ರಾಯಚೂರು ಜಿಲ್ಲೆಯಲ್ಲಿ 1,76,555 ಜನರಿಗೆ ಕೊರೊನಾ ಲಸಿಕೆ

1 min read
venkatesh kumar

ರಾಯಚೂರು ಜಿಲ್ಲೆಯಲ್ಲಿ 1,76,555 ಜನರಿಗೆ ಕೊರೊನಾ ಲಸಿಕೆ

ರಾಯಚೂರು : ಜಿಲ್ಲೆಯಲ್ಲಿ ಒಟ್ಟು 1,76,555 ಜನರಿಗೆ ಕೊರೊನಾ ಲಸಿಕೆ ಹಾಕಲಾಗಿದೆ. ಅದರಲ್ಲಿ ಮುಂಚೂಣಿಯ ಕಾರ್ಯಕರ್ತರೆಂದು ಕರೆಸಿಕೊಳ್ಳುವ ಆರೋಗ್ಯ, ಪೊಲೀಸ್, ಕಂದಾಯ ಇಲಾಖೆಗಳು ಸೇರಿದಂತೆ ಇತರೇ ಮುಂಚೂಣಿಯ ಕೆಲಸಗಾರರಲ್ಲಿ ಶೇಕಡಾ 75% ಜನರಿಗೆ ಲಸಿಕೆ ಹಾಕಲಾಗಿದೆ ಎಂದು ಜಿಲ್ಲಾಧಿಕಾರಿ ವೆಂಕಟೇಶ ಕುಮಾರ್ ತಿಳಿಸಿದರು.

ಗುರುವಾರ ಮಾದ್ಯಮಗೊಷ್ಟಿಯನ್ನು ಉದ್ದೇಶಿಸಿ ಮಾತನಾಡಿ. ಜಿಲ್ಲೆಯಲ್ಲಿ ಆರೋಗ್ಯ, ಪೊಲೀಸ್, ಕಂದಾಯ ಇಲಾಖೆಗಳು ಸೇರಿದಂತೆ ಫರ್ಂಟಲೈನ್ ವಕ್ರ್ಸಗೆ 75 % ಕರೋನಾ ಲಸಿಕೆ ಹಾಕಲಾಗಿದೆ. ಅದರಲ್ಲಿ 66 % ಜನರಿಗೆ ಅದಾಗಲೇ 2ನೇ ಡೋಸ್ ಕೂಡ ಕೊಡಲಾಗಿದೆ.

venkatesh kumar

ಒಟ್ಟಾರೆ 1,76,655 ಜನರಿಗೆ ಜಿಲ್ಲಾಂದ್ಯಂತ ಲಸಿಕೆ ಹಾಕಲಾಗಿದೆ. ಇದರಲ್ಲಿ45,790 ಜನ ಈಗಾಗಲೇ 2ನೇ ಡೋಸ್ ಪಡೆದಿದ್ದಾರೆ. ಕೋವ್ಯಾಕ್ಸಿನ್ 41,700 ಜನ, 6462 2ನೇ ಡೋಸ್. ಕೊವಿಶಿಲ್ಡ್ ನಲ್ಲಿ 134955 ಜನ ಮೊದಲನೆ ಲಸಿಕೆ, 39328 2ನೇ ಲಸಿಕೆ ತೆಗೆದುಕೊಂಡಿದ್ದಾರೆ. ಕೊವ್ಯಾಕ್ಸಿನ 40 ಲಸಿಕೆ, ಕೊವಿಸಿಲ್ಡ್ 2800 ಲಸಿಕೆಗಳ ಲಭ್ಯತೆ ಇವೆ.

ನಾಳೆಯಿಂದ 18-44ಕ್ಕೆ ವಯಸ್ಸಿನವರಿಗೆ ಲಸಿಕೆ ಹಾಕುವದನ್ನ ನಿಲ್ಲಿಸಲು ಸರ್ಕಾರದಿಂದ ಆದೇಶವಾಗಿದೆ. ಹಾಗಾಗಿ ಈಗ ನಾವು 2ನೇ ಡೋಸ್ ಪಡಿಯುವರಿಗೆ ಮೊದಲು ಆದ್ಯತೆಯನ್ನ ನೀಡಿ ಲಸಿಕೆ ನೀಡಲು ಉದ್ದೇಶಿಸಲಾಗಿದ. ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಯಲ್ಲಿ 1944 ರೆಮಿಡಿಸಿವಿರ್ ಇಂಜೆಕ್ಸನ್ ಲಬ್ಯವಿದೆ. ಅವುಗಳನ್ನ ರೋಗಿಗಳ ಅವಶ್ಯಕತೆಯನ್ನ ಗಮನಿಸಿ ನೀಡಲಾಗುತ್ತಿದೆ ಎಂದು ತಿಳಿಸಿದರು.

 

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd