Rahul Gandhi | ಸುಳ್ಳು ಪಾಪ, ಸತ್ಯ ತಪಸ್ಸು : ರಾಗಾ ಟ್ವೀಟ್ ಗೆ ಬಿಜೆಪಿ ತಿರುಗೇಟು
ಬೆಂಗಳೂರು : ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು, ಮಂಗಳವಾರ 2ನೇ ದಿನದ ವಿಚಾರಣೆಗೆ ಜಾರಿ ನಿರ್ದೇಶನಾಲಯದ ಮುಂದೆ ಹಾಜರಾಗಿದ್ದು, ವಿಚಾರಣೆ ಮುಂದುವರೆದಿದೆ.

ಈ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಟ್ವಿಟ್ಟರ್ ನಲ್ಲಿ “ ಸುಳ್ಳು ಪಾಪ, ಸತ್ಯ ತಪಸ್ಸು ಎಂದು ಬರೆದುಕೊಂಡಿದ್ದರು. ಇದಕ್ಕೆ ರಾಜ್ಯ ಬಿಜೆಪಿ ತಿರುಗೇಟು ನೀಡಿದ್ದು, ಸುಳ್ಳು ಪಾಪ, ಸತ್ಯ ತಪಸ್ಸು” ಎಂದು ಟ್ವೀಟ್ ಮಾಡಿರುವ ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ಸಿಗರ ವಂಶವಾಹಿನಿಯಲ್ಲೇ ಸುಳ್ಳು ಪ್ರವಹಿಸುತ್ತಿದೆ. ಸತ್ಯದ ಸಮಾಧಿ ಮಾಡಿ, ಸುಳ್ಳಿನ ಅರಮನೆ ಕಟ್ಟದೇ ಇದ್ದಿದ್ದರೆ ಕಾಂಗ್ರೆಸ್ ಇಷ್ಟು ವರ್ಷ ದೇಶದಲ್ಲಿ ಆಡಳಿತ ನಡೆಸಲು ಸಾಧ್ಯವೇ ಇರಲಿಲ್ಲ.
ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಕಾಂಗ್ರೆಸ್ ಆರಂಭದಿಂದಲೂ ಸುಳ್ಳನ್ನೇ ಹೇಳುತ್ತಾ ಬರುತ್ತಿದೆ.ಕಾಂಗ್ರೆಸ್ ಸತ್ಯ ಹೇಳಿದ್ದರೆ, ಪ್ರಕರಣ ವಜಾಗೊಳಿಸುವಂತೆ ಕಾಂಗ್ರೆಸ್ ಪಕ್ಷದ ಘಟಾನುಘಟಿ ನ್ಯಾಯವಾದಿಗಳು ಮಾಡಿದ ವಾದವನ್ನು ನ್ಯಾಯಾಲಯ ವಜಾಗೊಳಿಸುತ್ತಿತ್ತೇ? ಕಾಂಗ್ರೆಸ್ ಪೋಣಿಸಿದ ಸುಳ್ಳಿನ ಮಣಿ ಭಗ್ನವಾಗಿದೆ.
ಸತ್ಯಮೇವ ಜಯತೆ ಎಂದು ಹೋರಾಟಕ್ಕೆ ಇಳಿದವರು ನ್ಯಾಷನಲ್ ಹೆರಾಲ್ಡ್ ಪ್ರಕರಣ ಈಗಾಗಲೇ ವಜಾ ಆಗಿದೆ, ಇದು ರಾಜಕೀಯ ಹಿತಾಸಕ್ತಿಯಿಂದ ಕೂಡಿದೆ, ವಿಪಕ್ಷಗಳನ್ನು ಹತ್ತಿಕ್ಕುವ ಯತ್ನ ಎಂದೆಲ್ಲ ಆರೋಪಿಸುತ್ತಿದ್ದಾರೆ.
ಆದರೆ ಈ ಪ್ರಕರಣ ನ್ಯಾಯಾಲಯದ ದಾಖಲಾದ ದೂರಿನ ಅನ್ವಯ ಇನ್ನೂ ನಡೆಯುತ್ತಿದೆ, ಇದು ವಾಸ್ತವ.#FakeGandhisBachaoToolKit
— BJP Karnataka (@BJP4Karnataka) June 14, 2022
ಸತ್ಯಮೇವ ಜಯತೆ ಎಂದು ಹೋರಾಟಕ್ಕೆ ಇಳಿದವರು ನ್ಯಾಷನಲ್ ಹೆರಾಲ್ಡ್ ಪ್ರಕರಣ ಈಗಾಗಲೇ ವಜಾ ಆಗಿದೆ, ಇದು ರಾಜಕೀಯ ಹಿತಾಸಕ್ತಿಯಿಂದ ಕೂಡಿದೆ, ವಿಪಕ್ಷಗಳನ್ನು ಹತ್ತಿಕ್ಕುವ ಯತ್ನ ಎಂದೆಲ್ಲ ಆರೋಪಿಸುತ್ತಿದ್ದಾರೆ. ಆದರೆ ಈ ಪ್ರಕರಣ ನ್ಯಾಯಾಲಯದ ದಾಖಲಾದ ದೂರಿನ ಅನ್ವಯ ಇನ್ನೂ ನಡೆಯುತ್ತಿದೆ, ಇದು ವಾಸ್ತವ ಎಂದು ಬಿಜೆಪಿ ಕುಟುಕಿದೆ.