಗಳ ಕುರಿತಂತೆ ರಾಹುಲ್ ಗಾಂಧಿ ಚಿದಂಬರಂ ಅಂತಹವರಿಂದ ಟ್ಯೂಷನ್ ಪಡೆದರೆ ಒಳಿತು. ಈ ವಿಚಾರಗಳ ಕುರಿತು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಬೇಕಿದೆ ಎಂದು ಸಲಹೆ ನೀಡಿದ್ದಾರೆ. ಇನ್ನು ಲೆಕ್ಕದ ಪುಸ್ತಕದಿಂದ ತೆಗೆದುಹಾಕುವುದು ಎಂದರೆ ಅವರ ವಿರುದ್ಧ ಬ್ಯಾಂಕ್ ಗಳು ಕ್ರಮ ಕೈಗೊಳ್ಳುವುದಿಲ್ಲ ಎಂದು ಭಾವಿಸುವುದಲ್ಲ ಎಂದಿದ್ದಾರೆ.