Railway Recruitment 2022 : SSLC ಪಾಸ್ ಆದವರಿಗೆ ಉದ್ಯೋಗವಕಾಶ…
ರೈಲ್ವೆ ಇಲಾಖೆಯಲ್ಲಿ ಕೆಲಸ ಬಯಸುತ್ತಿರುವವರಿಗೆ ಇಲ್ಲಿದೆ ಸುವರ್ಣವಕಾಶ. ಕೇಂದ್ರ ರೈಲ್ವೆಯಲ್ಲಿ 2422 ಹುದ್ದೆಗಳಿಗೆ ನೇಮಕಾತಿಯನ್ನ ಕರೆಯಲಾಗಿದೆ. ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಅಧಿಕೃತ ವೆಬ್ ಸೈಟ್ rrccr.com ಗೆ ಭೇಟಿ ನೀಡಿ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜನವರಿ 15- 2023
ಅಪ್ರೆಂಟಿಸ್‌ಗಳ ಆಧಾರದ ಮೇಲೆ ಸಾವಿರಾರು ಹುದ್ದೆಗಳನ್ನ ಭರ್ತಿ ಮಾಡಲಾಗುತ್ತಿದೆ. ಅರ್ಜಿ ಸಲ್ಲಿಸ ಬಯಸುವ ಅಭ್ಯರ್ಥಿಯು ಕನಿಷ್ಟ 55 ಶೇಕಡಾ ಅಂಕಗಳೊಂದಿಗೆ ಮಾನ್ಯತೆ ಪಡೆದ ಮಂಡಳಿ ಅಥವಾ ಸಂಸ್ಥೆಯಿಂದ 10 ನೇ ತರಗತಿಯನ್ನು ಉತ್ತೀರ್ಣರಾಗಿರಬೇಕು ಇಲ್ಲವೇ ತತ್ಸಮಾನ ಕೋರ್ಸ್ ಪೂರ್ಣಗೊಳಿಸಿರಬೇಕು .
ಕೇಂದ್ರ ರೈಲ್ವೇ ನೇಮಕಾತಿಯ 2422 ಹುದ್ದೆಯ ವಿವರಗಳು
ಮುಂಬೈ ಕ್ಲಸ್ಟರ್: 1659 ಪೋಸ್ಟ್‌ಗಳು
ಭೂಸಾವಲ್ ಕ್ಲಸ್ಟರ್: 418 ಪೋಸ್ಟ್‌ಗಳು
ಪುಣೆ ಕ್ಲಸ್ಟರ್: 152 ಹುದ್ದೆಗಳು
ನಾಗ್ಪುರ ಕ್ಲಸ್ಟರ್: 114 ಹುದ್ದೆಗಳು
ಸೊಲ್ಲಾಪುರ ಕ್ಲಸ್ಟರ್: 79 ಹುದ್ದೆಗಳು
100 ರೂ. ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ. ಎಸ್‌ಸಿ, ಎಸ್‌ಟಿ ಮತ್ತು ಪಿಡಬ್ಲ್ಯು ಅಭ್ಯರ್ಥಿಗಳು ಅರ್ಜಿ ಶುಲ್ಕ ಪಾವತಿಸಬೇಕಾಗಿಲ್ಲ.
ಸೆಂಟ್ರಲ್ ರೈಲ್ವೆ ಕೆಲಸಕ್ಕೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳ ವಯಸ್ಸು ಡಿಸೆಂಬರ್ 12, 2022ಕ್ಕೆ ಕನಿಷ್ಠ 15 ವರ್ಷ ಮತ್ತು ಗರಿಷ್ಠ 24 ವರ್ಷ ಮೀರಿರಬಾರದು.
Railway Recruitment 2022 : Job opportunity for SSLC pass…








