ಗಂಟೆ ಬಾರಿಸು, ಲಾಕ್ ಡೌನ್ ಮಾಡು : ಕೇಂದ್ರದ ಸ್ಟ್ರಾಟಜಿಗೆ ರಾಗಾ ವ್ಯಂಗ್ಯ

1 min read
rahul gandhi

ಗಂಟೆ ಬಾರಿಸು, ಲಾಕ್ ಡೌನ್ ಮಾಡು : ಕೇಂದ್ರದ ಸ್ಟ್ರಾಟಜಿಗೆ ರಾಗಾ ವ್ಯಂಗ್ಯ

ನವದೆಹಲಿ : ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಕಳೆದ ದಿನಗಳಿಂದ ಭಾರತದಲ್ಲಿ 2 ಲಕ್ಷ ಕೊರೊನಾ ಪ್ರಕರಣಗಳು ವರದಿಯಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಈ ಮಧ್ಯೆ ಕೊರೊನಾ ನಿಯಂತ್ರಿಸುವಲ್ಲಿ ಕೇಂದ್ರ ಸರ್ಕಾರ ರೂಪಿಸಿದ ಕಾರ್ಯತಂತ್ರಗಳ ಬಗ್ಗೆ ರಾಹುಲ್ ಗಾಂಧಿ ವ್ಯಂಗ್ಯವಾಡಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, ಮನಬಂದಂತೆ ಲಾಕ್ ಡೌನ್ ಹೇರುವುದು, ಗಂಟೆ ಬಾರಿಸುವುದು ಮತ್ತು ದೇವರನ್ನು ಪ್ರಾರ್ಥಿಸಿ ಹಾಡುವುದು ಕೋವಿಡ್ ನಿಯಂತ್ರಣಕ್ಕೆ ಸರ್ಕಾರ ತೆಗೆದುಕೊಂಡ ಕಾರ್ಯತಂತ್ರಗಳಾಗಿವೆ ಎಂದು ಟೀಕಿಸಿದ್ದಾರೆ.

rahul-gandhi

ಅಲ್ಲದೆ ಆಸ್ಪತ್ರೆಯಲ್ಲಿ ಯಾವುದೇ ಪರೀಕ್ಷೆಗಳಿಲ್ಲ, ಹಾಸಿಗೆಗಳಿಲ್ಲ, ಯಾವುದೇ ವೆಂಟಿಲೇಟರ್‍ಗಳು ಇಲ್ಲ, ಲಸಿಕೆ ಕೂಡ ಇಲ್ಲ ಆದರೂ ಕೊರೊನಾ ಲಸಿಕಾ ಉತ್ಸವ ನಡೆಸಲಾಗುತ್ತಿದೆ ಎಂದು ವ್ಯಂಗ್ಯವಾಡಿದ್ದಾರೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd