ಸ್ವಜನ ಬಂಡವಾಳಶಾಹಿ’ಗಳಿಗಾಗಿ ಮೋದಿ ಹಣ ಸಂಪಾದನೆ : ರಾಹುಲ್
ನವದೆಹಲಿ : ದೆಹಲಿಯಲ್ಲಿ ರೈತರ ಪ್ರತಿಭಟನೆ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತೀವ್ರ ಆಕ್ರೋಶ ಹೊರಹಾಕಿದ್ದಾರೆ.
ನೂತನ ಕೃಷಿ ಕಾಯ್ದೆಗಳ ವಿರುದ್ಧ ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್ ನಿಯೋಗವು ರಾಷ್ಟ್ರಪತಿ ಭವನಕ್ಕೆ ಪ್ರತಿಭಟನಾ ಮೆರವಣಿಗೆ ಹೊರಟ್ಟಿತ್ತು. ಈ ವೇಳೆ ಕೈ ನಾಯಕಿ ಪ್ರಿಯಾಂಕಾ ಗಾಂಧಿ ಸೇರಿದಂತೆ ಪಕ್ಷದ ಮುಖಂಡರನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇತ್ತ ರಾಷ್ಟ್ರಪತಿ ಭವನಕ್ಕೆ ರಾಹುಲ್ ಗಾಂಧಿ ಸುದ್ದಿಗಾರರೊಂದಿಗೆ ಮಾತನಾಡಿ, ಈ ಕೃಷಿ ಕಾನೂನುಗಳು ರೈತ ವಿರೋಧಿಯಾಗಿದೆ. ರೈತರೇ ಇದರ ವಿರುದ್ಧವಾಗಿ ನಿಂತಿದ್ದಾರೆ.
ಇದರಲ್ಲಿ ನಿಮ್ಮ ಮಧ್ಯಸ್ಥಿಕೆ ಅವಶ್ಯಕ ಎಂದು ರಾಷ್ಟ್ರಪತಿ ಅವರಿಗೆ ನಾನು ಮನವರಿಕೆ ಮಾಡಿಸಿದ್ದೇನೆ. ಸರ್ಕಾರವು ಸಂಸತ್ತಿನ ಜಂಟಿ ಅಧಿವೇಶನ ಕರೆಯಬೇಕು ಮತ್ತು ಈ ಕಾನೂನುಗಳನ್ನು ಹಿಂಪಡೆಯಬೇಕು ಎಂದು ನಾನು ಪಿಎಂ ಮೋದಿಗೆ ಆಗ್ರಹಿಸುತ್ತೇನೆ ಎಂದು ತಿಳಿಸಿದ್ದಾರೆ.
ಪ್ರಾಥಮಿಕ ಆರೋಗ್ಯ ಕೇಂದ್ರಗಳ ಆಮೂಲಾಗ್ರ ಸುಧಾರಣೆ: ಡಾ.ಕೆ.ಸುಧಾಕರ್
ಇದೇ ವೇಳೆ ಪ್ರಧಾನಿ ವಿರುದ್ಧ ವಾಗ್ದಾಳಿ ನಡೆಸಿದ ರಾಹುಲ್, ನರೇಂದ್ರ ಮೋದಿಯವರು ಸ್ವಜನ ಬಂಡವಾಳಶಾಹಿಗಳಿಗಾಗಿ ಹಣ ಸಂಪಾದಿಸುತ್ತಿದ್ದಾರೆ.
ಮೋದಿ ವಿರುದ್ಧವಾಗಿ ಯಾರೇ ನಿಂತರೂ ಅವರನ್ನು ಭಯೋತ್ಪಾದಕರು ಎಂದು ಕರೆಯಲಾಗುತ್ತಿದೆ ಭಾರತದಲ್ಲಿ ಪ್ರಜಾಪ್ರಭುತ್ವ ಇಲ್ಲ. ಇದು ನಿಮ್ಮ ಕಲ್ಪನೆಯಲ್ಲಿರಬಹುದು, ಆದರೆ ವಾಸ್ತವದಲ್ಲಿ ಅಲ್ಲವೆಂದು ಬೇಸರ ವ್ಯಕ್ತಪಡಿಸಿದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel









